ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಕಲಿ ಅಧಿಕಾರಿಗಳ (Fake Officer) ಹೆಸರಿನಲ್ಲಿ ವಂಚನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದು ಸಣ್ಣಪುಟ್ಟ ವಂಚನೆ ಮಾಡುತ್ತಿಲ್ಲ, ಕೋಟಿ ಕೋಟಿಗಳೇ ವಂಚಕರ ಟಾರ್ಗೆಟ್. ಹೀಗೆ ಸರ್ಕಾರಿ ಅಧಿಕಾರಿಗಳು (Govt Officials) ಅಂತ ಹೇಳಿಕೊಂಡಿದ್ದ ಓರ್ವ ನಕಲಿ ಮಿಲಿಟರಿ ಅಧಿಕಾರಿ ಹಾಗೂ ನಕಲಿ ಪೊಲೀಸ್ ಅಧಿಕಾರಿ ಕೈಗೆ ಅಸಲಿ ಪೊಲೀಸರು ಕೋಳ ಹಾಕಿದ್ದಾರೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ (Baiyappanahalli ), ಹೆಚ್ಎಸ್ಆರ್ ಲೇ ಔಟ್ (HSR Layout) ಹಾಗೂ ಮಹದೇವಪುರ ಪೊಲೀಸ್ ಠಾಣೆಯಲ್ಲಿ (Mahadevapura Police) ಅಸ್ಸಾಂ (Assam) ಮೂಲದ ದರ್ಶನಾ ಭಾರದ್ವಾಜ್ ಎಂಬಾಕೆ ಮೇಲೆ ಎಫ್ಐಆರ್ (FIR) ಆಗಿದೆ.
ಬಂಧಿತ ಮಹಿಳೆ ಡಿಆರ್ಡಿಓ ಕಮಾಂಡರ್ ಅಂತ ಹೇಳಿಕೊಂಡು 5 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ. ನಗರದ ದೊಡ್ಡ ದೊಡ್ಡ ಬಿಲ್ಡರ್ಗಳನ್ನೇ ಟಾರ್ಗೆಟ್ ಮಾಡಿ, ಸೇನಾ ಕಟ್ಟಡ ನಿರ್ಮಾಣ ಹಾಗೂ ಮೈಂಟೆನೆನ್ಸ್ ಟೆಂಡರ್ ಕೊಡಿಸುವುದಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದಳು.
ಇದನ್ನೂ ಓದಿ: Heart Attack: ಮೊಬೈಲ್ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!
ಮುಂಗಡವಾಗಿ ಹಣ ಪಡೆದು ಟೆಂಡರನ್ನೂ ಕೊಡಿಸದೆ ದೋಖಾ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಳು ಎನ್ನಲಾಗಿದ್ದು, ಈ ನಯ ವಂಚಕಿಯನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಐದು ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದು, ರಿಕವರಿ ಮಾತ್ರ ಒಂದು ರೂಪಾಯಿ ಕೂಡ ಆಗಿಲ್ಲ.
ತಲಘಟ್ಟಪುರ ಪೊಲೀಸರಿಂದ ನಕಲಿ IPS ಅಧಿಕಾರಿ ಅರೆಸ್ಟ್
ಶ್ರೀನಿವಾಸ್ ಎಂಬಾತ ಬೆಂಗಳೂರು ನಗರದಲ್ಲಿ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದೀನಿ ಅಂತ ಕೆಲ ಪೊಲೀಸರನ್ನು ನಂಬಿಸಿದ್ದ. ನಂಬಿಕೆ ಗಳಿಸಿದ ಬಳಿಕ ಕೆಲ ಉದ್ಯಮಿಗಳನ್ನು ಪೊಲೀಸರ ಮೂಲಕವೇ ಪರಿಚಯ ಮಾಡಿಕೊಳ್ಳುತ್ತಿದ್ದ. ಅದೇ ರೀತಿ ವೆಂಕಟರಮಣಪ್ಪ ಎಂಬ ಉದ್ಯಮಿಯನ್ನು ಪರಿಚಯ ಮಾಡಿಕೊಂಡಿದ್ದ.
ಮೈಸೂರಿನಲ್ಲಿ ಲ್ಯಾಂಡ್ ಲಿಟಿಗೇಷನ್ ಪ್ರಕರಣವನ್ನು ಹ್ಯಾಂಡಲ್ ಮಾಡುತ್ತಿದ್ದೇನೆ, ರವಿನ್ಯೂ ಕೆಲಸ ಬಾಕಿ ಇದೆ, 450 ಕೋಟಿ ಡೀಲಿಂಗ್ ಅದು, 250 ಕೋಟಿಗೆ ಡೀಲ್ ಆಗುತ್ತೆ ಎಂದು ನಂಬಿಸಿದ್ದ. ವೆಂಕಟರಮಣಪ್ಪ ಬಳಿ ಈ ಸಂಬಂಧ 2.5 ಕೋಟಿ ಅವಶ್ಯಕತೆ ಇದೆ ಎಲ್ಲಿಯಾದರೂ ಅರೆಂಜ್ ಮಾಡಿಕೊಡಿ ಎಂದಿದ್ದ. ಇತ್ತ ನಕಲಿ ಎಸ್ಪಿ ಮಾತು ಕೇಳಿ ಹಣವನ್ನು ಕೊಟ್ಟಿದ್ದ. ಇತ್ತ ಹಣ ಪಡೆದಿದ್ದೇ ಎಸ್ಕೇಪ್ ಆಗಿದ್ದ ನಕಲಿ ಅಧಿಕಾರಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಇಬ್ಬರು ನಕಲಿ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಜೊತೆಗೆ ಇನ್ನು ಹಲವರಿಗೆ ಇದೇ ರೀತಿ ವಂಚನೆ ಮಾಡಿರುವ ಶಂಕೆ ಇದ್ದು, ಇಬ್ಬರನ್ನು ಕೋರ್ಟ್ಗೆ ಹಾಜರು ಪಡಿಸಿ ಕಸ್ಟಡಿಗೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Bengaluru: ಶೌಚಾಲಯಕ್ಕೆ ಹೋಗಿದ್ದಾಗ ಬ್ಯಾಗ್ನಲ್ಲಿತ್ತು ₹1 ಕೋಟಿ ಚಿನ್ನ; ಸಿನಿಮೀಯ ಶೈಲಿಯಲ್ಲಿ ಚಿನ್ನದ ಗಟ್ಟಿ ಕಳವು
70 ವರ್ಷದ ಅರಳಿ ಮರ ಕಡಿದುರುಳಿಸಿದ ಸರ್ಕಾರ
ಬೆಂಗಳೂರಿನ ಪ್ರತಿಷ್ಠಿತ ಏರಿಯಾ ಜಯನಗರದಲ್ಲಿ ಅಶೋಕ್ ಪಿಲ್ಲರ್ ಇದೆ. ಅಶೋಕ ಪಿಲ್ಲರ್ನ ಅನತಿ ದೂರದಲ್ಲಿ ಕನಕನಾಯಕ ವೃತ್ತವಿದೆ. ಬಿಬಿಎಂಪಿ ವಾರ್ಡ್ ನಂಬರ್ 143, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಈ ವೃತ್ತದಲ್ಲಿ, ಪುರಾತನ ಇತಿಹಾಸ ಹೊಂದಿದ ನಾಗ ದೇವರ ಗುಡಿಯನ್ನ ಪಾಲಿಕೆ ದ್ವಂಸಗೊಳಿಸಿದೆ. ಬರೋಬ್ಬರಿ 70 ವರ್ಷಗಳಷ್ಟು ಹಳೆಯದಾದ ಮರವನ್ನು ಅಭಿವೃದ್ಧಿ ಹೆಸರಲ್ಲಿ ಕಡಿದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಜಯನಗರದ ಲ್ಯಾಂಡ್ ಮಾರ್ಕ್ ಕೂಡ ಆಗಿದ್ದ ಈ ನಾಗ ದೇವರ ಗುಡಿ ಹಾಗೂ ಅಶ್ವತ್ಥ ಮರವನ್ನ ಕತ್ತರಿಸಿ ಹಾಕಿರುವ ಬಿಬಿಎಂಪಿ ನಿರ್ಧಾರ ಪರಿಸರ ಪ್ರೇಮಿಗಳು, ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಅಭಿವೃದ್ಧಿ ಕಾಮಗಾರಿಗೆ ಮರವನ್ನ ಕತ್ತರಿಸುವ ಅವಶ್ಯಕತೆ ಇರ್ಲಿಲ್ಲ ಅಂತಾ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ