• Home
 • »
 • News
 • »
 • crime
 • »
 • Bengaluru: ತಾನು ಬಸ್​​​ ನಿಲ್ಲಿಸುತ್ತಿದ್ದಲ್ಲಿ ಬೇರೆ ವ್ಯಕ್ತಿ ವಾಹನ ನಿಲ್ಲಿಸಿದಕ್ಕೆ ಬರ್ಬರ ಕೊಲೆ; ಆರೋಪಿ ಅರೆಸ್ಟ್​

Bengaluru: ತಾನು ಬಸ್​​​ ನಿಲ್ಲಿಸುತ್ತಿದ್ದಲ್ಲಿ ಬೇರೆ ವ್ಯಕ್ತಿ ವಾಹನ ನಿಲ್ಲಿಸಿದಕ್ಕೆ ಬರ್ಬರ ಕೊಲೆ; ಆರೋಪಿ ಅರೆಸ್ಟ್​

ಮೃತ ವೆಂಕಟ ಸ್ವಾಮಿ

ಮೃತ ವೆಂಕಟ ಸ್ವಾಮಿ

ತಾನು ಬಸ್ ನಿಲ್ಲಿಸುತ್ತಿದ್ದ ಜಾಗದಲ್ಲಿ ಬಸ್ ನಿಲ್ಲಿಸಿದ್ದಾನೆಂದು ಕಿರಿಕ್ ತೆಗೆದಿದ್ದ ಹಂತಕ, ಬಸ್ಸಿನ ಗಾಜನ್ನು ಕಲ್ಲಿನಲ್ಲಿ ಒಡೆದು ಹಾಕಿ ಕಿರಿಕ್ ಮಾಡಿದ್ದನಂತೆ. ಬಳಿಕ ಕೊಲೆ ಮಾಡುವ ಉದ್ದೇಶದಿಂದಲೇ ವೆಂಟಕ ಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನಂತೆ.

 • News18 Kannada
 • 3-MIN READ
 • Last Updated :
 • Bangalore, India
 • Share this:

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರದ (Bengaluru) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ (Kamakshi Palya Police Station ) ವ್ಯಾಪ್ತಿಯ ಸಾಗರ್ ಫ್ಲೈ ವುಡ್ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ವೆಂಕಟ ಸ್ವಾಮಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ವೆಂಕಟೇಶ್ ಎಂಬಾತನನ್ನು ಬಂಧನ ಮಾಡಿದ್ದಾರೆ. ದಿನನಿತ್ಯ ಆರೋಪಿ ವೆಂಕಟೇಶ್​ ಬಸ್​ ನಿಲ್ಲಿಸುತ್ತಿದ್ದ ಸ್ಥಳದಲ್ಲಿ ವೆಂಕಟಸ್ವಾಮಿ ಬಸ್ (Bus Stop)​ ನಿಲ್ಲಿಸಿದ್ದ ಕಾರಣ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ಸಂಗತಿ ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.


ಏನಿದು ಪ್ರಕರಣ?


ಜನವರಿ 13ರ ಶುಕ್ರವಾರ ಸಾಗರ್ ಫ್ಲೈ ವುಡ್ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಮೃತ ವ್ಯಕ್ತಿಯ ಗುರುತು ಪತ್ತೆ ಕಾರ್ಯಕ್ಕಾಗಿ ಪೊಲೀಸರು ಸಿಸಿಟಿವಿ ಸೇರಿ ಇನ್ನಿತರ ಮಾರ್ಗದಲ್ಲಿ ತನಿಖೆ ನಡೆಸಿದ್ದರು. ಈ ವೇಳೆ ಮೃತ ವ್ಯಕ್ತಿ ವೆಂಕಟ ಸ್ವಾಮಿ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.


ಇದನ್ನೂ ಓದಿ: Shocking Crime: ಡ್ರಮ್​ನಲ್ಲಿತ್ತು ಮಹಿಳೆಯ ದೇಹ! ವರ್ಷದ ಹಿಂದೇ ನಡೆದಿತ್ತಾ ಬರ್ಬರ ಕೊಲೆ?


ಆರೋಪಿ ವೆಂಕಟೇಶ್


ಇನ್ನು, ಮೃತ ವ್ಯಕ್ತಿಯ ಎಲುವುಗಳು ಮುರಿದ ವಿಚಾರ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ಇದರಿಂದ ವ್ಯಕ್ತಿಯ ಸಾವು ಕೊಲೆ ಎಂಬ ಸಂಶಯದ ಮೇರೆಗೆ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ ವೇಳೆ ಆರೋಪಿ ವೆಂಕಟೇಶ್​ ಗುರುತು ಸಿಕ್ಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದನಂತೆ. ಕೊಲೆಗೆ ಕಾರಣವನ್ನು ಬಾಯ್ಬಿಟ್ಟಿದ್ದು, ದಿನ ನಿತ್ಯ ತಾನು ಬಸ್ ನಿಲ್ಲಿಸುತ್ತಿದ್ದ ಜಾಗದಲ್ಲಿ ಅಂದು  ಬಸ್ ನಿಲ್ಲಿಸಿದಕ್ಕೆ ಕೊಲೆ ವೆಂಟಕಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದನಂತೆ.
ಅಸಲಿಗೆ ನಡೆದಿದ್ದೇನು?


ಜಿಟಿ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಬಳಿ ಬಸ್ ನಿಲ್ಲಿಸಿ ಮೃತ ವೆಂಕಟ ಸ್ವಾಮಿ ಅಂದು ಮಲಗಿದ್ದರಂತೆ. ಆದರೆ ಈ ಸ್ಥಳದಲ್ಲಿ ವೆಂಕಟೇಶ್ ನಿತ್ಯ ಬಸ್​ ನಿಲ್ಲಿಸುತ್ತಿದ್ದನಂತೆ. ತಾನು ಬಸ್ ನಿಲ್ಲಿಸುತ್ತಿದ್ದ ಜಾಗದಲ್ಲಿ ಬಸ್ ನಿಲ್ಲಿಸಿದ್ದಾನೆಂದು ಕಿರಿಕ್ ತೆಗೆದಿದ್ದ ಹಂತಕ, ಬಸ್ಸಿನ ಗಾಜನ್ನು ಕಲ್ಲಿನಲ್ಲಿ ಒಡೆದು ಹಾಕಿ ಕಿರಿಕ್ ಮಾಡಿದ್ದನಂತೆ. ಬಳಿಕ ಒಳ ಬಂದು ವೆಂಕಟಸ್ವಾಮಿ ಜೊತೆ ಜಗಳವಾಡಿದ್ದನಂತೆ.


ಅಲ್ಲದೇ, ಕೊಲೆ ಮಾಡುವ ಉದ್ದೇಶದಿಂದಲೇ ವೆಂಟಕ ಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನಂತೆ. ಮೃತ ವ್ಯಕ್ತಿಯ ಎದೆ ಭಾಗಕ್ಕೆ ಕಾಲಿನಲ್ಲಿ ಬಲವಾಗಿ ಒದ್ದು ಬರ್ಬರವಾಗಿ ಕೊಲೆ ಮಾಡಿದ್ದು, ಬಳಿಕ ಅಲ್ಲಿಂದ ಮೃತದೇಹವನ್ನು ತೆಗೆದುಕೊಂಡು ಸುಂಕದಕಟ್ಟೆ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದನಂತೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.


ಇದನ್ನೂ ಓದಿ: Crime News: ಪ್ರಿಯಕರನಿಗಾಗಿ ಗಂಡನ ಕೊಲೆಗೆ ಸ್ಕೆಚ್​​​; ಆದ್ರೆ ಕೊನೆಯಲ್ಲಿ ಪ್ರೇಮಿಯೇ ಮಟಾಷ್​, ಶವದೊಂದಿಗೆ ಬೈಕ್​​ನಲ್ಲಿ ಥ್ರಿಬಲ್​ ರೈಡ್


ಪುತ್ರಿಯರ ಜೊತೆ ನದಿಗೆ ಹಾರಿದ ತಾಯಿ


ಬಾಗಲಕೋಟೆ ಜಿಲ್ಲೆಯಲ್ಲಿ (Bagalakote) ಮತ್ತೊಂದು ಸಾಮೂಹಿಕ ಆತ್ಮಹತ್ಯೆ ಪ್ರಕರಣ ನಡೆದಿದೆ. ತಾಯಿಯೊಬ್ಬಳು ತನ್ನ (Mother) ಇಬ್ಬರು ಪುತ್ರಿಯರ ಜತೆ (Daughters) ಘಟಪ್ರಭಾ ನದಿಗೆ (Ghataprabha River) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುನಗುಂದ ತಾಲೂಕಿನ ಕಮತಗಿ ಗ್ರಾಮದಲ್ಲಿ ನಡೆದಿದೆ.


45 ವರ್ಷದ ತಾಯಿ ಉಮಾ ಮಾಸರೆಡ್ಡಿ, 20 ವರ್ಷದ ಐಶ್ವರ್ಯ, 18 ವರ್ಷದ ಸೌಂದರ್ಯ ಮೃತ ದುರ್ವೈವಿಗಳು. ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ನದಿಗೆ ಹಾರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮಲಪ್ರಭಾ ನದಿಯಿಂದ ಶವಗಳನ್ನು ಹೊರತೆಗೆದರು. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:Sumanth SN
First published: