ಉತ್ತರ ಪ್ರದೇಶ: ಮದುವೆ (Marriage) ಆದರೂ ಪ್ರಿಯತಮನೊಂದಿಗೆ (lover) ಕಾಣಿಸಿಕೊಂಡ ಮಗಳ ಮೇಲೆ ಕುಪಿತಗೊಂಡ ತಂದೆ ತನ್ನ ಭಾವಮೈದುನನ ಜೊತೆ ಸೇರಿ ಆ್ಯಸಿಡ್ (Acid) ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ನಡೆದಿದೆ. ಮದುವೆಯಾದ 2 ದಿನದಲ್ಲಿ ಯುವತಿ ತನ್ನ ಪ್ರಿಯಕರನೊಂದಿಗೆ ಮಾತನಾಡುವುದನ್ನು ಕಂಡ ನಂತರ ತಂದೆಯೇ ಮಗಳೆನ್ನುವುದನ್ನು ನೋಡದೆ ಕೊಲೆ (Murder) ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ದೆಹಲಿ-ಲಕ್ನೋ ಹೈವೇಯಲ್ಲಿ 25 ವರ್ಷದ ಯುವತಿ ನಗ್ನಸ್ಥಿತಿಯಲ್ಲಿ ಪತ್ತೆಯಾಗಿದ್ದಳು, ಶೇ 40 ರಷ್ಟು ದೇಹದ ಭಾಗ ಸುಟ್ಟಿತ್ತು. ಇದನ್ನು ಕಂಡ ತಕ್ಷಣ ಸ್ಥಳೀಯರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಆಕೆಯ ತಂದೆ ಮತ್ತು ಸೋದರ ಮಾವ ಯುವತಿಯನ್ನು ಹತ್ಯೆ ಮಾಡುವ ಸಲುವಾಗಿ ಆ್ಯಸಿಡ್ ಎರಚಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಮಹಿಳೆಯ ಪ್ರೇಮ ವಿಚಾರ ಗೊತ್ತಾಗುತ್ತಿದ್ದಂತೆ ಈ ದುಷ್ಕೃತ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಘಟನೆಯ ವಿವರ ನೀಡಿದ್ದಾರೆ.
ಬಲವಂತವಾಗಿ ಮದುವೆ
ಪೊಲೀಸರ ಮಾಹಿತಿ ಪ್ರಕಾರ, ಯುವತಿ ತಾನು ಪಕ್ಕದ ಮನೆಯ ಯುವಕನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ವಿವಾಹ ಮಾಡಿಸಲು ಹೇಳಿದ್ದಾಳೆ. ಆದರೆ ಇದಕ್ಕೆ ಯುವತಿ ತಂದೆ ತೋತರಾಮ್ ಹಾಗೂ ಸೋದರಮಾವ ದಿನೇಶ್ ಕುಮಾರ್ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಬಂಧಿಕರಲ್ಲೇ ಒಬ್ಬರ ಯುವಕನೊಂದಿಗೆ ಏಪ್ರಿಲ್ 22ರಂದು ವಿವಾಹ ಮಾಡಿಸಿದ್ದಾರೆ.
ಪ್ರಿಯಮತನೊಂದಿಗೆ ಹೋಗುವುದಾಗಿ ಹಠ ಹಿಡಿದಿದ್ದ ಯುವತಿ
ಬೇರೆಯವರೊಂದಿಗೆ ಮದುವೆ ಆದ ನಂತರವೂ ಯುವತಿ ತನ್ನ ಪ್ರಿಯಕರನ ಜತೆ ಹೋಗುವುದಾಗಿ ತಂದೆಯೊಂದಿಗೆ ಹೇಳಿದ್ದಾಳೆ. ಅಲ್ಲದೆ ಆಗಾಗ್ಗೆ ಮೊಬೈಲ್ನಲ್ಲಿ ಮಾತನಾಡುವುದಕ್ಕೆ ಶುರು ಮಾಡಿದ್ದಾಳೆ. ಆದರೆ ಕುಪಿತಗೊಂಡ ತಂದೆ ಹಾಗೂ ಸೋದರಮಾವ ಆಕೆಯನ್ನು ಸಾಯಿಸುವ ನಿರ್ಧಾರ ಮಾಡಿದ್ದಾರೆ.
ಆ್ಯಸಿಡ್ ಸುರಿದು ಕೊಲೆ
ಮಗಳನ್ನು ಹೊರ ಹೋಗೋಣವೆಂದು ಕರೆದುಕೊಂಡ ಬಂದ ತಂದೆ ಮತ್ತು ಸೋದರ ಮಾವ ಹೈವೇ ಮಧ್ಯದಲ್ಲಿ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆ್ಯಸಿಡ್ ಅನ್ನು ಬಾಯಿಗೆ ಮತ್ತು ದೇಹದ ಮೇಲೆ ಸುರಿದಿದ್ದಾರೆ. ಆಕೆ ಸತ್ತಿದ್ದಾಳೆ ಎಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಆಕೆ ಬದುಕಿದ್ದು ರಾತ್ರಿ ಅಲ್ಲೇ ನರಳಾಡಿದ್ದಾಳೆ. ಬೆಳಿಗ್ಗೆ ದಾರಿ ಹೋಕನೊಬ್ಬ ಆಕೆಯನ್ನು ಕಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ನಡೆಸಿದ ವೇಳೆ ಈ ಕೃತ್ಯ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗಳ ಎಂದಿದ್ದ ತೋತರಾಮ್
ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ನಂತರ ಪೊಲೀಸರು ಯುವತಿಯ ತಂದೆ ತೋತರಾಮ್ ಸಂಪರ್ಕಿಸಿ, ನಿಮ್ಮ ಮಗಳು ರಸ್ತೆಯಲ್ಲಿ ಜೀವನ್ಮರಣ ಹೋರಾಟದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದಾರೆ. ಆದರೆ ಆತ, ಆಕೆ ನನ್ನ ಮಗಳಲ್ಲ, ಮಗಳಿಗೆ ಮದುವೆಯಾಗಿದ್ದು, ಗಂಡನ ಮನೆಯಲ್ಲಿದ್ದಾಳೆ ಎಂದು ಫೋಟೋ ಕಳುಹಿಸಿ ಪೊಲೀಸರಿಗೆ ಗೊಂದಲ ಮೂಡಿಸಿದ್ದಾನೆ.
ಆದರೆ ಅಕ್ಕಪಕ್ಕದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಯುವತಿಯೊಂದಿಗೆ ಮೂರು ಜನ ರೆಸ್ಟೋರೆಂಟ್ನಲ್ಲಿ ಊಟ ಮಾಡಿರುವ ವಿಡಿಯೋ ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ತಂದೆ ಹಾಗೂ ಇತರೆ ಮೂವರನ್ನು ಬಂಧಿಸಿದ್ದೇವೆ. ಮತ್ತಿಬ್ಬರು ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ