ಗುವಾಹಟಿ(ಫೆ.20): ಸಂಚಲನ ಮೂಡಿಸಿರುವ ಶ್ರದ್ಧಾ ಹತ್ಯೆ (Shraddha Walker Murder Case) ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆಗಲೇ ಗುವಾಹಟಿಯಲ್ಲಿ ಒಂದು ಜೋಡಿ ಹತ್ಯೆಯ (Double Murder) ಇನ್ನಷ್ಟು ಸಂಚಲನ ಮೂಡಿಸುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು 7 ತಿಂಗಳ ಹಿಂದೆ ಪತಿ ಮತ್ತು ಅತ್ತೆಯನ್ನು ಕೊಂದು ಶವಗಳನ್ನು ತುಂಡು ಮಾಡಿ ರೆಫ್ರಿಜರೇಟರ್‌ನಲ್ಲಿ (Refrigerator) ಸಂಗ್ರಹಿಸಿ ನಂತರ ದೇಹದ ಭಾಗಗಳನ್ನು ಎಸೆದಿದ್ದಾರೆ. ಫೆಬ್ರವರಿ 19 ರಂದು ಪೊಲೀಸರು ಆರೋಪಿ ಬಂದಾನ ಕಲಿತಾನನ್ನು ಬಂಧಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಅಪರಾಧದ ಉದ್ದೇಶ ವಿವಾಹೇತರ ಸಂಬಂಧ ಮತ್ತು ಆಸ್ತಿ ಮೇಲಿನ ದುರಾಸೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಳು ತಿಂಗಳ ಹಿಂದೆ ನಗರದ ನೂನ್‌ಮತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಆರೋಪಿ ಬಂದನಾ ಕಲಿತಾ ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನು ಆಗಸ್ಟ್ 17, 2022 ರಂದು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
“ಕೊಲೆಗೈದ ಬಳಿಕ, ಕಲಿತಾ ಸಂತ್ರಸ್ತರ ದೇಹದ ಭಾಗಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ ಮನೆಯಿಂದ ಹೊರಟುಹೋಗಿದ್ದಾರೆ. ನಾಲ್ಕು ದಿನಗಳ ನಂತರ ಆಗಸ್ಟ್ 21 ರಂದು ಹಿಂದಿರುಗಿ, ಗುವಾಹಟಿಯಿಂದ ಕನಿಷ್ಠ 200 ಕಿಮೀ ದೂರದಲ್ಲಿರುವ ಮೇಘಾಲಯದ ದವ್ಕಿ ನದಿಗೆ ದೇಹದ ತುಂಡುಗಳನ್ನು ಎಸೆದಿದ್ದಾರೆ ”ಎಂದು ಅಧಿಕಾರಿ ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಕಲಿತಾ ಅವರ ನೆರೆಹೊರೆಯವರು ಆಕೆಯ ಮನೆಯ ಟೆರೇಸ್‌ನಲ್ಲಿ ಪೀಠೋಪಕರಣಗಳನ್ನು ಸುಡುವುದನ್ನು ನೋಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಕಲಿತಾ ಅವರ ಇಬ್ಬರು ಸ್ನೇಹಿತರಾದ ಅರುಪ್ ದೇಕಾ ಮತ್ತು ಧಂಜಿತ್ ದೇಕಾ ಅವರನ್ನು ಈ ಕೊಲೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿದೆ.
ಅಕ್ರಮ ಸಂಬಂಧಕ್ಕಾಗಿ ಪತಿಯ ಕೊಲೆ?
ವರದಿಗಳ ಪ್ರಕಾರ, ಅಮರಜ್ಯೋತಿ ಡೇ ಅವರು ಕೆಲವು ವರ್ಷಗಳ ಹಿಂದೆ ಬಂದಾನ ಕಲಿತಾ ಅವರನ್ನು ವಿವಾಹವಾದರು ಮತ್ತು ಅವರು ಗುವಾಹಟಿ ನಗರದ ಪೂರ್ವ ಭಾಗದಲ್ಲಿರುವ ನರೇಂಗಿಯಲ್ಲಿ ವಾಸಿಸುತ್ತಿದ್ದರು. ಕೆಲವು ವರ್ಷಗಳ ಕಾಲ ಇವರ ವೈವಾಹಿಕ ಬದುಕು ಉತ್ತಮವಾಗಿ ಸಾಗಿದೆ. ಆದರೆ ಈ ಮಧ್ಯೆ ಕಲಿತಾಗೆ ಧಂಜಿತ್ ದೇಕಾ ಎಂಬ ಯುವಕನೊಂದಿಗೆ ಪ್ರೇಮಾಂಕುರವಾಗಗಿದೆ. ಆದರೆ ಈ ವಿಚಾರ ಅಮರಜ್ಯೋತಿಗೆ ಗಮನಕ್ಕೆ ಬಂದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರಿಂದ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಅತ್ತೆಯ ಆಸ್ತಿ ಮೇಲೆ ಸೊಸೆ ಕಣ್ಣು
ಮತ್ತೊಂದೆಡೆ, ಅಮರಜ್ಯೋತಿ ಅವರ ತಾಯಿ ಶಂಕರಿ ಡೇ ಅವರು ನಗರದ ಮಧ್ಯದಲ್ಲಿರುವ ಚಂಡ್ಮಾರಿ ಪ್ರದೇಶದಲ್ಲಿ ಐದು ಕಟ್ಟಡಗಳನ್ನು ಹೊಂದಿದ್ದಾರೆ. ಅವಳು ಒಂದು ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು, ಉಳಿದ ನಾಲ್ಕು ಕಟ್ಟಡಗಳನ್ನು ಬಾಡಿಗೆಗೆ ನೀಡಲಾಗಿದೆ. ಈ ಕಟ್ಟಡಗಳ ಬಾಡಿಗೆಯನ್ನು ಶಂಕರಿ ಡೇ ಅವರ ಸಹೋದರ ಸಂಗ್ರಹಿಸುತ್ತಿದ್ದು, ಆತನೇ ಅವಳ ಹಣಕಾಸುವನ್ನು ನಿರ್ವಹಿಸುತ್ತಾನೆ. ಆದರೆ ಬಂದಾನಗೆ ಈ ವ್ಯವಸ್ಥೆಯಿಂದ ಅಸಮಾಧಾನವಿತ್ತು.
ಇದನ್ನೂ ಓದಿ: Brutal Murder: ಚಹಾ ಮಾಡುತ್ತಿದ್ದ ಚಿಕ್ಕಮ್ಮನ ತಲೆಗೆ ಸುತ್ತಿಗೆ ಏಟು! ಮಗನೇ ಕೊಲೆಗಡುಕ ಆಗಿದ್ಯಾಕೆ?
ಈ ವಿಚಾರಗಳಲ್ಲಿ ವೈವಾಹಿಕ ಕಲಹ ಬೆಳೆಯುತ್ತಿದ್ದಂತೆ ಅಮರಜ್ಯೋತಿ ಮತ್ತು ಬಂದಾನ ವಿಚ್ಛೇದನಕ್ಕೆ ಸಿದ್ಧತೆ ನಡೆಸಿದ್ದರು. ಹೀಗಿರುವಾಗಲೇ ಕಳೆದ ಏಳು ತಿಂಗಳ ಹಿಂದೆ ಬಂದಾನ ನೂನ್ಮತಿ ಪೊಲೀಸ್ ಠಾಣೆಗೆ ಪತಿ ಮತ್ತು ಅತ್ತೆ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ, ಆಧರೆ ಅದೆಷ್ಟೇ ಯತ್ನಿಸಿದರೂ ಅವರಿಬ್ಬರ ಸುಳಿವು ಸಿಕ್ಕಿರಲಿಲ್ಲ.
ಸ್ವಲ್ಪ ಸಮಯದ ನಂತರ, ಬಂದಾನ ಮತ್ತೊಂದು ದೂರು ದಾಖಲಿಸಿದ್ದು, ಶಂಕರಿ ಡೃ ಅವರ ಸಹೋದರ ತನ್ನ ಅತ್ತೆಯ ಐದು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿರುವ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ಆದರೆ ಇದೇ ವಿಚಾರದಲ್ಲಿ ಬಂದ್ಆನಾ ಸಿಕ್ಕಾಕೊಂಡಿದ್ದಾಳೆ. ಪೊಲೀಸರು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಬಂದಾನ ಕಲಿತಾ ಸ್ವತಃ ತನ್ನ ಅತ್ತೆಯ ಬ್ಯಾಂಕ್ ಖಾತೆಯಿಂದ ಎಟಿಎಂ ಕಾರ್ಡ್ ಬಳಸಿ ಐದು ಲಕ್ಷ ರೂ ಡ್ರಾ ಮಾಡಿರುವ ವಿಚಾರ ಬಯಲಾಗಿದೆ. ಇದರಿಂದ್ ಪೊಲೀಸರಿಗೆ ಆಖೆಯ ಮೇಲೆ ಅನುಮಾನ ಮೂಡಿದೆ. ಹೆಚ್ಚಿನ ತನಿಖೆಯ ನಂತರ ಆಕೆಯ ವಿರುದ್ಧ ಹೆಚ್ಚಿನ ಸಾಕ್ಷ್ಯವನ್ನು ಪಡೆದ ಪೊಲೀಸರು ಫೆಬ್ರವರಿ 17 ರಂದು ಅಕೆಯನ್ನು ಬಂಧಿಸಿದ್ದಾರೆ. ಬಳಿಕ ನಡೆದ ತನಿಖೆಯಲ್ಲಿ ಆಖೆ ಎಲ್ಲಾ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ