ಬೆಂಗಳೂರು: ಹುಡುಗಿಯರು (Girls) ಪ್ರೀತಿ (Love) ಮಾಡುವಾಗ ಮಾಡುತ್ತಾರೆ. ಆ ಬಳಿಕ ಅಪ್ಪ ಅಮ್ಮನ (Father-Mother) ಮಾತು ಮೀರದೆ ಬೇರೆಯವರ ಜೊತೆಗೂ ಮದುವೆಗೆ (Marriage) ಒಪ್ಪಿಗೆ ಕೊಡುತ್ತಾರೆ. ನಾವು ಯಾಕೆ ಹೀಗ್ ಹೇಳ್ತಿದ್ದೀವಿ ಅಂತ ಅನ್ಕೋತಿದ್ದೀರಾ? ನಾವು ಆರೋಪ ಮಾಡುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ಇದೇ ರೀತಿಯ ಪ್ರಕರಣದಲ್ಲಿ ನಾಲ್ಕೈದು ಕೊಲೆಗಳು ನಡೆದಿರುವುದು ವರದಿಯಾಗಿದೆ. ಯೌವ್ವನದಲ್ಲಿ ಪ್ರೀತಿ, ಪ್ರೇಮ, ಕೈ ಕೈ ಹಿಡಿದು ಮರ ಸುತ್ತೋದು ಕಾಮನ್ ಎನ್ನುವಂತಾಗಿದೆ. ಆದರೆ ಪ್ರೀತಿಸಿದ ಯುವಕ ಅಥವಾ ಯುವತಿ ಮದುವೆ ಆಗಲಿಲ್ಲ ಅಂತ ಕೊಲೆ (Murder) ಮಾಡುತ್ತಿರುವ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಕಳೆದ ಒಂದೆರಡು ತಿಂಗಳಲ್ಲಿ ಐದಾರು ಕೊಲೆಗಳು ನಡೆದು ಹೋಗಿವೆ. ಇದೀಗ ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ (Wilson Garden ) ಮತ್ತೊಂದು ಕೊಲೆ ನಡೆದಿದೆ.
ಕೊಲೆಗೂ ಮುನ್ನ ಯುವತಿ ಮೇಲೆ ಅತ್ಯಾಚಾರ
ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ಪಾಗಲ್ ಪ್ರೇಮಿಯೊಬ್ಬ ತಾನೂ ಪ್ರೀತಿಸಿದ ಹುಡುಗಿ ಬೇರೆ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಳು ಎನ್ನುವ ಕಾರಣಕ್ಕೆ ಯುವತಿಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಅನ್ನೋದು ಕೊಲೆಯ ಭೀಕರತೆಗೆ ಸಾಕ್ಷಿಯಾಗಿದೆ. ಪ್ರೇಯಸಿಯನ್ನು ಕೊಂದ ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: Husband and Wife: ಮೈತುಂಬಾ ಬಟ್ಟೆ ಧರಿಸಲಿಲ್ಲವೆಂದು ಪತ್ನಿಯ ಕತ್ತು ಸೀಳಿ ಕೊಂದ ಪತಿ!
ಕೊಲೆಗೈದು ಆತ್ಮಹತ್ಯೆ ಯತ್ನಿಸಿದ ಆರೋಪಿ
ಯುವತಿಯನ್ನು ಕೊಲೆಗೈದ ಆರೋಪಿಯನ್ನು ಬೆಂಗಳೂರಿನ ಕೆಪಿ ಆಗ್ರಹಾರ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ. ತಾನು ಪ್ರೀತಿಸುತ್ತಿದ್ದ ಶಾಲಿನಿ ಎಂಬಾಕೆಯನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ಕಳೆದ ಮೂರ್ನಾಲ್ಕು ವರ್ಷದಿಂದ ಮನೋಜ್ ಹಾಗೂ ಶಾಲಿನಿ ಪ್ರೀತಿ ಮಾಡುತ್ತಿದ್ದರು. ಶಾಲಿನಿ ಇತ್ತೀಚಿಗೆ ಈತನ ಪ್ರೀತಿಗೆ ಕೈಕೊಟ್ಟು ಬೇರೆ ಹುಡುಗನ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಳು.
ಉಸಿರುಗಟ್ಟಿಸಿ ಕೊಲೆಗೈದು ಎಸ್ಕೇಪ್ ಆಗಿದ್ದ
ಕೆಲ ದಿನದ ಹಿಂದೆ ನಿಶ್ಚಿತಾರ್ಥ ಕೂಡ ಆಗಿತ್ತು. ಇದರಿಂದ ರೊಚ್ಚಿಗೆದ್ದ ಮನೋಜ್, ನಿನ್ನೆ ವಿಲ್ಸನ್ ಗಾರ್ಡನ್ನ ಹುಡುಗಿ ನಿವಾಸಕ್ಕೆ ಹೋಗಿದ್ದ. ಮನೆಯಲ್ಲಿ ಹುಡುಗಿ ಪೋಷಕರು ಇರಲಿಲ್ಲ. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿ ಹೋಗಿದ್ದಾನೆ. ಪೋಷಕರು ಸಂಜೆ ಮನೆಗೆ ಬಂದಾಗ ಮಗಳ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಅನುಮಾನಾಸ್ಪದ ರೀತಿಯಲ್ಲಿ ನವವಧು ಸಾವು; ದಲಿತ ಯುವತಿ ಎಂದು ಕೊಲೆ ಆರೋಪ
ಘಟನೆ ಬಗ್ಗೆ ಮಾಹಿತಿ ನೀಡಿರುವ ಮೃತ ಯವತಿಯ ಅಣ್ಣ ಮೋಹನ್, ನಿನ್ನೆ ಬೆಳಗ್ಗೆ 11:30ರ ವೇಳೆಗೆ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದ್ದು, ತಾಯಿ ಮತ್ತು ಮಗಳು ಮಾತ್ರ ಮನೆಯಲ್ಲಿದ್ದರು. ಘಟನೆ ನಡೆದಾಗ ತಾಯಿ ಮನೆಯಲ್ಲಿ ಇರಲಿಲ್ಲ. ರಾತ್ರಿ ವೇಳೆ ಆಕೆ ಸಾವನ್ನಪ್ಪಿರುವ ಬಗ್ಗೆ ಗೊತ್ತಾಗಿದೆ, ಮನೆಯವರು ಆಕೆ ಮಲಗಿದ್ದಾಳೆ ಅಂದುಕೊಂಡಿದ್ದರು. ತಡರಾತ್ರಿ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಬಳಿಕ ಬಂಧನ
ರೇಪ್ ಅಂಡ್ ಮರ್ಡರ್ ಕೇಸ್ ದಾಖಲಿಸಿಕೊಂಡ ವಿಲ್ಸನ್ ಗಾರ್ಡನ್ ಪೊಲೀಸರು ಕೂಡಲೇ ಮನೆಗೆ ಎಂಟ್ರಿ ಆಗಿದ್ದಾರೆ. ಮನೆಗೆ ಯಾರು ಬಂದಿದ್ದರು ಅನ್ನೋದನ್ನು ಪತ್ತೆ ಹಚ್ಚಿದಾಗ ಮನೋಜ್ ಬಂದಿದ್ದ ಅನ್ನೋದು ಗೊತ್ತಾಗಿದೆ. ಮನೋಜ್ ಮನೆಗೆ ಹೋಗುವ ಹೊತ್ತಿಗೆ ಮನೋಜ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಬಳಿಕ ಬಂಧನಕ್ಕೆ ಪೊಲೀಸರು ತಯಾರಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ