• Home
  • »
  • News
  • »
  • crime
  • »
  • Bengaluru: ಶೀಲ ಶಂಕಿಸಿ ಗರ್ಭಿಣಿ ಪತ್ನಿಯ ಕೊಲೆಗೈದು ಪತಿ ಪರಾರಿ!

Bengaluru: ಶೀಲ ಶಂಕಿಸಿ ಗರ್ಭಿಣಿ ಪತ್ನಿಯ ಕೊಲೆಗೈದು ಪತಿ ಪರಾರಿ!

ಕೊಲೆಗೀಡಾದ ನಾಜ್ ಹಾಗೂ ಪತಿ ನಾಸೀರ್

ಕೊಲೆಗೀಡಾದ ನಾಜ್ ಹಾಗೂ ಪತಿ ನಾಸೀರ್

ಪತಿಯೊಬ್ಬ ಶೀಲ ಶಂಕಿಸಿ ಪತ್ನಿಯ ಉಸಿರುಗಟ್ಟಿಸಿ ಕೊಂದು ಎಸ್ಕೇಪ್ ಆದ ಪ್ರಕರಣ ಬೆಂಗಳೂರಿನ ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್​ನಲ್ಲಿ ನಡೆದಿದ್ದು, ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು(ಜ,17): ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ದಿನೇ ದಿನೇ ಸದ್ದು ಮಾಡುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಅದರಲ್ಲೂ ಗಂಡ, ಹೆಂಡತಿ ಜಗಳ, ಪ್ರೇಮಿಗಳ ನಡುವಿನ ಕಾದಾಟ ಕೊಲೆಯಲ್ಲಿ (Murder) ಅಂತ್ಯವಾಗುತ್ತಿರುವುದು ದುರಂತವೇ ಸರಿ. ಕ್ಷುಲ್ಲಕ ಕಾರಣಕ್ಕೆ ಆರಂಭವಾಗುವ ಜಗಳ ತಮ್ಮ ಸಂಗಾತಿಯ ಜೀವ ಕಸಿದುಕೊಳ್ಳುವ ಮಟ್ಟಕ್ಕೇರುತ್ತಿದೆ. ವಿಶೇಷವಾಗಿ ದಂಪತಿ ತಮ್ಮ ಸಂಗಾತಿಯ ಮೇಲಿನ ಅನುಮಾನದಿಂದ ಕೊಲೆಗೈಯ್ಯುತ್ತಿರುವ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಸದ್ಯ ಪತಿಯೊಬ್ಬ ಶೀಲ ಶಂಕಿಸಿ ಗರ್ಭಿಣಿ ಪತ್ನಿಯ (Pregnant Wife) ಉಸಿರುಗಟ್ಟಿಸಿ ಕೊಂದು ಎಸ್ಕೇಪ್ ಆದ ಪ್ರಕರಣ ಬೆಂಗಳೂರಿನ ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್​ನಲ್ಲಿ ನಡೆದಿದ್ದು, ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿದೆ.


ಪ್ರೀತಿಸಿ ಮದುವೆಯಾಗಿದ್ದ ಜೋಡಿ


ಹೌದು ಪತಿಯ ಅನುಮಾನದ ಕಾಯಿಲೆಗೆ 22 ವರ್ಷದ ನಾಜ಼್ ಬಲಿಯಾಗಿದ್ದಾಳೆ. ಪತಿ ನಾಸೀರ್ ಹುಸೇನ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ದಂಪತಿ ಕಳೆದ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಇವರು ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್​ನಲ್ಲಿ ಬಂದು ವಾಸವಿದ್ದರು. ನಾಸೀರ್ ಪ್ರೀತಿಯಲ್ಲಿ ಬಿದ್ದಿದ್ದ ನಾಜ್ ತನ್ನ ಹೆತ್ತವರನ್ನು ಒಪ್ಪಿಸಿ ಮದುವೆಯಾಗಿದ್ದರು. ಇತ್ತ ನಾಸೀರ್​ಗೆ ತಂದೆ, ತಾಯಿ ಇರಲಿಲ್ಲ. ಆದರೆ ಆತನ ಉತ್ತಮ ಗುಣಗಳನ್ನು ಕಂಡಿದ್ದ ನಾಜ್ ತಂದೆ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ನಾಸೀರ್ ಖಾಸಗಿ ಕಂಪನಿಯಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದ.


ಇದನ್ನೂ ಓದಿ: Bajrang Dal: ನೇತ್ರಾವತಿ ನದಿಯಲ್ಲಿ ಭಜರಂಗದಳ ಕಾರ್ಯಕರ್ತನ ಶವ ಪತ್ತೆ! ಕೊಲೆಯೋ, ಆತ್ಮಹತ್ಯೆಯೋ?


ಅಬಾರ್ಷನ್ ಮಾಡಿಸುವಂತೆ ಒತ್ತಾಯ


ಇತ್ತೀಚೆಗಷ್ಟೇ ನಾಜ್​ ತಾನು ಗರ್ಭಿಣಿಯಾಗಿದ್ದರು, ವಿಚಾರ ಕನ್ಫರ್ಮ್​ ಆಗುತ್ತಿದ್ದಂತೆಯೇ ಆಖೆ ಇದನ್ನು ಗಂಡನಿಗೆ ತಿಳಿಸಿದ್ದಾಳೆ. ಆದರೆ ಇದರಿಂದ ಸಂತೋಷಪಟ್ಟುಕೊಳ್ಳದ ನಾಸೀರ್ ಹೆಂಡತಿ ಮೇಲೆ ಅನುಮಾನ ಪಟ್ಟುಕೊಂಡಿದ್ದಾನೆ. ಅಲ್ಲದೇ ಇದು ತನ್ನ ಮಗುವಲ್ಲ ಎಂದು ಕಿರಿಕ್ ತೆಗೆದ ಆತ ಅಬಾರ್ಷನ್ ಮಾಡಿಸಬೇಕೆಂದು ಒತ್ತಾಯ ಮಾಡಿದ್ದಾನೆ.




ಆದರೆ ನಾಜ್ ಇದಕ್ಕೆ ಒಪ್ಪಿರಲಿಲ್ಲ. ಇದೇ ವಿಚಾರವಾಗಿ ಗಂಡ, ಹೆಂಡತಿ ನಡುವೆ ಜಗಳವಾಗುತ್ತಿದ್ದು, ಇದು ವಿಕೋಪಕ್ಕೆ ತಿರುಗಿ ನಾಸೀರ್ ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ. ಬಳಿಕ ತಾನು ಪತ್ನಿ‌ ಕೊಂದಿರುವ ವಿಚಾರವನ್ನು ಆಕೆಯ ಅಣ್ಣನಿಗೆ ಮೇಸೆಜ್ ಕಳುಹಿಸಿ ಎಸ್ಕೇಪ್ ಆಗಿದ್ದಾನೆ.


ಇದನ್ನೂ ಓದಿ: Insurance Money: ಇನ್ಶೂರೆನ್ಸ್ ಹಣಕ್ಕಾಗಿ ಅನಾಥ ವ್ಯಕ್ತಿಯ ಕೊಲೆ; ಆ್ಯಕ್ಸಿಡೆಂಟ್ ಎಂದು ನಂಬಿಸಿದವರು ಅಂದರ್


ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸದ್ದುಗುಂಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸೆಂಟ್ ಜಾನ್ಸ್​ ಆಸ್ಪತ್ರೆಗೆ ಮೃತದೇಹವನ್ನ ರವಾನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.

Published by:Precilla Olivia Dias
First published: