• ಹೋಂ
 • »
 • ನ್ಯೂಸ್
 • »
 • Crime
 • »
 • Crime News: ಇತ್ತ ಹೆಂಡತಿ, ಮೂವರು ಹೆಣ್ಣು ಮಕ್ಕಳಿಗೆ ಬೆಂಕಿ ಹಚ್ಚಿದ ಗಂಡ; ಅತ್ತ ಕಲ್ಲು ಎತ್ತಿಹಾಕಿ ಅಕ್ಕ-ತಂಗಿ ಬರ್ಬರ ಹತ್ಯೆ

Crime News: ಇತ್ತ ಹೆಂಡತಿ, ಮೂವರು ಹೆಣ್ಣು ಮಕ್ಕಳಿಗೆ ಬೆಂಕಿ ಹಚ್ಚಿದ ಗಂಡ; ಅತ್ತ ಕಲ್ಲು ಎತ್ತಿಹಾಕಿ ಅಕ್ಕ-ತಂಗಿ ಬರ್ಬರ ಹತ್ಯೆ

ಬಾಗಲಕೋಟೆಯಲ್ಲಿ ಸಹೋದರಿಯರ ಕೊಲೆ

ಬಾಗಲಕೋಟೆಯಲ್ಲಿ ಸಹೋದರಿಯರ ಕೊಲೆ

ಮನೆಗೆ ಬರಬೇಡ ಎಂದ ಬಾವನ ಸಹೋದರಿಯರನ್ನು (Sisters ) ವ್ಯಕ್ತಿಯೋರ್ವ ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ಬಾಗಲಕೋಟೆ (Bagalakote) ಜಿಲ್ಲೆ ಬನಹಟ್ಟಿ ನಗರ ಶನಿವಾರಪೇಟೆಯಲ್ಲಿ (Shanivara Pete) ನಡೆದಿದೆ.

 • News18 Kannada
 • 5-MIN READ
 • Last Updated :
 • Tumkur, India
 • Share this:

ತುಮಕೂರು: ಅನೈತಿಕ ಸಂಬಂಧ (Illegal Relationship) ಅನುಮಾನ ಹಿನ್ನೆಲೆ ಆಕ್ರೋಶಗೊಂಡ ಪತಿಯೋರ್ವ ಹೆಂಡತಿ (Wife) ಮಕ್ಕಳಿಗೆ ಬೆಂಕಿ ಹಚ್ಚಿರುವ ದಾರುಣ ಘಟನೆ ತುಮಕೂರು (Tumakuru) ಜಿಲ್ಲೆ‌ ಮಧುಗಿರಿ ತಾಲ್ಲೂಕಿನ‌ ಮುದ್ದನೇರಳೆಕೆರೆ ಗ್ರಾಮದಲ್ಲಿ ನಡೆದಿದೆ. ಹೆಂಡತಿ, ಮಕ್ಕಳ (Children) ಮೇಲೆ ಪೆಟ್ರೋಲ್ (Petrol) ಸುರಿದ ಗಂಡ (Husband), ಅವರ ಜೀವ ಉಳಿಯಬಾರದು ಎಂದು ಹೇಳಿ ಮನೆಯ (Home) ರೂಮ್​​ಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಮೃತ ಮಹಿಳೆಯನ್ನು ಶಾಂತಮ್ಮ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ರಾಮಾಂಜಿ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ. ಇನ್ನು ಘಟನೆಯಲ್ಲಿ ಮೂವರು ಹೆಣ್ಣು ಮಕ್ಕಳಾದ ಅಕ್ಷಯ (17), ಅಕ್ಷಿತಾ (13) ಅಮೃತಾ (10 ) ಗಂಭೀರವಾಗಿ ಗಾಯಗೊಂಡಿದ್ದಾರೆ.


ಇದನ್ನೂ ಓದಿ: SP Arun Rangarajan: ಕಾನ್ಸ್‌ಟೇಬಲ್ ಹೆಂಡ್ತಿ ಜೊತೆ ಎಸ್‌ಪಿ ಲವ್ವಿಡವ್ವಿ? ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದು ಕೊಲೆ ಬೆದರಿಕೆ ಹಾಕಿದ್ರಾ ಅರುಣ್ ರಂಗರಾಜನ್?


ಸದ್ಯ ಗಾಯಗೊಂಡಿರುವ ಮಕ್ಕಳನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡಿರುವ ಮಿಡಿಗೇಶಿ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿ ರಾಮಾಂಜಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಹೋದರಿಯ ಬರ್ಬರ ಕೊಲೆ


ಮನೆಗೆ ಬರಬೇಡ ಎಂದ ಬಾವನ ಸಹೋದರಿಯರನ್ನು (Sisters ) ವ್ಯಕ್ತಿಯೋರ್ವ ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ಬಾಗಲಕೋಟೆ (Bagalakote) ಜಿಲ್ಲೆ ಬನಹಟ್ಟಿ ನಗರ ಶನಿವಾರಪೇಟೆಯಲ್ಲಿ (Shanivara Pete) ನಡೆದಿದೆ. ಇಬ್ಬರು ಅಕ್ಕ ತಂಗಿ ಇಬ್ಬರನ್ನು ಕೊಂದ ವ್ಯಕ್ತಿಯನ್ನು ಕಾಡಪ್ಪ ಭುಜಂಗ ಎಂದು ಗುರುತಿಸಲಾಗಿದೆ. ಬೋರವ್ವ ಮಿರ್ಜಿ (40), ಯಲ್ಲವ್ವ ಪೂಜಾರ (48) ಕೊಲೆಯಾದ ದುರ್ದೈವಿಗಳಾಗಿದ್ದಾರೆ.


ಏನಿದು ಪ್ರಕರಣ?


ಆರೋಪಿ ಕಾಡಪ್ಪ ಭುಜಂಗ ಅಕ್ಕನ ಮನೆಗೆ (Home) ಬಂದಿದ್ದ ಸಂದರ್ಭದಲ್ಲಿ ಬಾವನ ಸಹೋದರಿಯರು ಇಲ್ಲಿಗೆ ಬರಬೇಡ ಎಂದು ತಕರಾರು ಮಾಡಿದ್ದರಂತೆ. ಇಷ್ಟಕ್ಕೆ ಶುರುವಾದ ಜಗಳ (Fight) ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು (Police) ಭೇಟಿ ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಬನಹಟ್ಟಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆ ಕಲ್ಲಿನಿಂದ (Stone) ಜಜ್ಜಿ ಅಕ್ಕ-ತಂಗಿಯನ್ನು ಆರೋಪಿ ಕೊಲೆ ಮಾಡಿದ್ದು, ಕೊಲೆ ಕಂಡ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.


ಇದನ್ನೂ ಓದಿ: Bengaluru: BMTC ಕಂಡಕ್ಟರ್ ಸಜೀವ ದಹನ ಕೇಸ್​ಗೆ ಮತ್ತೆ ಟ್ವಿಸ್ಟ್​; ಡ್ರೈವರ್​ ಕೈವಾಡ ಶಂಕೆ! ತನಿಖೆ ಚುರುಕುಗೊಳಿಸಿದ ಪೊಲೀಸರು


ಇತ್ತ ಹೆಂಡತಿ, ಮೂವರು ಹೆಣ್ಣು ಮಕ್ಕಳಿಗೆ ಬೆಂಕಿ ಹಚ್ಚಿದ ಗಂಡ; ಅತ್ತ ಕಲ್ಲು ಎತ್ತಿಹಾಕಿ ಅಕ್ಕ-ತಂಗಿ ಬರ್ಬರ ಹತ್ಯೆ (ಪ್ರಾತಿನಿಧಿಕ ಚಿತ್ರ)


SP ವಿರುದ್ಧ ಅಕ್ರಮ ಸಂಬಂಧ ಆರೋಪ


ಕಲಬುರಗಿ ISD ವಿಭಾಗದ SP ಅಧಿಕಾರಿ ಅರುಣ್ ರಂಗರಾಜನ್ (SP Arun Rangarajan) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಹಿಳಾ ASI ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಮಹಿಳಾ ASI ಪತಿ, ಹೆಡ್ ಕಾನ್ಸ್‌ಟೇಬಲ್‌ (Head Constable) ಕಂಟೆಪ್ಪ ಆರೋಪಿಸಿದ್ದಾರೆ.


ಲೇಡಿ ASI ಹಾಗೂ ಅರುಣ್ ರಂಗರಾಜನ್ ಮನೆಯಲ್ಲೇ ಸಿಕ್ಕಿಬಿದ್ದಿದ್ದರಂತೆ. ಅದನ್ನು ನೋಡಿದ ಕಂಟೆಪ್ಪನನ್ನು ಕೊಲ್ತೀವಿ ಅಂತ ಹೇಳಿದ್ದಾರೆ ಎಂದು ಕಂಟೆಪ್ಪ ದೂರು ನೀಡಿದ್ದಾರೆ. ಆದರೆ ಹೆಡ್‌ಕಾನ್ಸ್‌ಟೇಬಲ್ ಆರೋಪವನ್ನ IPS ಅಧಿಕಾರಿ ಅಲ್ಲಗಳೆದಿದ್ದಾರೆ. ನನ್ನ ಮನೆಯಲ್ಲಿ ನೂರು ಜನ ಇರ್ತಾರೆ, ಹೋಗ್ತಾರೆ ಎಂದು ಅರುಣ್ ರಂಗರಾಜನ್ ಹೇಳಿದ್ದಾರೆ.

Published by:Sumanth SN
First published: