• Home
  • »
  • News
  • »
  • crime
  • »
  • Bengaluru: ಗರ್ಭಿಣಿ ಪತ್ನಿಯನ್ನ ಕೊಲೆಗೈದು ಫ್ಲೈಟ್​​ನಲ್ಲಿ ಎಸ್ಕೇಪ್​; ಬೆಂಗಳೂರು ಪೊಲೀಸರಿಂದ ಬಂಗಾಳದಲ್ಲಿ ನಕಲಿ ಟೆಕ್ಕಿ ಅರೆಸ್ಟ್

Bengaluru: ಗರ್ಭಿಣಿ ಪತ್ನಿಯನ್ನ ಕೊಲೆಗೈದು ಫ್ಲೈಟ್​​ನಲ್ಲಿ ಎಸ್ಕೇಪ್​; ಬೆಂಗಳೂರು ಪೊಲೀಸರಿಂದ ಬಂಗಾಳದಲ್ಲಿ ನಕಲಿ ಟೆಕ್ಕಿ ಅರೆಸ್ಟ್

ಆರೋಪಿ ನಾಸಿರ್ ಹುಸೇನ್/ ಕೊಲೆಯಾದ ನಾಝ್​

ಆರೋಪಿ ನಾಸಿರ್ ಹುಸೇನ್/ ಕೊಲೆಯಾದ ನಾಝ್​

ಹೆಂಡತಿ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಗರ್ಭಿಣಿಯನ್ನು ಕೊಲೆಗೈದು ವಿಮಾನದಲ್ಲಿ ಎಸ್ಕೇಪ್​ ಆಗಿದ್ದ ಫೇಕ್​ ಟೆಕ್ಕಿಯನ್ನ ಸುದ್ದುಗುಂಟೆಪಾಳ್ಯ ಪೊಲೀಸರು ಬಂಗಾಳದಲ್ಲಿ ಅರೆಸ್ಟ್​ ಮಾಡಿ ನಗರಕ್ಕೆ ಕರೆತಂದಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಆತ ಅದೆಷ್ಟು ಖತರ್ನಾಕ್ ಎಂದರೆ ಇಂಜಿನಿಯರಿಂಗ್ ಓದದೆಯೇ ಟೆಕ್ಕಿ ಅಂತ ನಂಬಿಸಿದ್ದ. ದೊಡ್ಡ ದೊಡ್ಡ ಕಾರಲ್ಲಿ ಓಡಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದ. ಆಗಲೇ ನೋಡಿ ಎದುರು ಮನೆಯಾಕೆ ಮರುಳಾಗಿ ಪ್ರೀತಿಯಲ್ಲಿ ಬಿದ್ದಿದ್ದಳು. ನಂತರ ಮದುವೆ ಕೂಡ ಆಗಿದ್ದಳು. ಆದರೆ ಮದುವೆ ಆದ ಆರೇ ತಿಂಗಳಿಗೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಕೊಲೆ ಬಳಿಕ ಫ್ಲೈಟ್ ನಲ್ಲಿ ಎಸ್ಕೇಪ್ ಆದವನನ್ನು ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಬೆಂಗಳೂರಿನ ಸುದ್ದುಗೊಂಟೆಪಾಳ್ಯ ಪೊಲೀಸರು ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಬಂಧನ ಮಾಡಿದ್ದಾರೆ.


ಏನಿದು ಪ್ರಕರಣ?


ಬೆಂಗಳೂರಿನ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಾವರೆಕೆರೆಯ ಸುಭಾಷ್​ ನಗರದ ಅಪಾರ್ಟ್​​ಮೆಂಟ್​​ ಸಮುಚ್ಚಯವೊಂದರಲ್ಲಿ ಜನವರಿ 16ರಂದು ನಾಸಿರ್ ಹುಸೇನ್ ಎಂಬಾತ ಗರ್ಭಿಣಿಯಾಗಿದ್ದ ತನ್ನ ಹೆಂಡತಿ ನಾಝ್​ಳನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.


ಆರೋಪಿ ನಾಸಿರ್ ಹುಸೇನ್


ಕೊಲೆ ಮಾಡಿ ಬಾಮೈದನಿಗೆ ಫೋನ್ ಮಾಡಿ ನಿನ್ನ ತಂಗಿಯನ್ನ ಕೊಲೆ ಮಾಡಿದ್ದೇನೆ, ಶವ ಮನೆಯಲ್ಲಿ ಬಿದ್ದಿದೆ ಎಂದು ಹೇಳಿ ಪರಾರಿಯಾಗಿದ್ದ. ಕೂಡಲೇ ಮನೆಗೆ ಹೋಗಿ ನೋಡಿದಾಗ ಮನೆಯಲ್ಲಿ ನಾಝ್​ಳ ಶವ ಬಿದ್ದಿತ್ತು. ತಕ್ಷಣವೇ ಸುದ್ದುಗುಂಟೆಪಾಳ್ಯ ಪೊಲೀಸರಿಗೆ ಮೃತ ಮಹಿಳೆಯ ಪೊಲೀಸರು ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕೊಲೆ ಮಾಡಿದ ನಾಸಿರ್​ಗಾಗಿ 3 ತಂಡಗಳನ್ನು ರಚನೆ ಮಾಡಿದ್ದರು.
ಇದನ್ನೂ ಓದಿ: Crime News: ಲಯಸ್ಮಿತಾ ಹಂತಕ ಪವನ್​ ಕಲ್ಯಾಣ್​ ಸೇಫ್​, ಆಸ್ಪತ್ರೆಯಿಂದ ಡಿಸ್ಚಾರ್ಜ್​; ಕೊಲೆ ಹಿಂದಿನ ಕಾರಣ ಬಾಯ್ಬಿಟ್ಟ ಹಂತಕ


ಕೊಲೆ ಮಾಡಿ ಬಂಗಾಳದಲ್ಲಿ ಅಡಗಿದ್ದ ಆರೋಪಿ!


ಕೊಲೆ ಮಾಡಿ ಪರಾರಿಯಾಗಿದ್ದ ನಾಸೀರ್​ ಸೀದಾ ಏರ್​ಪೋರ್ಟ್​ಗೆ ತೆರಳಿ ಅಲ್ಲಿಂದ ವಿಮಾನ ಹತ್ತಿ ಪಶ್ಚಿಮ ಬಂಗಾಳಕ್ಕೆ ಎಸ್ಕೇಪ್ ಆಗಿದ್ದನಂತೆ. ಇತ್ತ ನಾಸೀರ್​ನ್ನ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಸಿಸಿಟಿವಿ, ಕಾಲ್​ ಲೋಕೇಶನ್​ ಮೂಲಕ ಆರೋಪಿ ಇರುವ ಸ್ಥಳವನ್ನು ಟ್ರೇಸ್ ಮಾಡಿದ್ದರು.


ಅಲ್ಲದೇ ಮನೆಯಲ್ಲಿ ಸಿಕ್ಕ ಆಧಾರ್ ಕಾರ್ಡ್​ ಮೂಲಕ ಆತನ ಅಡ್ರೆಸ್ ಕೂಡ ಪತ್ತೆ ಹಚ್ಚಿ ಬಂಗಾಳಕ್ಕೆ ತೆರಳಿ ಅಲ್ಲಿ ಅಡಗಿದ್ದ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಜೊತೆಗೆ ಈತನು ಫೇಕ್ ಟೆಕ್ಕಿ ಅನ್ನೋದು ಪೊಲೀಸ ಪ್ರಾಥಮಿಕ ವಿಚಾರಣೆಯಲ್ಲಿ ಬಯಲಾಗಿದೆ.


ಆರೋಪಿ ನಾಸಿರ್ ಹುಸೇನ್/ ಕೊಲೆಯಾದ ನಾಝ್​


ಇದನ್ನೂ ಓದಿ: Bengaluru: ಮೇಲಿನ ಮನೆ ಅಂಕಲ್, ಕೆಳಗಿನ ಮನೆ ಆಂಟಿ ಲವ್​ ಸ್ಟೋರಿ! ಹೇಳದೆ ಕೇಳದೆ ಜೂಟ್; ಮಿಸ್ ಆದವರ ಅಸಲಿ ಕಹಾನಿ ಏನು?


ಪತ್ನಿಯ ನಡತೆ ಮೇಲೆ ಸಂಶಯ, ಮನೆಯಲ್ಲೇ ಭೀಕರ ಹತ್ಯೆ!


ಇನ್ನು, ಆರೋಪಿಯನ್ನು ವಿಚಾರಣೆ ಮಾಡಿದಾಗ ಹೆಂಡತಿ ಶೀಲದ ಮೇಲೆ ಅನುಮಾನ ಇತ್ತು. ಹೀಗಾಗಿ ಫ್ಲ್ಯಾನ್ ಮಾಡಿ ಕೊಲೆ ಮಾಡಿದೆ ಅಂತಾ ಹೇಳಿದ್ದಾನೆ. ಇನ್ನು, ಕೊಲೆಯಾದ ನಾಝ್ ಮತ್ತು ನಾಸಿರ್ ಪರಸ್ಪರ ಪ್ರೀತಿ ಮಾಡಿ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಮದುವೆಯಾದ ಬಳಿಕ ನಿನಗೆ ಅಕ್ರಮ ಸಂಬಂಧವಿದೆ ಅಂತ ಪತ್ನಿಗೆ ಕಿರುಕುಳ ಕೊಡುತ್ತಿದ್ದನಂತೆ. ಅಲ್ಲದೇ ನಿನ್ನೆ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಅಂತ ಗರ್ಭಪಾತ ಮಾಡಿಸಲು ಒತ್ತಾಯ ಮಾಡಿದ್ದನಂತೆ. ಆದರೆ ಗರ್ಭಪಾತ ಮಾಡಿಸಲು ನಾಝ್ ಒಪ್ಪಿಗೆ ನೀಡದ್ದಕ್ಕೆ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸದ್ಯ ಯಾಕೆ ಈತ ಟೆಕ್ಕಿ ಅಂತ ಹೇಳಿಕೊಳ್ತಿದ್ದ, ಈತನ ಫ್ಲ್ಯಾನ್ ಏನು ಅನ್ನೋದ್ದರ ಬಗ್ಗೆ ಸುದ್ದುಗುಂಟೆಪಾಳ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Published by:Sumanth SN
First published: