• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ವರದಕ್ಷಿಣೆ ದಾಹಕ್ಕೆ ಮಹಿಳೆ ಬಲಿ! ಉಸಿರುಗಟ್ಟಿಸಿ ಸೊಸೆಯನ್ನು ಕೊಲೆಗೈದ ಅತ್ತೆ, ಮಾವ, ಗಂಡ!

Crime News: ವರದಕ್ಷಿಣೆ ದಾಹಕ್ಕೆ ಮಹಿಳೆ ಬಲಿ! ಉಸಿರುಗಟ್ಟಿಸಿ ಸೊಸೆಯನ್ನು ಕೊಲೆಗೈದ ಅತ್ತೆ, ಮಾವ, ಗಂಡ!

ಶ್ರೀದೇವಿ ದೀಪಕ ಬೇವಿನಕಟ್ಟಿ ಮೃತ ದುರ್ದೈವಿ

ಶ್ರೀದೇವಿ ದೀಪಕ ಬೇವಿನಕಟ್ಟಿ ಮೃತ ದುರ್ದೈವಿ

ಯಮಕನಮರಡಿ ಪೊಲೀಸರು ಪ್ರಕರಣ ತನಿಖೆ ಪರಿಶೀಲನೆ ನಡೆಸಿದ್ದು, ಗೋಕಾಕ್ ಡಿವೈಎಸ್​​ಪಿ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

  • Share this:

ಚಿಕ್ಕೋಡಿ : ವರದಕ್ಷಿಣೆ (Dowry) ದಾಹಕ್ಕೆ ಹೆಣ್ಣುಮಗಳು ಬಲಿಯಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದಿದೆ. ವರದಕ್ಷಿಣೆಗಾಗಿ ಸೊಸೆಯನ್ನು ಉಸಿರುಟ್ಟಿಸಿ ಅತ್ತೆ-ಮಾವ ಹಾಗೂ ಗಂಡ (Husband) ಕೊಲೆ ಮಾಡಿದ್ದು, ಆರೋಪಿಗಳನ್ನು ಪೊಲೀಸರು (Police) ಬಂಧನ ಮಾಡಿದ್ದಾರೆ. ಶ್ರೀದೇವಿ ದೀಪಕ ಬೇವಿನಕಟ್ಟಿ (31) ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಮೃತ ದುರ್ದೈವಿಯಾಗಿದ್ದು, ಪ್ರಕರಣದಲ್ಲಿ ದೀಪಕ ಬೇವಿನಟ್ಟಿ (34), ಪದ್ಮಾವತಿ ಬೇವಿನಕಟ್ಟಿ(50), ರಾಮಚಂದ್ರ ಬೇವಿನಕಟ್ಟಿ(64) ಎಂಬ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.


ಏನಿದು ಪ್ರಕರಣ?


ಬೆಳಗಾವಿ ಪೊಲೀಸರು ಕಾರ್ಯಾಚರಣೆ ನಡೆಸಿ ವರದಕ್ಷಿಣೆ ಆಸೆಗಾಗಿ ಸೊಸೆಯನ್ನು ಕೊಲೆಗೈಗಿದ್ದ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಶ್ರೀದೇವಿ ಎಂಬ ಯುವತಿಯನ್ನು ದೀಪಕ ಬೇವಿನಕಟ್ಟಿ ಎಂಬ ಯುವಕನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.


ಬಂಧಿತ ಆರೋಪಿಗಳು


ಆದರೆ ಮದುವೆಯಾಗಿ 3 ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ, ಇದರಿಂದ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದ ಗಂಡ ಹಾಗೂ ಅತ್ತೆ ಮಾವ ತವರು ಮನೆಯಿಂದ ಹಣ ತರಲು ಪೀಡಿಸುತ್ತಿದ್ದರಂತೆ.




ಇದನ್ನೂ ಓದಿ: Crime News: ಫೇಲ್​​ ಆಗಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ; ಇತ್ತ ಮಲಗಿದ್ದಲ್ಲೇ ಪತ್ನಿಯ ಕಥೆ ಮಗಿಸಿ ತಾನು ನೇಣಿಗೆ ಶರಣಾದ ಪತಿ!


ಈ ನಡುವೆ ಕಳೆದ ಎರಡು ದಿನಗಳ ಹಿಂದೆ ಅತ್ತೆ, ಮಾವ ಹಾಗೂ ಗಂಡ, ಶ್ರೀದೇವಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರಂತೆ. ಯಮಕನಮರಡಿ ಪೊಲೀಸರು ಪ್ರಕರಣ ತನಿಖೆ ಪರಿಶೀಲನೆ ನಡೆಸಿದ್ದು, ಗೋಕಾಕ್ ಡಿವೈಎಸ್​​ಪಿ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

First published: