ಬೆಂಗಳೂರು: ಇವರಿಬ್ಬರು ಸ್ನೇಹಿತರು (Friends), ಹಣಕಾಸಿನ (Finance) ಹಿನ್ನೆಲೆ ಸ್ವಲ್ಪ ವೈಮನಸ್ಸಿತ್ತು. ಅದೇ ವಿಚಾರದಲ್ಲಿ ಮುಖಾಮುಖಿ ಆದಾಗ ಕತ್ತಿ ಮಸೆಯುತ್ತಿದ್ದರು. ರಾತ್ರಿ ಕುಡಿದ ಅಮಲಿನಲ್ಲಿ ಹಳೆ ಸ್ನೇಹಿತರ ನಡುವೆ ಕಿರಿಕ್ ಶುರುವಾಗಿದ್ದು, ಈ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು, ಫೆಬ್ರವರಿ 10ರ ರಾತ್ರಿ 11:30ರ ಸಮಯದಲ್ಲಿ ಬೆಂಗಳೂರಿನ (Bengaluru) ಕೋಣನಕುಂಟೆ ಕ್ರಾಸ್ (Konanakunte) ಬಳಿಯ ಮಂದಾರ್ತಿ ಹೋಟೆಲ್ ಬಳಿ ನಾಲ್ಕೈದು ಜನ ಜಗಳವಾಡುತ್ತಿದ್ದರು. ದಾರಿಯಲ್ಲಿ ಯಾರೋ ಕುಡಿದು ಗಲಾಟೆ (Fight) ಮಾಡುತ್ತಿದ್ದಾರೆ, ಯಾವಾಗಲೂ ಇದು ಇದ್ದಿದ್ದೆ ಅಂತ ಜನ ಕೂಡ ಮಾತನಾಡಿಕೊಂಡು ಸುಮ್ಮನಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಸ್ಥಳದಲ್ಲಿ ಯುವಕನ (Youth) ರಕ್ತ ಚೆಲ್ಲಿತ್ತು. ಎದುರಾಳಿಯ ಮೇಲೆ ಅಟ್ಯಾಕ್ ಮಾಡಲು ಕೈಲಿ ಚಾಕು ಹಿಡಿದು ಬಂದವನು ಎದುರಾಳಿಗೆ ಇರಿಯಲು ಮುಂದಾಗಿದ್ದ, ಆದರೆ ತಾನೇ ಚಾಕು ಇರಿತಕ್ಕೆ ಬಲಿಯಾಗಿದ್ದಾನೆ. ಮೃತ ಯುವಕನನ್ನು ಶರತ್ ಎಂದು ಗುರುತಿಸಲಾಗಿದ್ದು, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಏನಿದು ಪ್ರಕರಣ?
ಕೋಣನಕುಂಟೆ ನಿವಾಸಿ ಶರತ್ ಹಾಗೂ ಅದೇ ಏರಿಯಾದ ಲೋಕೇಶ್ ಇಬ್ಬರು ಸ್ನೇಹಿತರು. ಕೆಲ ವರ್ಷಗಳ ಹಿಂದೆ ಜೊತೆಯಲ್ಲೇ ಹಣಕಾಸಿನ ವ್ಯವಹಾರ ಮಾಡುತ್ತಿದ್ದರು. ಆದರೆ ಇದರ ನಡುವೆ ಇಬ್ಬರ ನಡುವೆ ವೈಮನಸ್ಸು ಮೂಡಿ ದೂರ ಆಗಿದ್ದರು. ಆ ಬಳಿಕ ಸ್ನೇಹಿತರಾಗಿದ್ದವರು ಬದ್ಧ ವೈರಿಗಳಾಗಿ ಬದಲಾಗಿದ್ದರು.
ಫೆಬ್ರವರಿ 10ರ ರಾತ್ರಿ ಕೋಣನಕುಂಟೆ ಕ್ರಾಸ್ ಬಳಿಯ ಬಾರ್ನಲ್ಲಿ ಕುಡಿಯಲು ಬಂದಿದ್ದ ಶರತ್ನನ್ನ ನೋಡಿದ ಲೋಕೇಶ್ ಗುರಾಯಿಸಿದ್ದ. ಅಲ್ಲದೆ ಅಲ್ಲೇ ಇದ್ದ ಬಾಟಲ್ ತೆಗೆದು ಟೇಬಲ್ಗೆ ಹೊಡೆದಿದ್ದ. ಇದರಿಂದ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಲೋಕೇಶ್ ಹಾಗೂ ಆತನ ಜೊತೆಗಿದ್ದ ಸಂತೋಷ್ ಹಲ್ಲೆ ಮಾಡಿದ್ದರು.
ಚಾಕು ಹಾಕಲು ಬಂದವನನ್ನೇ ಮುಗಿಸಿದ್ರು!
ಹಲ್ಲೆ ಮಾಡಿದ್ದಕ್ಕೆ ಆಕ್ರೋಶಗೊಂಡ ಶರತ್, ಪಕ್ಕದಲ್ಲೇ ಇದ್ದ ಅಂಗಡಿಗೆ ಹೋಗಿ ಚಾಕು ತೆಗೆದುಕೊಂಡು ಬಂದು ಲೋಕೇಶ್ ಮೇಲೆ ಅಟ್ಯಾಕ್ ಮಾಡಿದ್ದ. ಆ ವೇಳೆ ಶರತ್ ಮೇಲೆ ಲೋಕೇಶ್ ಹಾಗೂ ಸಂತೋಷ್ ಅಟ್ಯಾಕ್ ಮಾಡಿ, ತಮ್ಮ ಬಳಿ ಇದ್ದ ಚಾಕು ತೆಗೆದುಕೊಂಡು ಶರತ್ ಎದೆಗೆ ಬಲವಾಗಿ ಚುಚ್ಚಿದ್ದರಂತೆ. ಆ ವೇಳೆ ತೀವ್ರ ರಕ್ತಸ್ರಾವಕ್ಕೊಳಗಾದ ಶರತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಓರ್ವ ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಗಲಾಟೆಯಲ್ಲಿ ಶರತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಲೋಕೇಶ್ ಮತ್ತು ಸಂತೋಷ್ ಆರೋಪಿಗಳಿದ್ದಾರೆ. ಲೋಕೇಶ್ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದೇವೆ. ಏಕಾಏಕಿ ಒಬ್ಬರ ಮೇಲೆ ಒಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ. ಇದರಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ದಕ್ಷಿಣ ವಿಭಾಗ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
ಗಲಾಟೆಯಲ್ಲಿ ಆರೋಪಿ ಲೋಕೇಶ್ ಕೈ ನರಗಳು ಸಹ ಕಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಗಳನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ