ಬೆಂಗಳೂರು: ಜೆಡಿಎಸ್ ಎಂಎಲ್ಸಿ ಭೋಜೇಗೌಡರ (MLC Bhojegowda) ಕಾರು ನಂಬರ್ನ ನಕಲಿ (Fake Name Plate) ಮಾಡಿ ಬೇರೆ ಕಾರೊಂದನ್ನು ಮಾರಾಟ ಮಾಡೋಕೆ ಮುಂದಾಗಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ರು. ಆರೋಪಿಗಳ ವಿಚಾರಣೆ ಬಳಿಕ ಮತ್ತಷ್ಟು ಖತರ್ನಾಕ್ ಮಂದಿ ಸಿಕ್ಕಿಬಿದ್ದಿದ್ದಾರೆ. ಫೆಬ್ರವರಿ 26 ರಂದು ಜೆಡಿಎಸ್ ಎಂಎಲ್ಸಿ ಭೋಜೇಗೌಡರ ಫಾರ್ಚೂನರ್ ಕಾರನ್ನು (Fortuner Car) ಕಾಂಗ್ರೆಸ್ ಕಚೇರಿ (Congress) ಪಕ್ಕದ ಶೋ ರೂಮ್‌ನಲ್ಲಿ ನಿಲ್ಲಿಸಲಾಗಿತ್ತು. ಅದೇ ದಾರಿಯಲ್ಲಿ ತೆರಳುತ್ತಿದ್ದ ಭೋಜೇಗೌಡರ ಪಿಎ, ಸಾಹೇಬರ ಕಾರು ಇಲ್ಲಿ ಏಕೆ ಬಂದಿದೆ ಅಂತ ಒಳ ಹೋಗಿ ವಿಚಾರಿಸಿದ್ದರು. ಆ ಬಳಿಕ ಗೊತ್ತಾಗಿದ್ದು ಇದು ಭೋಜೇಗೌಡರ ಕಾರಲ್ಲ, ಬದಲಾಗಿ ಅದೇ ಕಾರಿನ ನಕಲಿ ನಂಬರ್ ಇರುವ ಬೇರೆ ಕಾರು ಅಂತ. ಈ ಸಂಬಂಧ ಹೈಡ್ರೌಂಡ್ಸ್ ಠಾಣೆಯಲ್ಲಿ (High Ground Police Station) ದೂರು ಕೂಡ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ್ದ ಪೊಲೀಸರಿಗೆ ಅಂತರ ರಾಜ್ಯ ಕಾರುಗಳ್ಳರ ಗ್ಯಾಂಗೊಂದು ಸಿಕ್ಕಿಬಿದ್ದಿದೆ.
ಕದ್ದ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ಶೋ ರೂಂಗಳಿಗೆ ಮಾರಾಟ
ದೆಹಲಿ, ಉತ್ತರಪ್ರದೇಶ, ಕೇರಳ ಸೇರಿದಂತೆ ವಿವಿಧ ಕಡೆಗಳಿಂದ ಬೆಂಗಳೂರಿಗೆ ಬರುತ್ತಿದ್ದ ಈ ಗ್ಯಾಂಗ್, ಮೊದಲಿಗೆ ಹೈ ಎಂಡ್ ಕಾರುಗಳನ್ನು ಪತ್ತೆ ಮಾಡುತ್ತಿದ್ದರು. ಆ ಬಳಿಕ ತಡರಾತ್ರಿ ಬರುತ್ತಿದ್ದ ಆರೋಪಿಗಳು, ನಕಲಿ ಕೀ ಯೂಸ್ ಮಾಡಿ ಕಾರುಗಳನ್ನು ಕಳವು ಮಾಡುತ್ತಿದ್ದರು.
ಇದನ್ನೂ ಓದಿ: Puneeth Kerehalli: ಇದ್ರೀಶ್ ಪಾಷಾ ಕೊಲೆ ಪ್ರಕರಣ; ಪುನೀತ್ ಕೆರೆಹಳ್ಳಿ ಆ್ಯಂಡ್ ಟೀಂ 7 ದಿನ ಪೊಲೀಸ್ ಕಸ್ಟಡಿಗೆ
ಕಳವು ಮಾಡಿದ ಕಾರುಗಳ ನಂಬರ್ ಪ್ಲೇಟ್, ಚಾರ್ಸಿ ನಂಬರ್ ರಬ್ ಮಾಡಿ ಹೊಸ ಚಾರ್ಸಿ ನಂಬರ್ ಹಾಕಿ ಸೆಕೆಂಡ್ ಹ್ಯಾಂಡ್ ಶೋ ರೂಂಗಳಿಗೆ ಮಾರಾಟ ಮಾಡುತ್ತಿದ್ದರು. ಕದ್ದ ಕಾರುಗಳನ್ನು ಕೇರಳ, ತಮಿಳುನಾಡು, ಉತ್ತರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಹಾಫ್ ರೇಟ್ ಚೀಪ್ ರೇಟ್ಗೆ ಮಾರಾಟ ಮಾಡುತ್ತಿದ್ದರು.
ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವ ಮುನ್ನ ಸ್ವಲ್ಪ ಎಚ್ಚರವಹಿಸಿ
ಸದ್ಯ ಮೂರು ಕೋಟಿ ಮೌಲ್ಯದ ಫಾರ್ಚುನರ್, ಇನೋವಾ ಸೇರಿದಂತೆ ಎಂಟು ಹೈ ಎಂಡ್ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಇಂತಹ ಪ್ರಕರಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವ ಮುನ್ನ ಸ್ವಲ್ಪ ಎಚ್ಚರವಹಿಸಿ. ಇಲ್ಲದಿದ್ರೆ ನಿಮಗೂ ಟೋಪಿ ಬೀಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ