ಉತ್ತರಪ್ರದೇಶ/ ಲಕ್ನೋ: ಶಿಕ್ಷಕಿ (Teacher) ಮತ್ತು ವಿದ್ಯಾರ್ಥಿಯ (Student) ವಿಚಿತ್ರ ಪ್ರೇಮಕಥೆಯೊಂದು (Love Story) ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida) 16 ವರ್ಷದ ಅಪ್ರಾಪ್ತ ವಿದ್ಯಾರ್ಥಿಯನ್ನು ಹುಚ್ಚಳಂತೆ ಪ್ರೀತಿಸುತ್ತಿದ್ದ ಶಿಕ್ಷಕಿ ಇದೀಗ ಆತನೊಂದಿಗೆ ಓಡಿ ಹೋಗಿದ್ದಾಳೆ.ಇದೀಗ ವಿದ್ಯಾರ್ಥಿಯ ತಂದೆ (Student Father) ಶಿಕ್ಷಕಿಯ ವಿರುದ್ಧ ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದದ್ದು, ಸದ್ಯ ಪೊಲೀಸರು (Police) ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಸೆಕ್ಟರ್ 123 ರಲ್ಲಿ ವಾಸಿಸುತ್ತಿದ್ದ 22 ವರ್ಷದ ಶಿಕ್ಷಕಿಯೊಬ್ಬಳು ಮನೆಯಲ್ಲಿಯೇ ಮಕ್ಕಳಿಗೆ ಟ್ಯೂಷನ್ (Tution) ಮಾಡುತ್ತಿದ್ದಳು. ಈ ಶಿಕ್ಷಕಿಯ ಮನೆಯ ಎದುರುಗಡೆಯೇ ವಾಸಿಸುತ್ತಿದ್ದ 16 ವರ್ಷದ ಹುಡುಗ ಟ್ಯೂಷನ್ಗೆಂದು ಈಕೆಯ ಮನೆಗೆ ಬರುತ್ತಿದ್ದನು. ಈ ವೇಳೆ ಇಬ್ಬರ ಪರಸ್ಪರ ಇಷ್ಟಪಡಲು ಆರಂಭಿಸಿದರು. ಬಳಿಕ ಇವರಿಬ್ಬರ ನಡುವೆ ಪ್ರೀತಿ ಚಿಗುರತೊಡಗಿತು. ಆದರೆ ಭಾನುವಾರ ಇವರಿಬ್ಬರೂ ಮನೆಯಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ.
ಚಿಕ್ಕಮ್ಮನ ಮನೆ ಹೋಗಿ ಬರ್ತೀನಿ ಅಂದವನು ರಾತ್ರಿ ಆದ್ರೂ ಮನೆಗೆ ಬರಲಿಲ್ಲ
ವಿದ್ಯಾರ್ಥಿಯ ತಂದೆ ಮೂಲತಃ ಡಿಯೋರಿಯಾದವರು. 16 ವರ್ಷದ ಮಗ ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದು, ರಾತ್ರಿಯಾದರೂ ವಾಪಸ್ ಬಂದಿಲ್ಲ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಎದುರುಗಡೆ ಮನೆಯಲ್ಲಿ ವಾಸಿಸುತ್ತಿದ್ದ 22 ವರ್ಷದ ಯುವತಿಯ ಮೋಹಕ್ಕೆ ಸಿಲುಕಿದ್ದಾನೆ ಎಂದು ಅಪ್ರಾಪ್ತ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಹುಡುಗನ ತಂದೆ ನೀಡಿದ ದೂರಿನ ಮೇರೆಗೆ ಶಿಕ್ಷಕಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ಮತ್ತು ಶಿಕ್ಷಕಿ ಇಬ್ಬರು ರಿಲೇಶನ್ ಶಿಪ್ನಲ್ಲಿದ್ರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್ಚುವರಿ ಡಿಸಿಪಿ ಅಶುತೋಷ್ ದ್ವಿವೇದಿ ಅವರು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಾಲಕಿಯೊಂದಿಗೆ ಹುಡುಗ ಓದಲು ಹೋಗುತ್ತಿದ್ದ ಎಂದು ವರದಿಯಾಗಿದೆ. ಇಬ್ಬರೂ ರಿಲೇಶನ್ ಶಿಪ್ ನಲ್ಲಿರುವುದು ಕೂಡ ಬಹಿರಂಗವಾಗಿದೆ. ಶೀಘ್ರದಲ್ಲೇ ಇಬ್ಬರನ್ನೂ ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಗೆ ಲವ್ ಲೆಟರ್ ನೀಡಿದ್ದ ಶಿಕ್ಷಕ
ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಕನೌಜ್ನ ಪ್ರಾಥಮಿಕ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕನೋರ್ವ ಅಪ್ರಾಪ್ತ ಬಾಲಕಿಗೆ ಲವ್ ಲೆಟರ್ ನೀಡಿದ್ದನು. ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶಿಕ್ಷಕ, ಇದೇ ಹುಚ್ಚು ಪ್ರೀತಿಯಲ್ಲಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿದ್ದನು. ಈ ವಿಚಾರವನ್ನು ವಿದ್ಯಾರ್ಥಿನಿಯು ತನ್ನ ಕುಟುಂಬಸ್ಥರಿಗೆ ತಿಳಿಸಿದಾಗ, ಶಿಕ್ಷಕನೊಂದಿಗೆ ಆತನ ಕುಟುಂಬಸ್ಥರು ರಾದ್ಧಾಂತ ನಡೆಸಿದ್ದಾರೆ. ಅಲ್ಲದೇ ಬಾಲಕಿ ತಂದೆ ನ್ಯಾಯಕ್ಕಾಗಿ ಕೊತ್ವಾಲಿಯಲ್ಲಿರುವ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಘಟನೆಯು ಕನ್ನೌಜ್ ಸದರ್ ಕೊಟ್ವಾಲಿ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿತ್ತು.
ಪತ್ರದಲ್ಲಿ ಏನಿತ್ತು?
ಪತ್ರದಲ್ಲಿ ಶಿಕ್ಷಕ 'ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ರಜಾದಿನಗಳಲ್ಲಿ ನಿನ್ನನ್ನು ತುಂಬಾ ಕಳೆದುಕೊಂಡಿದ್ದೇನೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನಗೆ ಫೋನ್ ಸಿಕ್ಕಿದರೆ, ಫೋನ್ ಮಾಡಬೇಕೆನಿಸಿದರೆ ಮಾಡು. ನಿನಗೆ ಪ್ರೀತಿ ಇದ್ದರೆ ಖಂಡಿತವಾಗಿಯೂ ಮಾಡ್ತೀಯಾ.
ಇದನ್ನೂ ಓದಿ: Love Letter: ವಿದ್ಯಾರ್ಥಿನಿಗೆ ಶಿಕ್ಷಕನೇ ಬರೆದ ಲವ್ ಲೆಟರ್! ಬೇಲಿನೇ ಎದ್ದು ಹೊಲ ಮೇಯುವುದು ಅಂದ್ರೆ ಇದೇನಾ?
ನಾನು ನಿನ್ನನ್ನು 8 ಗಂಟೆಗೆ ಬರಬೇಕು ಎಂದು ಫೋನ್ ಮಾಡಿ ತಿಳಿಸಿದರೆ, ನೀನು ಬೇಗ ಶಾಲೆಗೆ ಬರಬಹುದು. ನಿನಗೆ ಬರಲು ಸಾಧ್ಯವಾದರೆ ತಿಳಿಸು, ನಿನ್ನ ಜೊತೆ ಮಾತನಾಡಲು ಬಹಳಷ್ಟು ಇದೆ. ಪಕ್ಕದಲ್ಲಿ ಕುಳಿತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋಣ. ನನ್ನ ಈ ಜೀವನದಲ್ಲಿ ನೀನಿರಲು ಬಯಸುತ್ತೇನೆ. ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ. ಪತ್ರ ಓದಿದ ನಂತರ ಹರಿದು ಹಾಕು, ಯಾರಿಗೂ ತೋರಿಸಬೇಡ ಎಂದು ಶಿಕ್ಷಕ ಪತ್ರದಲ್ಲಿ ತಿಳಿಸಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ