ಆನೇಕಲ್: ಇಬ್ಬರು ಮಕ್ಕಳನ್ನು ಕೊಂದು ತಂದೆ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ನಲ್ಲಿ (Anekal) ನಡೆದಿದೆ. ಆನೇಕಲ್ನ ಕೊಪ್ಪ ಸಮೀಪದ ನಿರ್ಮಾಣ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮೃತರನ್ನು ಬಿಟಿಎಂ ಬಡಾವಣೆ (BTM Badavane) ನಿವಾಸಿ ಹರೀಶ್ ( 35) ಪ್ರಜ್ವಲ್(6) ರಿಷಬ್(4) ಎಂದು ಗುರುತಿಸಲಾಗಿದೆ. ಮೇ 10ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಡಿಗೆ ಮನೆಯಲ್ಲಿ (Rental House) ಮಕ್ಕಳಿಗೆ ನೇಣು ಹಾಕಿ ಕೊಲೆಗೈದು ಬಳಿಕ ಅದೇ ಹಗ್ಗದಿಂದ ತಂದೆ ಹರೀಶ್ (Harish) ಕೂಡ ನೇಣು ಬಿಗಿದುಕೊಂದು ಸಾವನ್ನಪ್ಪಿದ್ದಾನೆ.
ಏನಿದು ಪ್ರಕರಣ?
ಮೃತ ಹರೀಶ್ ಆತ್ಮಹತ್ಯೆಗೂ ಮುನ್ನ ಸ್ನೇಹಿತರೊಬ್ಬರಿಗೆ ವಾಟ್ಸಾಪ್ ಕಾಲ್ ಮಾಡಿ ಮಾಹಿತಿ ನೀಡಿದ್ದನಂತೆ. ತಾನು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗುತ್ತಿದ್ದು, ತನಗೆ ಬರಬೇಕಾದ ಹಣ ಮತ್ತು ಎಲ್ಐಸಿ ಬಾಂಡ್ ಹಣವನ್ನು ಪತ್ನಿಗೆ ನೀಡುವಂತೆ ಹರೀಶ್ ಹೇಳಿದ್ದನಂತೆ. ಕೂಡಲೇ ಎಚ್ಚೆತ್ತುಕೊಂಡ ಸ್ನೇಹಿತ ಹರೀಶ್ ಇರುವ ಲೋಕೇಶಷನ್ಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೋಕೇಷನ್ ಪತ್ತೆಯಾಗಿದೆ.
ಇದನ್ನೂ ಓದಿ: Bengaluru: ಪೋಷಕರ ಬೇಜವಾಬ್ದಾರಿಗೆ ಪೊಲೀಸರು ಸುಸ್ತೋ ಸುಸ್ತು!
ಪ್ರೀತಿಸಿ ಮದುವೆಯಾಗಿದ್ದ ಹರೀಶ್
ಮೃತ ಹರೀಶ್ 2007ರಲ್ಲಿ ಅಕ್ಕನ ಮಗಳು ಅನನ್ಯ ಜೊತೆ ಪ್ರೇಮ ವಿವಾಹವಾಗಿದ್ದರು. ಬಳಿಕ ಗಾರ್ವೇಬಾವಿ ಪಾಳ್ಯದಲ್ಲಿ ಪ್ರತ್ಯೇಕ ಮನೆ ಮಾಡಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆದರೆ ವಿವಾಹದ ಬಳಿಕ ದಂಪತಿಗಳ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಪತ್ನಿಯ ಐಷಾರಾಮಿ ಜೀವನದಿಂದ ದಂಪತಿಗಳ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಪ್ರತ್ಯೇಕ ಮನೆ ಮಾಡುವಂತೆ ಒತ್ತಾಯ
2015ರಲ್ಲಿ ಹಿರಿಯ ಸಮ್ಮುಖದಲ್ಲಿ ದಂಪತಿಗಳ ನಡುವೆ ರಾಜಿ ಪಂಚಾಯಿತಿ ನಡೆಸಿ ಬಳಿಕ ಹರೀಶ್ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದರಂತೆ. ಆದರೆ 2021ರ ಬಳಿಕ ಪತ್ನಿ ಪ್ರತ್ಯೇಕ ಮನೆ ಮಾಡಲು ಒತ್ತಾಯ ಮಾಡಿದ್ದರಂತೆ. ಕೊನೆಗೆ ಪ್ರತ್ಯೇಕ ಮನೆ ಮಾಡಿ ಮಕ್ಕಳೊಂದಿಗೆ ಹರೀಶ್ ವಾಸಿಸುತ್ತಿದ್ದರು. ಈ ನಡುವೆ ಕೆಲವೇ ದಿನಗಳಲ್ಲಿ ಮನೆ ಬಿಟ್ಟು ಪರ ಪುರುಷನೊಂದಿಗೆ ಪರಾರಿಯಾಗಿದ್ದಳು ಎಂಬ ಆರೋಪ ಕೇಳಿ ಬಂದಿದೆ.
ಇತ್ತ ಪತ್ನಿ ಬಿಟ್ಟು ಹೋದ ಬಳಿಕ ಹರೀಶ್ ಇಬ್ಬರು ಮಕ್ಕಳ ಪೋಷಣೆಯನ್ನು ಮಾಡುತ್ತಿದ್ದರಂತೆ. ಆದರೆ ಮತ್ತೆ ಹರೀಶ್ ಸಂಪರ್ಕ ಮಾಡಿದ್ದ ಪತ್ನಿ ಪದೇ ಪದೇ ಹಣ ಕೊಡುವಂತೆ ಬೇಡಿಕೆ ಇಡುತ್ತಿದ್ದಳಂತೆ, ಇಲ್ಲ ಎಂದರೆ ಮನೆಯ ಬಳಿ ಬಂದು ರಂಪಾಟ ಮಾಡುವುದಾಗಿ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ.
ಇತ್ತ ಕೆಲಸದೊಂದಿಗೆ ಮಕ್ಕಳ ಪೋಷಣೆಯನ್ನು ನೋಡಿಕೊಳ್ಳಲಾಗದೆ. ನೊಂದಿದ್ದ ಹರೀಶ್ ಇತ್ತೀಚೆಗೆ ತಾಯಿಗೆ ಕರೆ ಮಾಡಿ ಅವರೊಂದಿಗೂ ಗಲಾಟೆ ಮಾಡಿಕೊಂಡಿದ್ದರಂತೆ. ಈ ಎಲ್ಲದರ ನಡುವೆ ನೊಂದಿದ್ದ ಹರೀಶ್ ತನ್ನ ಇಬ್ಬರು ಮಕ್ಕಳಿಗೆ ಹಗ್ಗದಿಂದ ನೇಣು ಹಾಕಿ ಕೊಲೆಗೈದು ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ