• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿ ವಾಟರ್​​ ಟ್ಯಾಂಕ್​​​ಗೆ ಹಾಕಿದ್ದ ಪತಿ; ಶಾಕಿಂಗ್​​ ಕೃತ್ಯ ಬಯಲಾಗಿದ್ದೆ ರೋಚಕ!

Crime News: ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿ ವಾಟರ್​​ ಟ್ಯಾಂಕ್​​​ಗೆ ಹಾಕಿದ್ದ ಪತಿ; ಶಾಕಿಂಗ್​​ ಕೃತ್ಯ ಬಯಲಾಗಿದ್ದೆ ರೋಚಕ!

ಆರೋಪಿ ಪತಿ ಪವನ್ ಠಾಕೂರ್, ಪತ್ನಿ ಸತಿ ಸಾಹು

ಆರೋಪಿ ಪತಿ ಪವನ್ ಠಾಕೂರ್, ಪತ್ನಿ ಸತಿ ಸಾಹು

ಕೊಲೆಯಾಗಿ ಎರಡು ತಿಂಗಳಾದರೂ ಕುಟುಂಬಸ್ಥರು ಸೇರಿದಂತೆ ಯಾರಿಗೂ ಅನುಮಾನಬಾರದಂತೆ ಪವನ್​ ನೋಡಿಕೊಂಡಿದ್ದನಂತೆ. ಆದರೆ ಇತ್ತೀಚೆಗೆ ಆತ ನಕಲಿ ನೋಟು ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

  • News18 Kannada
  • 2-MIN READ
  • Last Updated :
  • New Delhi, India
  • Share this:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶ್ರದ್ಧಾ ವಾಲ್ಕರ್ ದಾರುಣ ಕೊಲೆ (Murder of Shraddha Walkar) ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಪ್ರೀತಿ (Love) ಮಾಡುತ್ತಿದ್ದ ಯುವತಿಯನ್ನು ಕೊಲೆಗೈದು, ಮೃತದೇಹವನ್ನು ತುಂಡು ತುಂಡು ಮಾಡಿ ಫ್ರಿಜ್​​​ನಲ್ಲಿಟ್ಟಿದ್ದ (Fridges) ಆರೋಪಿ, ಒಂದೊಂದಾಗಿ ಅವುಗಳನ್ನು ದೆಹಲಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಎಸೆದು ಬರುತ್ತಿದ್ದ. ಇಂತಹದ್ದೇ ಘಟನೆಯೊಂದು ಸದ್ಯ ಛತ್ತೀಸ್​​ಗಢದಲ್ಲಿ (Chhattisgarh ) ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆಯೇ ಪತ್ನಿಯನ್ನು (Wife) ಕೊಲೆಗೈದಿದ್ದ ಪತಿ (Husband), ಮೃತದೇಹವನ್ನು ಆರು ಭಾಗ ಮಾಡಿ ವಾಟರ್​​ ಟ್ಯಾಂಕ್​​​​ನಲ್ಲಿ (Water Tank) ಸೀಲ್​​ ಮಾಡಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.


ಎರಡು ತಿಂಗಳ ಹಿಂದೆಯೇ ಪತ್ನಿಯನ್ನು ಕೊಲೆಗೈದಿದ್ದ ಆರೋಪಿ


ಪತ್ನಿಯ ನಡತೆಯ ಮೇಲೆ ಅನುಮಾನಗೊಂಡ ಪತಿ ದಾರುಣ ಕೃತ್ಯಕ್ಕೆ ಕೈ ಹಾಕಿದ್ದು, ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ತುಂಡು ತುಂಡು ಮಾಡಿ ಒಂದು ವಾಟರ್​ ಟ್ಯಾಂಕ್​​ನಲ್ಲಿ ಹಾಕಿ ಸೀಲ್​ ಮಾಡಿದ್ದಾನೆ.


ಛತ್ತೀಸ್​​ಗಢದ ಬಿಲಾಸ್​​ಪುರ (Bilaspur) ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕಳೆದ ಎರಡು ತಿಂಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಕಲಿ ನೋಟು ಮುದ್ರಣ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಅರೆಸ್ಟ್​ ಮಾಡಿದ ಸಂದರ್ಭದಲ್ಲಿ ಕೊಲೆಯ ರಹಸ್ಯ ರಿವೀಲ್​ ಆಗಿದೆ.


ಸಾಂದರ್ಭಿಕ ಚಿತ್ರ (ಪತ್ನಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿ ವಾಟರ್​​ ಟ್ಯಾಂಕ್​​​ಗೆ ಹಾಕಿದ್ದ ಪತಿ; ಶಾಕಿಂಗ್​​ ಕೃತ್ಯ ಬಯಲಾಗಿದ್ದೆ ರೋಚಕ!)


ಇದನ್ನೂ ಓದಿ: Smoking In Flight: ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಸಿಗರೇಟ್‌ ಸೇದಿದ ಯುವತಿಯ ಬಂಧನ


ಪ್ರೀತಿಸಿ ಮದುವೆಯಾಗಿದ್ದ ದಂಪತಿ


ಪೊಲೀಸರು ನೀಡಿರುವ ಮಾಹಿತಿಯ ಅನ್ವಯ, ಜಿಲ್ಲೆಯ ತಖತ್ಪುರ್ ಗ್ರಾಮಕ್ಕೆ ಸೇರಿದ ಪವನ್​ ಠಾಕೂರ್​ (32) ಬಂಧಿತ ಆರೋಪಿಯಾಗಿದ್ದು, ಗೀತಾಂಜಲಿ ನಗರದಲ್ಲಿ ವಾಸಿಸುತ್ತಿದ್ದ. ಸಿಸಿಟಿವಿ ಅಳವಡಿಸುವ ಕೆಲಸ ಮಾಡುತ್ತಿದ್ದ ಈತನಿಗೆ ಕಳೆದ ಕೆಲ ವರ್ಷಗಳ ಹಿಂದೆ ಸತಿ ಸಾಹು ಎಂಬ ಯುವತಿಯ ಪರಿಚಯವಾಗಿತ್ತು. ಇಬ್ಬರ ನಡುವಿನ ಪರಿಚಯ ಪ್ರೀತಿಯಾಗಿ ಬದಲಾಗಿ ದಾಂಪತ್ಯ ಜೀವನಕ್ಕೆ ಕೂಡ ಕಾಲಿಟ್ಟಿದ್ದರು. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಕೂಡ ಜನಿಸಿದ್ದರು.


ನಕಲಿ ನೋಟು ಪ್ರಕರಣದಲ್ಲಿ ಆರೋಪಿ ಅರೆಸ್ಟ್​


ಆದರೆ ಮದುವೆಯಾಗಿ ಇಬ್ಬರು ಮಕ್ಕಳಾದ ಮೇಲೆ ಪತ್ನಿ ಮೇಲೆ ಆರೋಪಿ ಪವನ್​​ಗೆ ಅನುಮಾನ ಶುರುವಾಗಿತ್ತು ಎನ್ನಲಾಗಿದೆ. ಈ ನಡುವೆ ಆರೋಪಿ ನಕಲಿ ನೋಟು ಬದಲಾವಣೆ ಕೃತ್ಯಕ್ಕೂ ಎಂಟ್ರಿ ಕೊಟ್ಟಿದ್ದ ಸಂಗತಿ ತಿಳಿದುಕೊಂಡಿದ್ದ ಪತ್ನಿ ಬುದ್ಧಿ ಮಾತು ಹೇಳಿದ್ದಳಂತೆ. ಇದರೊಂದಿಗೆ ಆಕೆಯನ್ನು ಹೇಗಾದರೂ ಮಾಡಿ ಕೊಲೆ ಮಾಡಲೇಬೇಕು ಎಂದು ನಿರ್ಧಾರ ಮಾಡಿ ತನ್ನ ಇಬ್ಬರು ಮಕ್ಕಳನ್ನು ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದನಂತೆ.


ಮಕ್ಕಳನ್ನು ದೂರಬಿಟ್ಟು ಬಂದ ಬಳಿಕ ಅಂದರೆ ಜನವರಿ 6 ರಂದು 23 ವರ್ಷದ ಪತ್ನಿ ಸತಿ ಸಾಹುನನ್ನು ಮನೆಯಲ್ಲೇ ಹತ್ಯೆ ಮಾಡಿದ್ದ ಆರೋಪಿ, ಆ ಬಳಿಕ ಆಕೆಯ ಮೃತದೇಹವನ್ನು ತುಂಡು ತುಂಡು ಮಾಡಿ ವಾಟರ್ ಟ್ಯಾಂಕ್​​ವೊಂದರಲ್ಲಿ ಹಾಕಿ ಸೀಲ್​ ಮಾಡಿದ್ದನಂತೆ.


ಮೃತದೇಹವನ್ನು ಕಟ್​ ಮಾಡಲು ಒಂದು ಕಟರ್​ ಮಷಿನ್​​ಅನ್ನು ಕೂಡ ಖರೀದಿ ಮಾಡಿ ತಂದಿದ್ದನಂತೆ. ಪೆಟ್ರೋಲ್​ ಹಾಕಿ ಮೃತದೇಹ ಸುಟ್ಟು ಹಾಕಬೇಕು ಎಂದು ಯೋಚಿಸಿದ್ದ ಆರೋಪಿ, ಅಕ್ಕಪಕ್ಕದ ನಿವಾಸಿಗಳಿಗೆ ಎಲ್ಲಿ ಅನುಮಾನ ಬಂದು ತನ್ನ ಕೃತ್ಯ ಹೊರಬರುತ್ತದೆ ಅಂತ ಹೆದರಿ ಅದನ್ನು ವಾಟರ್​ ಟ್ಯಾಂಕ್​​ವೊಂದಕ್ಕೆ ಹಾಕಿ ಅದನ್ನು ಸೀಲ್​ ಮಾಡಿದ್ದನಂತೆ.




ಪರಿಶೀಲನೆ ವೇಳೆ ಪೊಲೀಸರಿಗೆ ಬಿಗ್​​ಶಾಕ್​​!


ಕೊಲೆಯಾಗಿ ಎರಡು ತಿಂಗಳಾದರೂ ಕುಟುಂಬಸ್ಥರು ಸೇರಿದಂತೆ ಯಾರಿಗೂ ಅನುಮಾನಬಾರದಂತೆ ಪವನ್​ ನೋಡಿಕೊಂಡಿದ್ದನಂತೆ. ಆದರೆ ಇತ್ತೀಚೆಗೆ ಆತ ನಕಲಿ ನೋಟು ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದನಂತೆ. ಈ ಪ್ರಕರಣದ ಸಂಬಂಧ ಪೊಲೀಸರು, ಕ್ರೈಂ ಟೀಂ, ಸೈಬರ್ ಪೊಲೀಸರು ಆತನ ಮೇಲೆ ದಾಳಿ ಮಾಡಿ ಹುಡುಕಾಟ ನಡೆಸಿದ ವೇಳೆ ನೋಟು ಮುದ್ರಣಕ್ಕೆ ಬಳಕೆ ಮಾಡುತ್ತಿದ್ದ ಪ್ರಿಂಟರ್​, 200 ರೂಪಾಯಿ ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.


ಇದನ್ನೂ ಓದಿ: Viagra: ಸಂಗಾತಿಯೊಂದಿಗೆ ಎಂಜಾಯ್ ಮಾಡಲು ವಯಾಗ್ರ ಸೇವಿಸಿದ, ಆ ಒಂದು ತಪ್ಪಿಂದ ಪ್ರಾಣವನ್ನೇ ಬಿಟ್ಟ!


ಆದರೆ, ಆತನ ಮನೆಯ ಬಾತ್​​ರೂಮ್​​​ ಬಳಿಯಿದ್ದ ವಾಟರ್​​​ ಟ್ಯಾಂಕ್​​​ನಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದ ಪೊಲೀಸರು ಈ ವೇಳೆ ಪರಿಶೀಲನೆ ನಡೆಸಿದ ವೇಳೆ ಕೊಳೆತ ಮಹಿಳೆಯ ಮೃತದೇಹ ಕಂಡು ಶಾಕ್​​ ಹಾಕಿದ್ದಾರೆ.


ಆ ಬಳಿಕ ಆರೋಪಿಯನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ ವೇಳೆ ಆರೋಪಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ನಕಲಿ ನೋಟು ತಯಾರಿ ಮಾಡುವುದಕ್ಕೆ ಅಡ್ಡಪಡಿಸಿದ್ದು ಹಾಗೂ ಬೇರೆಯವರೊಂದಿಗೆ ಆಕೆಗೆ ಸಂಬಂಧವಿದೆ ಎಂಬ ಅನುಮಾನದ ಮೇರೆಗೆ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನಂತೆ.

Published by:Sumanth SN
First published: