ಬೆಂಗಳೂರು: ಪಶ್ಚಿಮ ಬಂಗಾಳದಿಂದ (West Bengal) ಬೆಂಗಳೂರಿಗೆ (Bengaluru) ಕೆಲಸಕ್ಕೆ ಬಂದಿದ್ದವರಿಗೆ ಉಡುಪಿ (Udupi) ಮೂಲದ ಸ್ನೇಹಿತ ಕೂಡಾ ಜೊತೆಯಾಗಿದ್ದ. ಹೀಗೆ ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡು, ಮೂವರು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಒಟ್ಟಿಗೆ ಇದ್ದ ಮೂವರ ಮಧ್ಯೆ ಬೈಕ್ ಪಾರ್ಕಿಂಗ್ (Bike Parking ) ವಿಚಾರಕ್ಕೆ ದೊಡ್ಡ ಗಲಾಟೆಯಾಗಿ ಕೊಲೆಯೇ ನಡೆದು ಹೋಗಿದೆ. ಜಗಳದಲ್ಲಿ ಉಡುಪಿ ಮೂಲಕದ 29 ವರ್ಷದ ಜನಾರ್ದನ ಭಟ್ ಎಂಬಾತನ ಕೊಲೆಯಾಗಿದೆ. ಜನಾರ್ದನ ಭಟ್ ಪಶ್ಚಿಮ ಬಂಗಾಳ ಮೂಲದ ರಿಜ್ವಾನ್ ಮತ್ತು ಸುಲೇಮಾನ್ ಎಂಬ ಯುವಕರ ಜೊತೆಯಾಗಿದ್ದ. ಕಂಪನಿಯಲ್ಲಿ ಟಿವಿ ರಿಪೇರಿ (TV Mechanic) ಕೆಲಸ ಮಾಡಿಕೊಂಡಿದ್ದರು. ಒಂದೇ ಕಡೆ ಕೆಲಸ ಮಾಡುವವರು ಅಂತ ಮಾಲೀಕರು, ಯಲಹಂಕದ (Yelahanka) ಶ್ರೀನಿವಾಸಪುರದಲ್ಲಿರುವ, ವಿಶ್ವನಾಥನಗರದಲ್ಲಿರುವ ಸಾಯಿ ಸಮೃದ್ಧಿ ಸ್ಲಂ ಬೋರ್ಡ್ ಅಪಾರ್ಟ್ಮೆಂಟ್ ನಲ್ಲಿ ಒಂದು ಮನೆ ಮಾಡಿ ಕೊಟ್ಟಿದ್ದರು. ಆದರೆ ಇದೇ ಮನೆಯಲ್ಲಿ ಮಾರ್ಚ್ 29 ರಂದು ಕೊಲೆಯೇ ನಡೆದು ಹೋಗಿದೆ.
ಯುವಕನ ಕೈ-ಕಾಲು ಕಟ್ಟಿ, ಬಾಯಿಗೆ ಟೇಪ್ ಸುತ್ತಿ ಹತ್ಯೆ
ಹೌದು, ರಿಜ್ವಾನ್ ಹಾಗೂ ಸುಹೇಲ್ ಮತ್ತು ಜನಾರ್ದನ ಭಟ್ ನಡುವೆ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಜಗಳ ನಡೆಯುತ್ತಿತಂತೆ. ಇದು ಅಕ್ಕಪಕ್ಕದ ಮನೆಯವರ ಗಮನಕ್ಕೂ ಬಂದಿತ್ತು. ಅದೇ ಪಾರ್ಕಿಂಗ್ ವಿಚಾರಕ್ಕೆ ಜನಾರ್ದನ ಭಟ್ ಕೊಲೆಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ನಿವಾಸಿ ರುಕ್ಮಿಣಿ ಎಂಬವರು, ಮನೆಯಲ್ಲಿದ್ದ ಯುವಕರ ನಡುವೆ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಜಗಳ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಕೊಲೆಯಾದರೂ ರೂಮ್ನಲ್ಲಿದ್ದ ಇತರೇ ಯುವಕರು ಇದುವರೆಗೂ ಇತ್ತ ಬಂದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ! ಚಲಿಸುವ ಕಾರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರು ಅಂದರ್
ಜನಾರ್ದನ ಭಟ್ ಮೇಲೆ ಹಲ್ಲೆ ಮಾಡಿ ನಂತರ ವೈಯರ್ ನಿಂದ ಕೈ ಕಾಲು ಕಟ್ಟಿ, ಬಾಯಿಗೆ ಟೇಪ್ ಸುತ್ತಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದಾರೆ.
ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರು, ಕೊಲೆಯಾಗಿರುವ ಯುವಕನ ಜೊತೆಯಲ್ಲೇ ಇದ್ದ ಯುವಕರೇ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.ಘಟನೆ ಬಳಿಕ ಇಬ್ಬರು ನಾಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಾಗಿದೆ. ನಮ್ಮ ಪೊಲೀಸರು ಈಗಾಗಲೇ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ. ತನಿಖೆ ಮುಂದುವರೆಯುತ್ತಿದೆ ಎಂದು ತಿಳಿಸಿದ್ದಾರೆ.
ಅದೇನೇ ಹೇಳಿದರು ಸ್ನೇಹಿತರು ಅಂದಮೇಲೆ ಸಣ್ಣಪುಟ್ಟ ಜಗಳ, ತಮಾಷೆ ಸಾಮಾನ್ಯ. ಅದೇ ಸಣ್ಣ ವಿಚಾರಕ್ಕೆ ಓರ್ವನ ಕೊಲೆಯಾಗಿದ್ದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.
ಮನೆಗಳ್ಳತನ ಮಾಡುತ್ತಿದ್ದ ನೇಪಾಳಿ ಗ್ಯಾಂಗ್ ಬಂಧನ
ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ನೇಪಾಳಿ ಗ್ಯಾಂಗ್ನ ಸದಸ್ಯರನ್ನು ಬಂಧಿಸುವಲ್ಲಿ ಬೆಂಗಳೂರು ಯಶಸ್ವಿಯಾಗಿದ್ದಾರೆ. ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡಿ ಡೋರ್ ಬ್ರೇಕ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ಮೋಹನ್ ಬಿಸ್ವಕರ್ಮ, ಜನಕ್ ಜೈಶಿ, ಬಿಬೇಕ್ ರಾಜ್, ಸೀತಾರಾಮ್ ಜೈಸಿ, ಕಮಲ್ ಬಿಕೆ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಗ್ಯಾಂಗ್ ವಿದ್ಯಾರಣ್ಯಪುರದ ಮೂರು ಮನೆಯಲ್ಲಿ ಕೈಚಳಕ ತೋರಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ಹಾಗೂ ದುಬಾರಿ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿದ್ದರು. ಪ್ರರಕಣ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಮೇಲೆ ಬೆಂಗಳೂರಿನ ಹಲವು ಠಾಣೆಗಳು ಸೇರಿ ಮುಂಬೈನಲ್ಲೂ ಕಳ್ಳತನ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ 35 ಲಕ್ಷದ 80 ಸಾವಿರ ಬೆಲೆಬಾಳುವ ಚಿನ್ನ, ಬೆಳ್ಳಿ ವಸ್ತುಗಳು, ನಾಲ್ಕು ವಾಚ್, ಬೈಕ್ ಸೀಜ್ ಮಾಡಿದ್ದಾರೆ. ಕಳ್ಳನದ ಬಳಿಕ ಬೆಂಗಳೂರಿನಿಂದ ಎಸ್ಕೇಪ್ ಆಗುತ್ತಿದ್ದ ಆರೋಪಿಗಳು ನೇಪಾಳದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ