• ಹೋಂ
 • »
 • ನ್ಯೂಸ್
 • »
 • Crime
 • »
 • Hyderabad: ದೆವ್ವ ಬಿಡಿಸೋ ನೆಪದಲ್ಲಿ 18ರ ಯುವತಿ ಮೇಲೆ ಕಣ್ಣು! ಮದ್ವೆಯಾಗಲು ಮುಂದಾದ ದರ್ಗಾ ಮುಖ್ಯಸ್ಥನಿಗೆ ಆಗಿದ್ದೇನು?

Hyderabad: ದೆವ್ವ ಬಿಡಿಸೋ ನೆಪದಲ್ಲಿ 18ರ ಯುವತಿ ಮೇಲೆ ಕಣ್ಣು! ಮದ್ವೆಯಾಗಲು ಮುಂದಾದ ದರ್ಗಾ ಮುಖ್ಯಸ್ಥನಿಗೆ ಆಗಿದ್ದೇನು?

ಹಫೀಜ್ ಪಾಷಾ

ಹಫೀಜ್ ಪಾಷಾ

ಹಫೀಜ್ ಪಾಷಾ ಎಂಬಾತ 18 ವರ್ಷದ ಯುವತಿಯನ್ನು ಬಲವಂತವಾಗಿ ಮದುವೆಯಾಗಲು ಯತ್ನಿಸಿದ್ದು, ಮದುವೆಯಾದರೆ ಆಕೆಯ ಮೈಮೇಲಿರುವ ದುಷ್ಟಶಕ್ತಿಯನ್ನು ದೂರವಾಗಲಿದೆ ಎಂದು ಆಕೆಯ ಕುಟುಂಬದವರನ್ನು ಮರಳು ಮಾಡಿದ್ದ. ಯುವತಿ ರೋಗಗ್ರಸ್ತಳಾಗಿದ್ದು, ಆಕೆಯ ಆರೋಗ್ಯವು ಹದಗೆಡುತ್ತಿದೆ, ತನ್ನನ್ನು ಮದುವೆಯಾದರೆ ಮಾತ್ರ ಅವಳ ಆರೋಗ್ಯ ಸುಧಾರಿಸುತ್ತದೆ. ಅಲ್ಲದೆ ಅವಳ ಪ್ರಾಣವೂ ಉಳಿಯುತ್ತದೆ ಎಂದು ಆಕೆಯ ಮನೆಯವರಿಗೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Hyderabad, India
 • Share this:

ಹೈದರಾಬಾದ್​: ಯುವತಿಗೆ ದೆವ್ವ(Ghost) ಹಿಡಿದುಕೊಂಡಿದೆ, ತಾನೂ ಆತ್ಮಗಳನ್ನು  ಬಿಡಿಸುವ ಶಕ್ತಿಯನ್ನು ಹೊಂದಿದ್ದೇನೆ. ಆ ಯುವತಿಯನ್ನು ನನ್ನ ಜೊತೆ ಮದುವೆ (Marriage) ಮಾಡಿಸಿದರೆ, ಅವಳನ್ನು ಆಕ್ರಮಿಸಿಕೊಂಡಿರುವ ಆತ್ಮವನ್ನು ಬಿಡಿಸುತ್ತೇನೆ ಎಂದು ಒತ್ತಾಯಿಸುತ್ತಿದ್ದ ದರ್ಗಾ (Dargah) ಮುಖ್ಯಸ್ಥನೊಬ್ಬನನ್ನು ಹೈದರಾಬಾದ್​ನಲ್ಲಿ (Hyderabad) ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶದ (Andhra Pradesh) ನೆಲ್ಲೂರು ಜಿಲ್ಲೆಯ ಅನುಮಸಮುದ್ರಂಪೇಟೆ ಪ್ರದೇಶದಲ್ಲಿರುವ ರಹಮತುಲ್ಲಾ ದರ್ಗಾದ ಉಸ್ತುವಾರಿ ಶಾ ಗುಲಾಂ ನಕ್ಷಬಂಧಿ ಹಫೀಜ್ ಪಾಷಾ (55) ಎಂದು ಗುರುತಿಸಲಾಗಿದ್ದು, ಆತ ಕೆಲವು ತಿಂಗಳಿನಿಂದ ಆ ದರ್ಗಾದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.


ಮದುವೆಯಾದರೆ ಜೀವ ಉಳಿಸುವ ಭರವಸೆ


ಹಫೀಜ್ ಪಾಷಾ 18 ವರ್ಷದ ಯುವತಿಯನ್ನು ಬಲವಂತವಾಗಿ ಮದುವೆಯಾಗಲು ಯತ್ನಿಸಿದ್ದು, ಮದುವೆಯಾದರೆ ಆಕೆಯ ಮೈಮೇಲಿರುವ ದುಷ್ಟಶಕ್ತಿಯನ್ನು ದೂರವಾಗಲಿದೆ ಎಂದು ಆಕೆಯ ಕುಟುಂಬದವರನ್ನು ಮರಳು ಮಾಡಿದ್ದ. ಯುವತಿ ರೋಗಗ್ರಸ್ತಳಾಗಿದ್ದು, ಆಕೆಯ ಆರೋಗ್ಯವು ಹದಗೆಡುತ್ತಿದೆ, ತನ್ನನ್ನು ಮದುವೆಯಾದರೆ ಮಾತ್ರ ಅವಳ ಆರೋಗ್ಯ ಸುಧಾರಿಸುತ್ತದೆ. ಅಲ್ಲದೆ ಅವಳ ಪ್ರಾಣವೂ ಉಳಿಯುತ್ತದೆ ಎಂದು ಆಕೆಯ ಮನೆಯವರಿಗೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇಬ್ಬರು ಹೆಂಡತಿಯರು, ಮೂರು ಮಕ್ಕಳು


ಪೊಲೀಸರ ಪ್ರಕಾರ, ಆರೋಪಿ ಪಾಷಾ ಇತ್ತೀಚೆಗೆ ಹೈದರಾಬಾದ್‌ನ ಲ್ಯಾಂಗರ್ ಹೌಜ್‌ಗೆ ಬಂದಿದ್ದ. ಈತನಿಗೆ ಈಗಾಗಲೆ ಎರಡು ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಪಾಷಾ ಇತ್ತೀಚೆಗೆ ಅನುಮಸಮುದ್ರಂಪೇಟೆಯ ರಹಮತುಲ್ಲಾ ದರ್ಗಾದಲ್ಲಿ ವಾಸ್ತವ್ಯವಿದ್ದ. ಈ ಸಂದರ್ಭದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಟೋಳಿ ಚೌಕಿಯ ಯುವತಿಯೊಬ್ಬಳನ್ನು ಅವರ ಪೋಷಕರು ಕರೆದುಕೊಂಡು ಬಂದಿದ್ದರು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Valentin's Day: ವಾರದ ಹಿಂದಷ್ಟೇ ಸ್ನೇಹ, ವ್ಯಾಲಿಂಟೈನ್ಸ್ ಡೇ ಗಿಫ್ಟ್ ವ್ಯಾಮೋಹ! ಇನ್ಸ್‌ಸ್ಟಾ ಫ್ರೆಂಡ್‌ನಿಂದ 4 ಲಕ್ಷ ಕಳೆದುಕೊಂಡ 51ರ ವಿವಾಹಿತೆ!


ಚಿಕಿತ್ಸೆಗಾಗಿ ಕುಟುಂಬಸ್ಥರು ಯುವತಿಯನ್ನು ರಹಮತುಲ್ಲಾ ದರ್ಗಾಕ್ಕೆ ಕರೆದುಕೊಂಡು ಬಂದಿದ್ದರು. ದರ್ಗಾದಲ್ಲಿ ಪಾಷಾ ಯುವತಿಗೆ ದೆವ್ವ ಹಿಡಿದಿದೆ ಎಂದು ಹೆದರಿಸಿದ್ದಾನೆ. ಇದಲ್ಲದೆ, ತನ್ನನ್ನು ಮದುವೆಯಾದರೆ ಆ ಆತ್ಮ ಹೆದರಿ ಹೋಗುತ್ತದೆ ಎಂದು ನಂಬಿಸಿದ್ದಾನೆ. ಬೇರೆ ದಾರಿಯಿಲ್ಲದೇ ಯುವತಿಯ ಕುಟುಂಬಸ್ಥರು ಮಗಳ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಎದೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಪಾಷಾ


ಆರೋಪಿ ಪಾಷಾ ಅವರ ಆದೇಶದ ಮೇರೆಗೆ ಶನಿವಾರ ರಾತ್ರಿ ಟೋಳಿ ಚೌಕಿಯಲ್ಲಿರುವ ಮದುವೆ ಮಂಟಪದಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿತ್ತು. ಪೋಲೀಸರ ಪ್ರಕಾರ, ಅವರು ಮಂಟಪಕ್ಕೆ ಹೋಗುತ್ತಿದ್ದಾಗ, ಪಾಷಾ ಎದೆ ನೋವು ಎಂದು ಹೇಳಿದ್ದಾನೆ. ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.


ಪೊಲೀಸರಿಗೆ ದೂರು


ಇದೇ ವೇಳೆ ಯುವತಿಯ ಕುಟುಂಬಸ್ಥರನ್ನು ಆತನ ಬಗ್ಗೆ ವಿಚಾರಿಸಿದಾಗ ಪಾಷಾಗೆ ಮೊದಲೇ ಮದುವೆಯಾಗಿರುವ ವಿಚಾರ ತಿಳಿದುಬಂದಿದೆ. ತಕ್ಷಣ ಯುವತಿಯ ಕುಟುಂಬದ ಸದಸ್ಯರು ಲಾಂಗರ್ ಹೌಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿ ಈ ಹಿಂದೆ ಆತ ಇದೇ ರೀತಿ ಹಲವು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ಇನ್ಸ್‌ಪೆಕ್ಟರ್ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.


ಹಲವು ಮಹಿಳೆಯರಿಗೆ ವಂಚನೆ


ಪೊಲೀಸರ ಪ್ರಕಾರ, ಪಾಷಾ ಹಲವಾರು ಮಹಿಳೆಯರಿಗೆ ವಂಚಿಸಿದ್ದಾನೆ. 2012ರಲ್ಲಿ ಹಫೀಜ್ ಪಾಷಾ ಬಾಬಾ ವೇಷ ಧರಿಸಿ ತಮಿಳುನಾಡಿನ ಮಹಿಳೆಯನ್ನು ಮದುವೆಯಾಗಲು ಬಯಸಿದ್ದ. ಸಂತ್ರಸ್ತೆ ನಿರಾಕರಿಸಿದ್ದು, ತಡವಾಗಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆಕೆಯನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲು ಪಾಷಾ ಆಕೆಯ ಮನೆಯಲ್ಲಿ ಗಾಂಜಾ ಪ್ಯಾಕೆಟ್‌ಗಳನ್ನು ಹಾಕಿದ್ದ ಎನ್ನಲಾಗಿದೆ. ಆರೋಪಿ ಬಂಧನವಾಗುತ್ತಿದ್ಧಂತೆ ಆತನಿಂದ ಅನ್ಯಾಯಕ್ಕೆ ಒಳಗಾಗಿರುವ ಇನ್ನಿಬ್ಬರು ಮಹಿಳೆಯರು ನ್ಯಾಯಕ್ಕಾಗಿ ನೆಲ್ಲೂರು ಜಿಲ್ಲಾ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.

Published by:Rajesha M B
First published: