• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಸಾಫ್ಟ್‌ವೇರ್ ಗಂಡನ ಬಳಿ ಹೋಗಲಿಲ್ಲ ಅಂತ ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!

Crime News: ಸಾಫ್ಟ್‌ವೇರ್ ಗಂಡನ ಬಳಿ ಹೋಗಲಿಲ್ಲ ಅಂತ ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!

ಕೊಲೆಯಾದ ಪ್ರಸನ್ನ

ಕೊಲೆಯಾದ ಪ್ರಸನ್ನ

ಪೊಲೀಸರು ಗುರುವಾರ ಆರೋಪಿಯನ್ನು ಸ್ಥಳಕ್ಕೆ ಕರೆದುಕೊಂಡು ಮೃತದೇಹ ಪತ್ತೆಗೆ ಹುಡುಕಾಟ ನಡೆಸಿದ್ದರು. ಆದರೆ ಅಂದು ಮೃತದೇಹ ಪತ್ತೆಯಾಗಿರಲಿಲ್ಲ. ಶುಕ್ರವಾರ ಮತ್ತೆ ಪೊಲೀಸರು ಕಾಡಿನಲ್ಲಿ ಹುಡುಕಾಟ ನಡೆಸಿದ ವೇಳೆ ಮೃತದೇಹದ ಭಾಗಗಳು ಪತ್ತೆಯಾಗಿದೆ.

  • News18 Kannada
  • 4-MIN READ
  • Last Updated :
  • Andhra Pradesh, India
  • Share this:

ಅಮರಾವತಿ: ಹೆತ್ತ ಮಗಳನ್ನು (Daughter) ತಂದೆಯೇ  (Father) ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶ (Andhra Pradesh) ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾದ ಮಗಳ ಕತ್ತು ಇಸುಕಿ ಕೊಲೆ ಮಾಡಿದ್ದ ತಂದೆ, ಬಳಿಕ ಆಕೆಯನ್ನು ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿದ್ದಾರೆ. ಈಕೆಯಿಂದ ಕುಟುಂಬ ಮರ್ಯಾದೆ ಹೋಗುತ್ತೆ ಎಂಬ ಕೋಪದಿಂದ ಹೆತ್ತ ತಂದೆಯೇ ಮಗಳನ್ನು ಕೊಲೆ ಮಾಡಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಂದ್ಯಾಲದ (Nandyala) ಪಾಣ್ಯಂ ಮಂಡಲದ (Panyam) ಆಲಮೂರುಕು ಗ್ರಾಮದ ನಿವಾಸಿ ದೇವೇಂದರ್ ರೆಡ್ಡಿ ಎಂಬಾತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೊದಲ ಮಗಳಾದ ಪ್ರಸನ್ನ (21) ಎಂಬಾಕೆಯನ್ನು ಎರಡು ವರ್ಷಗಳ ಹಿಂದೆ ಓರ್ವ ಸಾಫ್ಟ್​ವೇರ್ ಎಂಜಿನಿಯರ್​​ಗೆ (Software Engineering ) ಕೊಟ್ಟು ಮದುವೆ (Marriage) ಮಾಡಿದ್ದರು. ಆ ಬಳಿಕ ದಂಪತಿ ಹೈದರಾಬಾದ್​​ನಲ್ಲಿ ಸಂಸಾರ ಶುರು ಮಾಡಿದ್ದರು.


ಆದರೆ ಮದುವೆಗೂ ಮುನ್ನ ಪ್ರಸನ್ನಗೆ ಓರ್ವ ವ್ಯಕ್ತಿಯೊಂದಿಗೆ ಸಲುಗೆ ಇತ್ತು ಎನ್ನಲಾಗಿದೆ. ಆದರೆ ಈ ನಡುವೆ ಪತಿಯನ್ನು ಬಿಟ್ಟು ಪ್ರಸನ್ನ ತವರು ಮನೆಗೆ ಬಂದಿದ್ದಳು. ಅಲ್ಲದೆ ಮತ್ತೆ ಹೈದರಾಬಾದ್​ನ ಪತಿಯ ಮನೆಗೆ ಹೋಗಲು ನಿರಾಕರಿಸಿದ್ದಳಂತೆ.


ಇದನ್ನೂ ಓದಿ: Bengaluru: ಅತ್ತೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಅಳಿಯ; ಲಿಫ್ಟ್​ ಗುಂಡಿಗೆ ಬಿದ್ದು 6 ವರ್ಷದ ಮಗು ಸಾವು


ಮದುವೆಯಾದ ಎರಡೇ ವರ್ಷಕ್ಕೆ ಹೈದರಾಬಾದ್​ನಿಂದ ತವರು ಮನೆಗೆ ಬಂದು ಮತ್ತೆ ವಾಪಸ್​ ಆಗದೆ ಉಳಿದಿದ್ದ ಕಾರಣ ಕುಟುಂಬಸ್ಥರಿಗೆ ಗ್ರಾಮದಲ್ಲಿ ಮುಜುಗರ ಎದುರಾಗಿತ್ತಂತೆ. ಅಲ್ಲದೆ ಕೆಲ ದಿನಗಳ ಬಳಿಕ ಪ್ರಸನ್ನ ಮದುವೆಗೂ ಮುನ್ನ ಸಲುಗೆ ಬೆಳೆಸಿದ್ದ ವ್ಯಕ್ತಿಯೊಂದಿಗೆ ಮತ್ತೆ ಸಂಪರ್ಕ ಸಾಧಿಸಿದ್ದಳಂತೆ. ಇದನ್ನು ಗಮನಿಸಿದ್ದ ತಂದೆಗೆ ಮಗಳ ವರ್ತನೆ ಇಷ್ಟವಾಗಿರಲಿಲ್ಲವಂತೆ. ಇದರಿಂದ ಗ್ರಾಮದಲ್ಲಿ ತನ್ನ ಮರ್ಯಾದೆ ಹೋಗುತ್ತೆ ಎಂದು ಕೋಪಗೊಂಡಿದ್ದ ತಂದೆ, ಇದೇ ತಿಂಗಳ 10ರಂದು ಮನೆಯಲ್ಲೇ ಮಗಳ ಕುತ್ತಿಗೆ ಇಸುಕಿ ಕೊಲೆಗೈಗಿದ್ದಾನೆ.




ಕೊಲೆ ಮಾಡಿದ ಬಳಿಕ ಕೆಲ ವ್ಯಕ್ತಿಗಳ ನೆರವು ಪಡೆದು ನಂದ್ಯಾಲ ಸಮೀಪದ ಒಂದು ಅರಣ್ಯ ಪ್ರದೇಶಕ್ಕೆ ಕಾರಿನಲ್ಲಿ ಮೃತದೇಹ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗಳ ದೇಹದಿಂದ ತಲೆ ಬೇರ್ಪಡಿಸಿ, ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದು ಬಂದಿದ್ದರಂತೆ. ಆ ಬಳಿಕ ತನಗೇನು ತಿಳಿದೆ ಇಲ್ಲ ಎಂಬಂತೆ ಗ್ರಾಮದಲ್ಲಿ ಓಡಾಡಿಕೊಂಡಿದ್ದರಂತೆ.


ಆದರೆ, ಪ್ರಸನ್ನ ಪ್ರತಿ ದಿನ ತನ್ನ ತಾತ ಶಿವಾರೆಡ್ಡಿಗೆ ಫೋನ್​ ಮಾಡಿ ಮಾತನಾಡುತ್ತಿದ್ದರಂತೆ. ಕೆಲ ದಿನಗಳಿಂದ ಮೊಮ್ಮಗಳು ಕರೆ ಮಾಡದನ್ನು ಗಮನಿಸಿದ ಅವರು, ಆಕೆಯ ಬಗ್ಗೆ ಕುಟುಂಬಸ್ಥರ ಬಳಿ ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ಮೊಮ್ಮಗಳ ಬಗ್ಗೆ ತನ್ನ ಮಗನಾದ ದೇವೇಂದರ್ ರೆಡ್ಡಿ ಬಳಿ ಕೇಳಿದಾಗ ಕೊಲೆ ವಿಚಾರ ಹೊರ ಬಂದಿದೆ. ಮಗಳ ಕಾರಣದಿಂದ ಗ್ರಾಮದಲ್ಲಿ ನನ್ನ ಮರ್ಯಾದೆ ಹೋಗುತ್ತಿತ್ತು. ಆದ್ದರಿಂದ ತಾನೇ ಕೊಲೆ ಮಾಡಿದ್ದಾಗಿ ದೇವೇಂದರ್ ರೆಡ್ಡಿ ಒಪ್ಪಿಕೊಂಡಿದ್ದರಂತೆ.


A 28-year-old woman died after she was allegedly set a fire by her live-in partner in delhi
ಪ್ರಾತಿನಿಧಿಕ ಚಿತ್ರ


ಇದರೊಂದಿಗೆ ಶಿವಾರೆಡ್ಡಿ, ಮಗನ ಕೃತ್ಯದಿಂದ ಬೆಚ್ಚಿ ಬಿದ್ದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೊಲೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ದೇವೇಂದರ್ ರೆಡ್ಡಿಯನ್ನು ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಮಗಳ ಮೃತದೇಹ ಎಸೆದು ಬಂದಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ.


ಇದನ್ನೂ ಓದಿ: Crime News: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ; ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹ ಕಂಡು ಪೊಲೀಸರಿಗೆ ಶಾಕ್!


ಪೊಲೀಸರು ಗುರುವಾರ ಆರೋಪಿಯನ್ನು ಸ್ಥಳಕ್ಕೆ ಕರೆದುಕೊಂಡು ಮೃತದೇಹ ಪತ್ತೆಗೆ ಹುಡುಕಾಟ ನಡೆಸಿದ್ದರು. ಆದರೆ ಅಂದು ಮೃತದೇಹ ಪತ್ತೆಯಾಗಿರಲಿಲ್ಲ. ಶುಕ್ರವಾರ ಮತ್ತೆ ಪೊಲೀಸರು ಕಾಡಿನಲ್ಲಿ ಹುಡುಕಾಟ ನಡೆಸಿದ ವೇಳೆ ಮೃತದೇಹದ ಭಾಗಗಳು ಪತ್ತೆಯಾಗಿದೆ. ದೇಹ ಭಾಗಗಳನ್ನು ಪತ್ತೆ ಮಾಡಿದ ಪೊಲೀಸರು ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಮರ್ಯಾದಾ ಹತ್ಯೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು