• ಹೋಂ
  • »
  • ನ್ಯೂಸ್
  • »
  • Crime
  • »
  • Tumakuru: ಕ್ಯಾನ್​​​ಗೆ ಪೆಟ್ರೋಲ್​​​ ತುಂಬಿಸಿಕೊಳ್ಳುವಾಗ ಹೊತ್ತಿಕೊಂಡ ಬೆಂಕಿ; ಮಗಳು ಸಾವು, ತಾಯಿ ಆಸ್ಪತ್ರೆಗೆ ದಾಖಲು

Tumakuru: ಕ್ಯಾನ್​​​ಗೆ ಪೆಟ್ರೋಲ್​​​ ತುಂಬಿಸಿಕೊಳ್ಳುವಾಗ ಹೊತ್ತಿಕೊಂಡ ಬೆಂಕಿ; ಮಗಳು ಸಾವು, ತಾಯಿ ಆಸ್ಪತ್ರೆಗೆ ದಾಖಲು

ಕ್ಯಾನ್​​ಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ದೃಶ್ಯ

ಕ್ಯಾನ್​​ಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ದೃಶ್ಯ

ದ್ವಿಚಕ್ರ ವಾಹನದ ಮೇಲೆ ಕ್ಯಾನ್ ಇಟ್ಟು ಪೆಟ್ರೋಲ್ ತುಂಬಿಸುವಾಗ ಅನಾಹುತ ನಡೆದಿದ್ದು, ಮಗಳು ಭವ್ಯಳೊಂದಿಗೆ ಪೆಟ್ರೋಲ್ ಬಂಕಿಗೆ ಬಂದಿದ್ದ ತಾಯಿ ರತ್ನಮ್ಮ ಗಾಯಗೊಂಡಿದ್ದಾರೆ.

  • News18 Kannada
  • 2-MIN READ
  • Last Updated :
  • Tumkur, India
  • Share this:

ತುಮಕೂರು: ಪೆಟ್ರೋಲ್​ ಬಂಕ್​​ನಲ್ಲಿ (Petrol Station) ಕ್ಯಾನ್​ಗೆ ಪೆಟ್ರೋಲ್ ತುಂಬಿಸುವಾಗ ಬೆಂಕಿ ಹತ್ತಿಕೊಂಡು ಆಸ್ಪತ್ರೆಗೆ (Hospital) ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಯುವತಿ ಸಾವನ್ನಪ್ಪಿದ್ದು, ತುಮಕೂರು (Tumakuru) ಜಿಲ್ಲೆ ಮಧುಗಿರಿ ತಾಲೂಕಿನ ಬಡವನಹಳ್ಳಿ ಗ್ರಾಮದ ಪೆಟ್ರೋಲ್‌ ಬಂಕ್​​​ನಲ್ಲಿ ದುರ್ಘಟನೆ ನಡೆದಿದೆ. ಬೈಕ್‌ಗೆ ಬೆಂಕಿ ಹತ್ತಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಮೃತ ಯುವತಿಯನ್ನು 18 ವರ್ಷದ ಭವ್ಯ ಎಂದು ಗುರುತಿಸಲಾಗಿದೆ. ಇನ್ನು, ರತ್ನಮ್ಮ (46) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು


ದ್ವಿಚಕ್ರ ವಾಹನದ ಮೇಲೆ ಕ್ಯಾನ್ ಇಟ್ಟು ಪೆಟ್ರೋಲ್ ತುಂಬಿಸುವಾಗ ಅನಾಹುತ ನಡೆದಿದ್ದು, ಮಗಳು ಭವ್ಯಳೊಂದಿಗೆ ಪೆಟ್ರೋಲ್ ಬಂಕಿಗೆ ಬಂದಿದ್ದ ತಾಯಿ ರತ್ನಮ್ಮ ಗಾಯಗೊಂಡಿದ್ದಾರೆ. ಮೃತ ದುರ್ದೈವಿ ಶಿರಾ ತಾಲೂಕಿನ ಜವನಹಳ್ಳಿ ನಿವಾಸಿಗಳಾಗಿದ್ದು, ಗಾಯಾಳು ಮಹಿಳೆಯನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಇದನ್ನೂ ಓದಿ: Siddaramaiah: ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಸಿದ್ದು ಪೋಸ್ಟರ್‌ಗೆ​​​ ಮಸಿ!


ಬಳಿಕ ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕಳೆದ ಬುಧವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.




ಕೆರೆಯ ನೀರಿಗೆ ಬಿದ್ದು ಮಹಿಳೆ ಸಾವು


ತೀರ್ಥಹಳ್ಳಿ ಮೇಲಿನಕುರುವಳ್ಳಿಯ ಬಳಿ ಕೆರೆಯ ನೀರಿಗೆ ಬಿದ್ದು ಮಹಿಳೆಯೊಬ್ಬಳು ಮೃತಪಟ್ಟಿದ್ದು ಇದೀಗ ಆಕೆಯ ನಾಲ್ಕು ಅವಳಿ ಜವಳಿ ಮಕ್ಕಳು ಅನಾಥವಾಗಿವೆ. ಶೃತಿ(36) ಎಂಬ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೇಲಿನ ಕುರುವಳ್ಳಿ ಬಂಡೆಯಲ್ಲಿ ನಿಂತಿರುವ ನೀರಿಗೆ ಹಾರಿ ಶೃತಿ ಎಂಬಾಕೆ ಮೃತ ಪಟ್ಟಿದ್ದಾರೆ. ಈಕೆ ಕುರುವಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದು, ನಾಲ್ಕು ಮಂದಿ ಅವಳಿ ಜವಳಿ ಮಕ್ಕಳು ಇವೆ. ಪತಿಯ ಅತಿಯಾದ ಸಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಆತನ ಪತಿಯನ್ನು ಅನುಮಾನದ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಇನ್ನು ನದಿಯಲ್ಲಿ ಈಜಲು ಹೋಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊರಬೈಲು ಬುಕ್ಲಾಪುರ ಸಮೀಪ ನಡೆದಿದೆ. ಮಧ್ಯಾಹ್ನ ಘಟನೆ ನಡೆದಿದ್ದು ಶುಕ್ರವಾರ ಶವ ಪತ್ತೆಯಾಗಿದೆ. ಹೊರಬೈಲಿನ ಮರಗೆಲಸ ಮಾಡುತ್ತಿರುವ ವೆಂಕಟೇಶ ಆಚಾರ್ಯ ಅವರ ಪುತ್ರ ಮಾಧವ್ ಈಜಲು ಹೋದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. 3 ರಿಂದ 4 ಸ್ನೇಹಿತರು ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

First published: