ಬೆಂಗಳೂರು: ಅವರಿಬ್ಬರು ಆತ್ಮೀಯ ಸ್ನೇಹಿತರು (Friends). ಗಾರೆ ಕೆಲಸ (Contraction Work) ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಮಾರ್ಚ್ 24ರ ಮಟ ಮಟ ಮಧ್ಯಾಹ್ನ ಎಣ್ಣೆ ಕುಡಿಯಲು ಬಾರಿಗೆ ಬಂದವರು ಕಿತ್ತಾಡಿಕೊಂಡಿದ್ದಾರೆ. ಆಮೇಲೆ ಬಾರ್ ನಿಂದ (Bar) ಸಿಬ್ಬಂದಿ ಹೊರ ಕಳಿಸಿದ ಮೇಲೆ ನಡೆಯಬಾರದ ಘಟನೆಯೊಂದು ನಡೆದಿದೆ. ಹೌದು, ಕ್ಷುಲಕ ಕಾರಣಕ್ಕೆ ಗೆಳೆಯ ನಡುವೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಮೃತ ವ್ಯಕ್ತಿಯನ್ನು ನರೇಶ್ ಎಂದು ಗುರುತಿಸಲಾಗಿದೆ. ಮೃತ ನರೇಶ್ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಗೋವಿಂದರಾಜ ನಗರದಲ್ಲಿ (Govindraj Nagar) ವಾಸವಿದ್ದ. ಗಾರೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ. ಆದರೆ ಶುಕ್ರವಾರ ಬೆಳಗ್ಗೆ 11 ಗಂಟೆ ವೇಳೆಗೆ ಕಬ್ಬಿನ ಹಾಲು (Sugarcane Juice) ಕುಡಿದು ಬರುತ್ತೇನೆ ಅಂತ ಮನೆಯಿಂದ (Home) ಹೊರಗೆ ಬಂದವನು ಕೊಲೆಯಾಗಿ (Murder) ಹೋಗಿದ್ದಾನೆ.
ನರೇಶ್ ಕಬ್ಬಿನ ಹಾಲು ಕುಡಿಯುತ್ತೇನೆ ಎಂದು ಮನೆಯಲ್ಲಿ ಹೇಳಿ ಸ್ನೇಹಿತ ಮಾರಿಮುತ್ತು ಹಾಗೂ ಇನ್ನಿಬ್ಬರ ಜೊತೆ ಬಾರ್ಗೆ ಆಗಮಿಸದಿದ್ದನಂತೆ. ಬಾರ್ನಲ್ಲಿ ಕುಡಿದು ಸ್ನೇಹಿತರ ಮಧ್ಯೆ ಕಿರಿಕ್ ಆಗಿದೆ. ಮಾರಿಮುತ್ತುವನ್ನು ನರೇಶ್ ಹೀಯಾಳಿಸಿದ್ದನಂತೆ.
ಇದನ್ನೂ ಓದಿ: Bengaluru: ನಕಲು ಪ್ರತಿಯಲ್ಲಿ 49 ಅಂಕ, ಫಲಿತಾಂಶದಲ್ಲಿ 4 ಅಂಕ, ಬೆಂಗಳೂರು ವಿವಿ ಎಡವಟ್ಟು
ವಾಪಸ್ ಹೊರಬಂದ ಗೆಳೆಯರು ರಸ್ತೆಯುದ್ದಕ್ಕೂ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಆರೋಪಿ ಮಾರಿಮುತ್ತು, ನರೇಶ್ ತಲೆಗೆ ಫುಟ್ಬಾತ್ ಮೇಲಿದ್ದ ಸಿಮೆಂಟ್ ಕಲ್ಲಿನಿಂದ ಹೊಡೆದಿದ್ದಾನೆ. ಕುಡಿದ ಮತ್ತಲ್ಲಿದ್ದ ನರೇಶ್ ಒಂದೇ ಏಟಿಗೆ ನೆಲಕ್ಕುರುಳಿಬಿದ್ದು ತೀವ್ರ ರಕ್ತಸ್ರಾವವಾಗಿ ಉಸಿರು ನಿಲ್ಲಿಸಿದ್ದಾನೆ.
ಘಟನೆ ಸಂಬಂಧ ಮೃತ ನರೇಶ್ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಆರೋಪಿಗಳು ಸಿಕ್ಕ ಬಳಿಕವಷ್ಟೇ ಘಟನೆಗೆ ನಿಖರ ಕಾರಣ ಏನು ಅನ್ನೋದು ಗೊತ್ತಾಗಬೇಕಿದೆ.
ಕ್ಷುಲಕ ಕಾರಣಕ್ಕೆ ಜಗಳ; ಯುವಕನ ಕೈ ಕಟ್
ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ನಡುವೆ ಗಲಾಟೆ ನಡೆದು ಓರ್ವ ಯುವಕನ ಕೈ ಕಟ್ ಆಗಿರುವ ಘಟನೆ ಬೆಂಗಳೂರಿನ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಲಾಟೆಯಲ್ಲಿ ತರುಣ್ ಎಂಬ ಯುವಕನ ಕೈ ಕಟ್ ಆಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡಿರುವ ಯುವಕನನ್ನು ಸ್ಥಳೀಯ ಕಾಮಧೇನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗೋವಿಂದರಾಜ ನಗರದ ನಚಿಕೇತ ಪಾರ್ಕ್ ಬಳಿ ಗಲಾಟೆ ನಡೆದಿದೆ. ಇನ್ನು ಆಸ್ಪತ್ರೆಗೆ ಭೇಟಿ ನೀಡಿರುವ ಗೋವಿಂದರಾಜ ನಗರ ಠಾಣೆಯ ಇನ್ಸ್ ಪೆಕ್ಟರ್ ಗಾಯಾಳು ಬಳಿ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ: PM Modi: ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಜ್ಜುಗೊಂಡ ವೈಟ್ಫೀಲ್ಡ್ ಮೆಟ್ರೋ ನಿಲ್ದಾಣ; ಭಾರೀ ಪೊಲೀಸ್ ಭದ್ರತೆ!
ಸ್ನೇಹಿತ ನಡುವೆ ಗಲಾಟೆ; ಓರ್ವ ಸಾವು
ಕ್ಷುಲಕ ಕಾರಣಕ್ಕೆ ಮೂವರು ಸ್ನೇಹಿತರ ನಡುವೆ ಜಗಳ ಆರಂಭವಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಲ್ಲಿನಾಥ್ ಬಿರಾದರ್ ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಮಂಜುನಾಥ್ ಮತ್ತು ಆರೋಪಿ ಗಣೇಶ್ ಎಂಬಾತ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ