ಬೆಂಗಳೂರು: ಈತ ಒಂದಲ್ಲ ಎರಡಲ್ಲ ಅಂತ ಮೂರು ಮದುವೆಯಾದ (Marriage). ಕಾರ್ಪೆಂಟರ್ ಕೆಲಸ (Carpenter Work) ಮಾಡಿಕೊಂಡು ಜೀವನ ಮಾಡುತ್ತಿದ್ದ. ಆದರೆ ಕೆಲಸ ಮಾಡಿ ಬಂದ ದುಡಿಮೆಯನ್ನೆಲ್ಲಾ (Labor) ಹೆಂಡಕ್ಕೆ ಮೀಸಲಿಡುತ್ತಿದ್ದ. ಹೌದು, ಪ್ರತಿನಿತ್ಯ ಕುಡಿತ ಮಾತ್ರ ಮಿಸ್ ಆಗಲ್ಲ, ಕುಡಿತಕ್ಕೆ ಹಣ ಹಣ ಸಾಕಾಗಿಲ್ಲ ಎಂದರೆ ಹೆಂಡತಿ ಕೂಲಿ ಮಾಡಿ ತರುತ್ತಿದ್ದ ಹಣವನ್ನು ಕಿತ್ತುಕೊಂಡು ಹೋಗುತ್ತಿದ್ದ. ಆದರೆ ಹೆಂಡತಿ (Wife) ಕುಡಿತ ಬಿಡುವಂತೆ ಎಷ್ಟೇ ಹೇಳಿದರೂ ಆತನ ಮಾತ್ರ ಹೆಂಡದಿಂದ ದೂರವಾರಿಲಿಲ್ಲ. ಆದರೆ ಕುಡಿದ ಮೇಲೆ ಈಗ ನೀಡುತ್ತಿದ್ದ ಟಾರ್ಚರ್ ತಡಿಯಲಾಗದೆ ಈತನ ಇಬ್ಬರು ಹೆಂಡತಿಯರು ಬಿಟ್ಟು ದೂರ ಹೋಗಿದ್ದರು. ಸದ್ಯ ಮೂರನೇ ಹೆಂಡತಿ ಬಳಿ ಇದ್ದವ ಕುಡಿತದ ಮತ್ತಿನಲ್ಲೇ ರಸ್ತೆ ಪಕ್ಕದ ಮರಕ್ಕೆ ತನ್ನ ಪಂಚೆಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ವ್ಯಕ್ತಿಯನ್ನು ಮಾದೇವ ಎಂದು ಗುರುತಿಸಲಾಗಿದ್ದು, ಮೂಲತಃ ಚನ್ನಪಟ್ಟಣದ ನಿವಾಸಿಯಾಗಿದ್ದ. 15 ವರ್ಷಗಳ ಹಿಂದೆ ಯಶೋದಾ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾದ ಬಳಿಕ ಇಬ್ಬರು ಮಕ್ಕಳು ಮಕ್ಕಳಿದ್ದು, ಕುಡಿತಕ್ಕೆ ದಾಸನಾಗಿದ್ದ. ಪ್ರತಿನಿತ್ಯ ಕುಡಿಯುವುದು ಹೆಂಡತಿ ಮಕ್ಕಳಿಗೆ ಟಾರ್ಚರ್ ನೀಡುವುದನ್ನೇ ಈತ ಕಾಯಕ ಮಾಡಿಕೊಂಡಿದ್ದ.
ಇದನ್ನೂ ಓದಿ: Bengaluru-Mysuru Expresswayನಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಗುಡ್ನ್ಯೂಸ್; ನಾಳೆಯಿಂದಲೇ ಕಟ್ಟಬೇಕಿಲ್ಲ ಟೋಲ್!
ಪೊಲೀಸರು ಸರಿಯಾಗಿ ಜೀವನ ನಡೆಸುವಂತೆ ಬುದ್ಧಿ ಮಾತು ಹೇಳಿದ್ದರು
ಗಂಡನ ಕಾಟ ತಾಳಲಾರದೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಪೊಲೀಸರು ಗಂಡನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೂ ನಿನ್ನೆ ಕುಡಿದು ಬಂದು ಹೆಂಡತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಇದರಿಂದ ಗಾಬರಿಗೊಂಡ ಪತ್ನಿ ಯಶೋಧಾ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಮನೆ ಬಳಿ ಬಂದು ಬುದ್ದಿವಾದ ಹೇಳಿ ಹೋದ್ದರು. ಆದರೆ ಈತ ಪಾಪರೆಡ್ಡಿಪಾಳ್ಯದ ರಸ್ತೆ ಬದಿಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೃತನ ಪತ್ನಿ ಯಶೋಧಾ, ಊಟ ಮಾಡುತ್ತಾ ತಟ್ಟೆಯನ್ನು ಬೀಸಾಡುವುದು. ಮನೆಯಲ್ಲಿ ಅನ್ನ ಮಾಡುತ್ತಿದ್ದಾರೆ ನೀರು ಹಾಕೋದು, ಕೆಟ್ಟದಾಗಿ ಮಾತನಾಡುವುದು. ಹೊಡೆಯುವುದನ್ನು ನಿತ್ಯ ಮಾಡುತ್ತಿದ್ದ. ಮಕ್ಕಳನ್ನು ನೋಡಿಕೊಂಡು ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದೆ. ದಿನದ 24 ಗಂಟೆಯೂ ಚಿತ್ರಹಿಂಸೆ ಕೊಡುತ್ತಿದ್ದ ಎಂದು ಹೇಳಿದ್ದಾರೆ.
ಮೂರು ಮದುವೆ ಆಗಿದ್ದ ಮಾದೇವ ಕುಡಿತಕ್ಕೆ ದಾಸ!
ರಾಮನಗರ ಜಿಲ್ಲೆ ಚನ್ನಪಟ್ಟಣದ ಮಾದೇವನಿಗೆ ಯಶೋದಗಿಂತಲೂ ಮೊದಲೇ ಇಬ್ಬರ ಜೊತೆಗೆ ಮದುವೆ ಆಗಿತ್ತು. ಆದರೆ ಈತನ ಕಾಟ ತಾಳಲಾರದೆ ಅವರು ಬಿಟ್ಟು ಹೋಗಿದ್ದರು. ಯಶೋದಾ ಮದುವೆ ಆದ ಮೇಲೆ ಸ್ವಲ್ಪ ಬುದ್ಧಿ ಹೇಳಿಕೊಂಡು ಜೀವನ ಮಾಡುತ್ತಿದ್ದರು. ಆದರೆ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಮಾದೇವ ಎಲ್ಲಾ ಹಣದಲ್ಲೂ ಕುಡಿದು ರಂಪಾಟ ಮಾಡುತ್ತಿದ್ದ. ಕುಡಿತದ ಚಟದಿಂದಲೇ ಕುಡಿದ ಮತ್ತಿನಲ್ಲಿ ರಸ್ತೆ ಬದಿಯ ಮರಕ್ಕೆ ಪಂಚೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Crime News: ಪ್ರೀತಿಸಿ ಸಾವಿರ ಕನಸುಗಳೊಂದಿಗೆ ಮದುವೆಯಾಗಿದ್ದ ಯುವತಿ ನೇಣಿಗೆ ಶರಣು; ಪತಿ ವಿರುದ್ಧ ಕಿರುಕುಳ ಆರೋಪ!
ಇಬ್ಬರು ಹೆಂಡತಿಯರಿಂದ ದೂರ ಆಗಿದ್ದ ಮಾದೇವ ಮೂರನೇ ಮದುವೆಯಾಗಿ ಇಬ್ಬರು ಮಕ್ಕಳಿದರೂ ಕುಡಿತಕ್ಕೆ ದಾಸನಾಗಿ ಸಂಸಾರ ಹಾಳು ಮಾಡಿದ್ದು ಮಾತ್ರವಲ್ಲದೆ ತನ್ನ ಜೀವನವನ್ನೂ ಅಂತ್ಯ ಮಾಡಿಕೊಂಡಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ