• ಹೋಂ
  • »
  • ನ್ಯೂಸ್
  • »
  • Crime
  • »
  • Bengaluru: ಹೆಂಡತಿಯನ್ನು ಕೊಂದು ಕೋಲ್ಕತ್ತಾಗೆ ಪತಿ ಎಸ್ಕೇಪ್​​; ಸಿನಿಮೀಯ ರೀತಿಯಲ್ಲಿ ಆರೋಪಿ ಅರೆಸ್ಟ್​

Bengaluru: ಹೆಂಡತಿಯನ್ನು ಕೊಂದು ಕೋಲ್ಕತ್ತಾಗೆ ಪತಿ ಎಸ್ಕೇಪ್​​; ಸಿನಿಮೀಯ ರೀತಿಯಲ್ಲಿ ಆರೋಪಿ ಅರೆಸ್ಟ್​

ಕೊಲೆಯಾದ ಪತ್ನಿ ಮೋನಿಷಾ/ ಆರೋಪಿ ಪತಿ ಶೇಕ್ ಮಜೀದ್ ಅಲಿ

ಕೊಲೆಯಾದ ಪತ್ನಿ ಮೋನಿಷಾ/ ಆರೋಪಿ ಪತಿ ಶೇಕ್ ಮಜೀದ್ ಅಲಿ

ಬೆಂಗಳೂರಿಗೆ ಬಂದ ಬಳಿಕ ಆರೋಪಿ ಶೇಕ್​ ಮಜೀದ್ ಅಲಿ ಪತ್ನಿಯ ಶೀಲ ಶಂಕಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಘಟನೆ ನಡೆದ ಫೆಬ್ರವರಿ 5ರಂದು ಕೂಡ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಈ ವೇಳೆ ಆರೋಪಿ ಪತ್ನಿಯ ಕುತ್ತಿಗೆಗೆ ಟವಲ್​​ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.

  • Share this:

ಬೆಂಗಳೂರು: ರಾಜ್ಯ ರಾಜಧಾನಿ (Capital City ) ಬೆಂಗಳೂರಿನ (Bengaluru) ವರ್ತೂರಿಯಲ್ಲಿ (Varthur) ಕೊಲೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯನ್ನು (Women) 30 ವರ್ಷದ ಮೋನಿಷಾ ಎಂದು ಗುರುತಿಸಲಾಗಿದೆ. ಪ್ರಕರಣ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು (Police) ರೋಚಕ ಕಾರ್ಯಾಚರಣೆ ನಡೆಸಿ ಕೋಲ್ಕತ್ತಾದಿಂದ (Kolkata) ಸುಮಾರು 150 ಕಿಲೋ ಮೀಟರ್ ದೂರದ ಹಳ್ಳಿಯೊಂದರಲ್ಲಿ ಆರೋಪಿಯನ್ನು (Accused) ಬಂಧನ ಮಾಡಿದ್ದಾರೆ.


ಏನಿದು ಪ್ರಕರಣ?


ಫೆಬ್ರವರಿ 7ರಂದು ಬೆಂಗಳೂರಿನ ವರ್ತೂರಿನ ಪಂಚಮುಖಿ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಮೋನಿಷಾ ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿ ಮಹಿಳೆಯ ಮೃತದೇಹ ಕಂಡು ಬಂದಿತ್ತು. ಕೂಡಲೇ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ ಪೊಲೀಸರು ಕೊಲೆ ಮಾಡಿ ಎಸ್ಕೇಪ್​ ಹಾಕಿದ್ದ ಹಂತಕನ ಬೆನ್ನು ಬಿದ್ದಿದ್ದರು.


ಮೃತದೇಹ ಪತ್ತೆಯಾದ ಮನೆ


ಇದನ್ನೂ ಓದಿ: Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!


ಆರೋಪಿಗೂ ಮುನ್ನವೇ ಕೋಲ್ಕತ್ತಾಗೆ ತಲುಪಿದ್ದ ಪೊಲೀಸರು


ಹಂತಕನ ಬಂಧನಕ್ಕೆ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ಮಹಿಳೆಯನ್ನು ಕೊಲೆಗೈದು ಎಸ್ಕೇಪ್​ ಆದ ಆರೋಪಿ ಆಕೆಯ ಪತಿ ಶೇಕ್​ ಮಜೀದ್ ಅಲಿ ಎಂಬ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಆತನ ಬೆನ್ನುಬಿದ್ದ ಪೊಲೀಸರಿಗೆ ಆತ ರಸ್ತೆ ಮಾರ್ಗದ ಮೂಲಕ ಕೋಲ್ಕತ್ತಾ ಪ್ರಯಾಣ ಬೆಳೆಸಿದ್ದ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಬೆಂಗಳೂರಿನ ವರ್ತೂರು ಪೊಲೀಸರ ತಂಡವೊಂದು ವಿಮಾನ ಮೂಲಕ ಕೋಲ್ಕತ್ತಾಗೆ ತೆರಳಿ ಆರೋಪಿ, ತನ್ನ ಸ್ವಗ್ರಾಮ ತಲುಪುವ ಮುನ್ನವೇ ಪೊಲೀಸರು ಗ್ರಾಮವನ್ನು ತಲುಪಿಸಿದ್ದರು. ಅಲ್ಲದೆ ಆರೋಪಿ ಗ್ರಾಮಕ್ಕೆ ಆಗಮಿಸಿದ ಕೂಡಲೇ ಆತನನ್ನು ಬಂಧನ ಮಾಡಿ ಮತ್ತೆ ಬೆಂಗಳೂರಿಗೆ ಕರೆತಂದಿದ್ದಾರೆ.


ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದ ಪತಿ


ಅಂದಹಾಗೆ, ಕೋಲ್ಕತ್ತಾ ಮೂಲದ ದಂಪತಿ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇಬ್ಬರಿಗೂ ಮದುವೆಯಾಗಿ 10 ವರ್ಷಗಳಾಗಿದ್ದು, ದಂಪತಿಗೆ ಒಂದು ಮಗು ಕೂಡ ಇದೆ. ಮಗುವನ್ನು ಗ್ರಾಮದಲ್ಲೇ ಬಿಟ್ಟು ದಂಪತಿಗಳು ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿಗೆ ಬಂದ ಬಳಿಕ ಆರೋಪಿ ಶೇಕ್​ ಮಜೀದ್ ಅಲಿ ಪತ್ನಿಯ ಶೀಲ ಶಂಕಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಘಟನೆ ನಡೆದ ಫೆಬ್ರವರಿ 5ರಂದು ಕೂಡ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಈ ವೇಳೆ ಆರೋಪಿ ಪತ್ನಿಯ ಕುತ್ತಿಗೆಗೆ ಟವಲ್​​ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ರಸ್ತೆ ಮಾರ್ಗದ ಮೂಲಕ ಸ್ವಗ್ರಾಮಕ್ಕೆ ತೆರಳಲು ನಿರ್ಧರಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದ.
ಇದನ್ನೂ ಓದಿ: Bengaluru: ಲಿವ್ ಇನ್ ಲೇಡಿ ಮರ್ಡರ್ ಕೇಸ್‌ಗೆ ಟ್ವಿಸ್ಟ್, ಜೊತೆಗಿದ್ದವನಿಂದಲೇ ಬರ್ಬರ ಹತ್ಯೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!


‘ಭೀಮಾತೀರ’ದಲ್ಲಿ ಆರದ ಕಿಡಿ!


ವಿಜಯಪುರ: ದಶಕಗಳ ಕಾಲ ಸದ್ದು ಮಾಡಿದ್ದ ಭೀಮಾತೀರದ (Bheema Theera ) ಹಂತಕರ ಕುಟುಂಬಗಳ ನಡುವೆ ಎಡಿಜಿಪಿ ಅಲೋಕ್‌ಕುಮಾರ (ADGP Alok Kumar) ರಾಜಿ ಸಂಧಾನ ಮಾಡಿಸಿದ್ದಾರೆ. ಸಂಧಾನ ಯಶಸ್ವಿಯೂ ಆಗಿದೆ. ಆದರೆ, ಮಲ್ಲಿಕಾರ್ಜುನ ಚಡಚಣ (Mallikarjun Chadchan) ಪತ್ನಿ ವಿಮಲಾಬಾಯಿ, ರಾಜಿ ಸಂಧಾನದ ವಿರುದ್ಧ ಕಿಡಿಕಾರಿದ್ದಾರೆ.


ನನ್ನ ಮೂರು ಮಕ್ಕಳನ್ನ ಮಹಾದೇವ ಸಾಹುಕಾರ್ ಕಡೆಯವರು ಮುಗಿಸಿದ್ದಾರೆ. ಮಹಾದೇವ ಬೈರಗೊಂಡನ ಬಳಿ ಹಣ ಇದೆ. ಏನ್ ಬೇಕಾದರೂ ಮಾಡಿಸುತ್ತಾನೆ. ಅವನನ್ನ ಹೊಡೆಯಲು ನಮ್ಮ ಕಡೆ ಯಾರು ಇಲ್ಲ. ಮಹಾದೇವ ಸಾಹುಕಾರ್, ಹಣಮಂತ ಪೂಜಾರಿ ಮುಖ ನೋಡೋಕೆ‌ ಇಷ್ಟ ಇಲ್ಲ ಎಂದು ವಿಮಲಾಬಾಯಿ ಕಿಡಿಕಾರಿದ್ದಾರೆ.

Published by:Sumanth SN
First published: