ಬೆಂಗಳೂರು: ಅದು ಮಧ್ಯರಾತ್ರಿಯ ಸಮಯ, ಶೌಚಾಲಯಕ್ಕೆ (Toilet) ತೆರಳಿದ್ದ ಇಬ್ಬರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನದ (Gold) ಜೊತೆಗೆ ಹೋಗಿದ್ದರು. ಆಗಲೆ ಪೊಲೀಸರ (Police) ಸೋಗಿನಲ್ಲಿ ಬಂದ ಮತ್ತಿಬ್ಬರು ಇದನ್ನೇ ಸರಿಯಾದ ಸಮಯ ಅಂತ ಸ್ಕೆಚ್ ಹಾಕಿ ಚಿನ್ನದ ಗಟ್ಟಿಗಳನ್ನು ಕಳವು ಮಾಡಿದ್ದಾರೆ. ಹೌದು, ಅಬ್ದುಲ್ ರಜಾಕ್ ಎಂಬ ಯುವಕ ರಾಯಚೂರು (Raichuru) ಮೂಲದ ಉದ್ಯಮಿ (Business Man) ಖಾದಿರ್ ಪಾಷ ಬಳಿ ಕೆಲಸ ಮಾಡಿಕೊಂಡಿದ್ದ. ಚಿನ್ನದ ಬ್ಯುಸಿನೆಸ್ ಮಾಡಿಕೊಂಡಿದ್ದ ಖಾದಿರ್ ಪಾಷ ಬೆಂಗಳೂರಲ್ಲೂ (Bengaluru) ವ್ಯವಹಾರ ಮಾಡುತ್ತಿದ್ದರಿಂದ ರಾಯಚೂರಿನಿಂದ ಹಣ ಕೊಟ್ಟು ಕಳಿಸಿ, ಬೆಂಗಳೂರಿನಿಂದ ಚಿನ್ನದ ಗಟ್ಟಿಯನ್ನ ತರಿಸಿಕೊಳ್ಳುತ್ತಿದ್ದ. ಹಣದ ಜೊತೆಗೆ ಬಂದಿದ್ದ ಅಬ್ದುಲ್ ರಜಾಕ್, ಜೊತೆಗೆ ರಾಯಚೂರಿನ ಬೇರೆ ಬೇರೆ ಅಂಗಡಿಗಳಿಂದ (Gold Shops) ಮಲ್ಲಯ್ಯ, ಸುನೀಲ್ ಕುಮಾರ್ ಎಂಬುವರು ತಮ್ಮ ಚಿನ್ನದ ಅಂಗಡಿಗೆ ಚಿನ್ನದ ಗಟ್ಟಿ ತೆಗೆದುಕೊಂಡು ಹೋಗಲು ಬಂದಿದ್ದ ಸಮಯದಲ್ಲಿ ಘಟನೆ ನಡೆದಿದೆ.
ಪೊಲೀಸರ ವೇಷದಲ್ಲಿ ಬಂದು ಚಿನ್ನದ ಗಟ್ಟಿ ದೋಚಿದರು
ಮಾರ್ಚ್ 11 ರಂದು ರಾಜಾ ಮಾರ್ಕೆಟ್ನಲ್ಲಿ ಚಿನ್ನದ ಗಟ್ಟಿ ಖರೀದಿಸಿ ಮೂವರು ವಾಪಸ್ಸು ರಾಯಚೂರಿಗೆ ತೆರಳಲು ಮುಂದಾಗಿದ್ದರು. ಮಾರ್ಚ್ 11 ರಂದು, ರಾತ್ರಿ 11 ಗಂಟೆಗೆ ಬಸ್ ಟಿಕೆಟ್ ಬುಕ್ ಆಗಿತ್ತು. ಇನ್ನೇನು ಬಸ್ ಹತ್ತಿ ರಾಯಚೂರು ಕಡೆಗೆ ತೆರಳಬೇಕಿತ್ತು.
ಅಷ್ಟರಲ್ಲಿ ಬಸ್ ಹತ್ತುವ ಮುನ್ನ ಸುನೀಲ್ ಕುಮಾರ್ನನ್ನ ಗ್ರೀನ್ ಲೈನ್ ಟ್ರಾವೆಲ್ ಕಚೇರಿಯಲ್ಲಿ ಕೂರಿಸಿ, ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರ ವೇಷದಲ್ಲಿ ಬಂದವರು ಚಿನ್ನದ ಗಟ್ಟಿಗಳನ್ನು ದೋಚಿದ್ದಾರೆ.
ಇದನ್ನೂ ಓದಿ: Bengaluru: ಗಗನಸಖಿ ನಿಗೂಢ ಸಾವಿನ ರಹಸ್ಯ ಬಯಲು; ದುಬೈನಿಂದ ಬೆಂಗಳೂರಿಗೆ ಬಂದಿದ್ದ ಚೆಲುವೆ
2 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಮತ್ತು 19 ಸಾವಿರ ನಗದು ದೋಚಿ ಪರಾರಿ
ಇಬ್ಬರು ಆಸಾಮಿಗಳು ನಾವು ಪೊಲೀಸರು. ಮೂರು ತಿಂಗಳಿಂದ ನಿಮ್ಮನ್ನು ಗಮನಿಸುತ್ತಿದ್ದೆವೆ. ಅಕ್ರಮ ದಂಧೆ ಮಾಡ್ತಿದ್ದಿರಾ? ಎಂದು ಆಟೋದಲ್ಲಿ ಕೂರಿಸಿಕೊಂಡು ಹೊರಟಿದ್ದಾರೆ. ಮಲ್ಲಯ್ಯನನ್ನು ರೇಸ್ ಕೋರ್ಸ್ ರಸ್ತೆ ಬಳಿ ಇರುವ ಕಾಂಗ್ರೆಸ್ ಕಚೇರಿ ಬಳಿ ಬಿಟ್ಟು ತೆರಳಿದ ಆರೋಪಿಗಳು, ಅಬ್ದುಲ್ ರಜಾಕ್ನನ್ನ ಚೌಡಯ್ಯ ರಸ್ತೆಯಲ್ಲಿರುವ ನೆಹರು ತಾರಾಲಯ ಬಳಿ ಇಳಿಸಿ 2 ಕೆಜಿ 200 ಗ್ರಾಂ ಚಿನ್ನದ ಗಟ್ಟಿ ಮತ್ತು 19 ಸಾವಿರ ನಗದು ಪಡೆದುಕೊಂಡು ಪರಾರಿಯಾಗಿದ್ದಾರೆ.
ಸ್ಯಾಟಲೈಟ್ ನಿಲ್ದಾಣದಲ್ಲೂ ನಡೆದಿತ್ತು ನಕಲಿ ಪೊಲೀಸ್ ದಾಳಿ
ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಒಂದು ಕೋಟಿ 17 ಲಕ್ಷ ರೂಪಾಯಿ ಮೌಲ್ಯದ ಎರಡು ಕೆಜಿ 200 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಸದ್ಯ ತನಿಖೆಗೆ ಇಳಿದ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಅಲ್ಲದೇ ಚಿನ್ನದ ಗಟ್ಟಿ ಖರೀದಿ ಮಾಡಿದ್ದ ಹಣಕಾಸಿನ ವ್ಯವಹಾರದ ಬಗ್ಗೆಯೂ ದೂರುದಾರರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಇತ್ತೀಚಿಗೆ ಇದೇ ರೀತಿ ಪೊಲೀಸರು ಎಂದು ಹೇಳಿಕೊಂಡು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕಳವು ಮಾಡಿದ್ದರು. ಆ ಬಳಿಕ ಸಿಸಿಟಿವಿ ದೃಶ್ಯ ಆಧರಿಸಿ ಮೂವರನ್ನು ಬಂಧಿಸಲಾಗಿತ್ತು. ಇದೀಗ ಈ ಇಬ್ಬರನ್ನೂ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ