ಗಾಜಿಯಾಬಾದ್ : ಚಳಿಗಾಲದಲ್ಲಿ ನಾವು ನಮ್ಮ ಸ್ನಾನಗೃಹಗಳಲ್ಲಿ (Bathroom) ಗಮನಾರ್ಹ ಸಮಯವನ್ನು ಕಳೆಯುತ್ತೇವೆ, ದೀರ್ಘ ಸಮಯ ಬಿಸಿ ನೀರಿನಿಂದ ಸ್ನಾನ ಮಾಡುತ್ತೇವೆ. ಅನೇಕರು ಸ್ನಾನಗೃಹಗಳಲ್ಲಿ ಗ್ಯಾಸ್ ಗೀಸರ್‌ಗಳನ್ನು ಹೊಂದಿದ್ದಾರೆ. ಆದರೆ ಸರಿಯಾದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಅದರಿಂದ ಬಿಡುಗಡೆಯಾಗುವ ವಿಷಾನಿಲದಿಂದ ತಲೆತಿರುಗುವಿಕೆ, ರೋಗಗ್ರಸ್ತವಾಗುವಿಕೆಗಳು (Diseased), ಪ್ರಜ್ಞಾಹೀನತೆ, ಕೋಮಾ (Coma) ಮತ್ತು ಹೃದಯ ಸ್ತಂಭನದಂತಹ (Cardiac Arrest) ರೋಗಕ್ಕೆ ಒಳಗಾಗಬಹುದು. ಇಂತಹದ್ದೆ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಡೆದಿದ್ದು, ಹೋಳಿ ಆಡಿಕೊಂಡು ಬಂದ ದಂಪತಿ ಗ್ಯಾಸ್ ಗೀಸರ್ (Gas Geyser) ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಹೋಳಿ ಆಡಿ ಬಂದಿದ್ದ ದಂಪತಿ
ಬುಧವಾರ ದೇಶಾದ್ಯಂತ ಹೋಳಿಯನ್ನು ಭರ್ಜರಿಯಾಗಿ ಆಚರಿಸಿಲಾಗಿದೆ. ಬಣ್ಣದೋಕುಳಿಯಲ್ಲಿ ದೇಶದ ಜನತೆ ಮಿಂದೆದಿದ್ದರು. ಹಬ್ಬದ ಸಂಭ್ರಮದಲ್ಲೂ ದುರಂತವೊಂದು ಸಂಭವಿಸಿದೆ, ಗಾಜಿಯಾಬಾದ್ನಲ್ಲಿ ಹೋಳಿಯಾಡಿದ ನಂತರ ಸ್ನಾನಕ್ಕೆಂದು ಹೋದ ದಂಪತಿ ಗ್ಯಾಸ್ ಗೀಸರ್ ಸೋರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಿಲು ಒಡೆದು ಇಬ್ಬರನ್ನೂ ಹೊರ ತೆಗೆಯಲಾಗಿದೆ. ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೋಳಿ ಹಬ್ಬದಂದು ನಡೆದ ಈ ಘಟನೆಯಿಂದ ಕುಟುಂಬ ಹಾಗೂ ಸುತ್ತಮುತ್ತಲಿನವರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮೃತ ದೀಪಕ್ ಗೋಯಲ್ ತನ್ನ ಪತ್ನಿ ಶಿಲ್ಪಿ ಮತ್ತು ಇಬ್ಬರು ಮಕ್ಕಳೊಂದಿಗೆ ಅಗ್ರಸೇನ್ ಮಾರುಕಟ್ಟೆಯಲ್ಲಿ ವಾಸಿಸುತ್ತಿದ್ದರು.
ಒಂದು ಗಂಟೆಯ ನಂತರ ಪ್ರಕರಣ ಬೆಳಕಿಗೆ
ಹೋಳಿ ಆಡಿದ ನಂತರ ಪತಿ-ಪತ್ನಿ ಇಬ್ಬರೂ ಸಂಜೆ 4 ಗಂಟೆ ಸುಮಾರಿಗೆ ಸ್ನಾನಗೃಹಕ್ಕೆ ಸ್ನಾನಕ್ಕೆ ತೆರಳಿದ್ದರು. ಗಂಟೆಗಳು ಕಳೆದರೂ ಹೊರಗೆ ಬಾರದಿದ್ದಾಗ ಮಕ್ಕಳು ಕೂಗಿಕೊಂಡಿದ್ದು, ಕುಟುಂಬಸ್ಥರು ಅಲ್ಲಿಗೆ ಆಗಿಮಿಸಿದ್ದಾರೆ. ಒಳಗಿನಿಂದ ಯಾವುದೇ ಶಬ್ದ ಬರದಿದ್ದಾಗ ಮನೆಯವರು ಬಾಗಿಲು ಒಡೆದು ಇಬ್ಬರನ್ನೂ ಹೊರಕ್ಕೆ ತಂದಿದ್ದಾರೆ. ಆ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಆನ್ ಆಗಿರುವುದು ಕಂಡು ಬಂದಿದೆ. ತಕ್ಷಣವೇ ತರಾತುರಿಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರನ್ನೂ ಗಾಜಿಯಾಬಾದ್‌ನ ಆಸ್ಪತ್ರೆಗೆ ದಾಖಲಿಸಿದರಾದರೂ, ಅವರೂ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಗ್ಯಾಸ್ ಗೀಸರ್ ಸೋರಿಕೆಯಿಂದ ನವವಧು ಸಾವು
ಕಳೆದ ತಿಂಗಳು ಉತ್ತರಪ್ರದೇಶದ ಮೀರತ್ ನಗರದಲ್ಲಿ ವಿವಾಹವಾಗಿ ಗಂಡನ ಮನೆಗೆ ಸೇರಿದ ಮಾರನೆಯ ದಿನವೇ ಮಹಿಳೆ ಗ್ಯಾಸ್ ಗೀಸರ್ (Gas Geyser) ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ನಾನಕ್ಕೆಂದು ಹೋಗಿದ್ದ ಮಹಿಳೆ ಸಾಕಷ್ಟು ಸಮಯವಾದರೂ ಹೊರ ಬರದಿದ್ದರಿಂದ ಅನುಮಾನಗೊಂಡು ಮನೆಯವರು ಬಾಗಿಲು ತಟ್ಟಿದ್ದಾರೆ. ಸ್ನಾನದ ಕೋಣೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಆಕೆ ಪಜ್ಞೆ ತಪ್ಪಿ ಬಿದ್ದಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ವೈದ್ಯರು ಮಹಿಳೆ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಗ್ಯಾಸ್ ಗೀಸರ್ನಿಂದ ಕಾರ್ಬೋ ಮೊನಾಕ್ಷೈಡ್ ಬಿಡುಗಡೆ
ಗ್ಯಾಸ್ ಗೀಜರ್‌ಗಳನ್ನು ಆನ್ ಮಾಡಿದಾಗ ನೀರನ್ನು ಬಿಸಿ ಮಾಡುವುದಕ್ಕೆ ಅದು ಸಂಪೂರ್ಣ ಆಮ್ಲಜನಕವನ್ನು ಬಳಸಿಕೊಂಡು ಕಾರ್ಮೋನ್ ಮೊನಾಕ್ಸೈಡ್(Carbon Monoxide) ಅನ್ನು ಬಿಡುಗಡೆ ಮಾಡುತ್ತದೆ. ಯಾವುದೇ ವ್ಯಕ್ತಿ ಸ್ನಾನ ಕೋಣೆಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿಕೊಂಡು ಸ್ನಾನಕ್ಕೆ ಮುಂದಾಗುವುದರಿಂದ ಕೆಲವೇ ಕ್ಷಣಗಳಲ್ಲಿ ವಿಷ ಗಾಳಿ ಸೇವಿಸಿ ಪ್ರಜ್ಞೆ ತಪ್ಪುತ್ತಾರೆ. ಇದರಿಂದ ಅವರು ಹೊರಗಿನವರ ಸಹಾಯ ಪಡೆದುಕೊಳ್ಳಲು ವಿಫಲರಾಗಿ ಕೊನೆಯುಸಿರೆಳೆಯುತ್ತಾರೆ.
ಗ್ಯಾಸ್ ಗೀಸರ್ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ