ನವದೆಹಲಿ: ಗಂಡನನ್ನು ಬಿಟ್ಟು ತನ್ನನ್ನು ವಿವಾಹವಾಗಲು (Marriage) ಒಪ್ಪದ ಮಹಿಳೆಯನ್ನು 34 ವರ್ಷದ ಕ್ಯಾಬ್ ಚಾಲಕನೊಬ್ಬ (Cab Driver) ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ (Delhi) ಬೆಳಕಿಗೆ ಬಂದಿದೆ. ಕೊಲೆ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಪೂರ್ವ ದೆಹಲಿಯ ನ್ಯೂ ಅಶೋಕ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಶಿವಶಂಕರ್ ಮುಖಿಯಾ ಎಂದು ಗುರುತಿಸಲಾಗಿದ್ದು, ಆರೋಪಿ ಬಿಹಾರದ (Bihar) ಮಧುಬನಿ ನಿವಾಸಿಯಾಗಿದ್ದು, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಮಕ್ಕಳನ್ನು ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖಿಯಾ ಪ್ರಸ್ತುತ ಚಿರಾಗ್ ದೆಹಲಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ, ಆತನ ಪತ್ನಿ ಮನೆಗೆಲಸ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ತಲೆಗೆ ಗಾಯವಾಗಿ ಸಾವು
ಫೆಬ್ರವರಿ 26 ರಂದು ಪೊಲೀಸರಿಗೆ 30 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿರುವುದರ ಬಗ್ಗೆ ಮಾಹಿತಿ ಬಂದಿದೆ. ಶವಪರೀಕ್ಷೆ ವರದಿಯಲ್ಲಿ ಮಹಿಳೆ ತಲೆಗೆ ಗಂಭೀರ ಗಾಯವಾಗಿದ್ದು, ಆಕೆಯ ಬಾಯಿಯಲ್ಲೂ ಗಾಯಗಳಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮದುವೆಯಾಗುವಂತೆ ಒತ್ತಾಯ
ತನಿಖೆಯ ವೇಳೆ ಸಂತ್ರಸ್ತೆಯ ಸ್ನೇಹಿತನೊಬ್ಬ ಟ್ಯಾಕ್ಸಿ ಚಾಲಕ ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಈ ವಿಷಯವನ್ನು ಆಕೆ ತನಗೆ ಸ್ನೇಹಿತೆ ಹೇಳಿದ್ದಳು, ಆದರೆ ನಾನು ಆ ವ್ಯಕ್ತಿಯನ್ನು ಭೇಟಿಯಾಗಿಲ್ಲ ಅಥವಾ ಅವನ ಫೋಟೋವನ್ನು ನೋಡಿಲ್ಲ ಎಂದು ಮಾಹಿತಿ ನೀಡಿದ್ದರು.
ಸಿಸಿಟಿವಿಯಲ್ಲಿ ಆರೋಪಿ ಪತ್ತೆ
ತನಿಖೆ ವೇಳೆ ಶವ ಪತ್ತೆಯಾದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಗಮನಿಸಿದ್ದಾರೆ. ರಾತ್ರಿ 7.13 ಕ್ಕೆ ರಸ್ತೆಯಲ್ಲಿ ಬರುವ ಆತ 7.27ಕ್ಕೆ ಹೋಗುವುದು ಕಂಡುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಅಮೃತ ಗುಗುಲೋತ್ ತಿಳಿಸಿದ್ದಾರೆ.
ಸಂತ್ರಸ್ತೆಯ ಪತಿಗೆ ಬೆದರಿಕೆ
ಆರೋಪಿ ಸಂತ್ರಸ್ತೆಯ ಪತಿಗೆ ಸುಮಾರು ಒಂದು ತಿಂಗಳ ಹಿಂದೆ ಕರೆ ಮಾಡಿದ್ದು, ನಿನ್ನ ಹೆಂಡತಿಯನ್ನು ಬಿಡುವಂತೆ ಬೆದರಿಕೆ ಹಾಕಿದ್ದ ಎಂದು ಮೃತಳ ಪತಿ ತಿಳಿಸಿದ್ದಾರೆ. ಜೊತೆಗೆ ಕರೆ ಮಾಡಿದ ವ್ಯಕ್ತಿ ತಮ್ಮ ಮತ್ತು ತನ್ನ ಪತ್ನಿಯ ಫೋನ್ ಸಂಖ್ಯೆಯೊಂದಿಗೆ ಅವಹೇಳನಕಾರಿ ಹೇಳಿಕೆ ಬರೆದು ಕೆಲವು ಕರಪತ್ರಗಳನ್ನ ಅಂಟಿಸಿದ್ದ ಎಂದು ಮೃತಳ ಪತಿ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!
ಫೋನ್ ನಂಬರ್ನಿಂದ ಆರೋಪಿ ಪತ್ತೆ
ತನಿಖೆ ವೇಳೆ ಸಂತ್ರಸ್ತೆಯನ್ನು ಭೇಟಿ ಮಾಡಲು ಬರುತ್ತಿದ್ದ ಕ್ಯಾಬ್ ನಂಬರ್ ಪತ್ತೆ ಹಾಗೂ ಆರೋಪಿ ಬಳಸುತ್ತಿದ್ದ ಸಂಖ್ಯೆ ಕೊನೆಯಲ್ಲಿ 11 ಇರುವುದನ್ನು ಪತ್ತೆ ಹಚ್ಚಿದ್ದಾರೆ. ನಂತರ ಕರೆ ವಿವರಗಳನ್ನು ವಿಶ್ಲೇಷಿಸಿದ ನಂತರ ಮುಖಿಯಾನನ್ನು ಬಂಧಿಸಿದ್ದಾಗಿ ಡಿಸಿಪಿ ತಿಳಿಸಿದ್ದಾರೆ.
ಮದುವೆಗೆ ಒಪ್ಪದಿದ್ದಕ್ಕೆ ಕೊಲೆ
ಸಂತ್ರಸ್ತೆ ಹಾಗೂ ಆರೋಪಿ ಮೂರು ವರ್ಷಗಳ ಹಿಂದೆ ನೋಯ್ಡಾದಲ್ಲಿ ಸ್ನೇಹಿತರೊಬ್ಬರ ಮೂಲಕ ಪರಸ್ಪರ ಪರಿಚಯವಾಗಿದ್ದಾರೆ. ನಂತರ ಮುಖಿಯಾ ಆಕೆಯನ್ನು ಮದುವೆಯಾಗಲು ಬಯಸಿ ವಿಷಯ ತಿಳಿಸಿದ್ದಾನೆ. ಸ್ವಲ್ಪ ಸಮಯದವರೆಗೆ ಅವರನ್ನು ಮನವೊಲಿಸಲೂ ಪ್ರಯತ್ನಿಸಿದ್ದಾನೆ. ಆದರೆ ಇದಕ್ಕೆ ಒಪ್ಪಲಿಲ್ಲ. ಒಂದು ದಿನ ಆಕೆಯ ಮನೆಗೆ ತೆರಳಿದ್ದು, ಕೋಪದಲ್ಲಿ ಥಳಿಸಲು ಆರಂಭಿಸಿದ್ದಾನೆ. ನಂತರ ಸಂತ್ರಸ್ರೆ ಕೂಗಲು ಪ್ರಾರಂಭಿಸಿದಾಗ, ಭಯದಲ್ಲಿ ಕೊಂದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ