• ಹೋಂ
  • »
  • ನ್ಯೂಸ್
  • »
  • Crime
  • »
  • Chikkamagaluru: ಆಟವಾಡುತ್ತಾ ಭದ್ರಾ ಕಾಲುವೆಗೆ ಬಿದ್ದ ಬಾಲಕಿಯರು, ರಕ್ಷಣೆಗೆ ತೆರಳಿದ್ದ ವ್ಯಕ್ತಿ ಸೇರಿ ಮೂವರು ಸಾವು!

Chikkamagaluru: ಆಟವಾಡುತ್ತಾ ಭದ್ರಾ ಕಾಲುವೆಗೆ ಬಿದ್ದ ಬಾಲಕಿಯರು, ರಕ್ಷಣೆಗೆ ತೆರಳಿದ್ದ ವ್ಯಕ್ತಿ ಸೇರಿ ಮೂವರು ಸಾವು!

ನೀರಿನಲ್ಲಿ ಮುಳುಗಿ ಮೂವರ ಸಾವು

ನೀರಿನಲ್ಲಿ ಮುಳುಗಿ ಮೂವರ ಸಾವು

ಮೃತ ಅನನ್ಯ, ಶಾಮವೇಣಿ ರವಿಯ ಸಹೋದರಿಯರ ಮಕ್ಕಳು ಅನನ್ಯ ಮೂಲತಃ ಶಿವಮೊಗ್ಗದವರು, ಶಾಮವೇಣಿ ನಂಜನಗೂಡಿನವರು. ಸಂಬಂಧಿ ಮನೆಗೆ ಬಂದಾಗ ದುರ್ಘಟನೆ ಘಟನೆ ನಡೆದಿದೆ.

  • Share this:

ಚಿಕ್ಕಮಗಳೂರು: ನೀರಿನಲ್ಲಿ ಆಟವಾಡುವಾಗ (Playing) ಆಯತಪ್ಪಿ ಬಿದ್ದು, ಭದ್ರಾ ಕಾಲುವೆಯಲ್ಲಿ (Bhadra Canal) ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ತರೀಕೆರೆ (Tarikere) ತಾಲೂಕಿನ ಭದ್ರಾ ಡ್ಯಾಂನ ಬಲದಂಡೆ ಕಾಲುವೆಯಲ್ಲಿ ನಡೆದಿದೆ. ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೋಗಿ ಮೂವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನ ರವಿ (31), ಅನನ್ಯ (17), ಶಾಮವೇಣಿ (16) ಅಂತಾ ಗುರುತಿಸಲಾಗಿದೆ.


ಮೃತ ಅನನ್ಯ, ಶಾಮವೇಣಿ ರವಿಯ ಸಹೋದರಿಯರ ಮಕ್ಕಳು ಅನನ್ಯ ಮೂಲತಃ ಶಿವಮೊಗ್ಗದವರು, ಶಾಮವೇಣಿ ನಂಜನಗೂಡಿನವರು. ಸಂಬಂಧಿ ಮನೆ ಲಕ್ಕವಳ್ಳಿಗೆ ಬಂದಾಗ ಈ ಘಟನೆ ನಡೆದಿದ್ದು, ರವಿ ಮೃತದೇಹ ಮೊದಲು ಪತ್ತೆಯಾಗಿದೆ. ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಎಸ್​​ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.




ಇದನ್ನೂ ಓದಿ: Crime News: ಬೇಲ್​ ಮೇಲೆ ಹೊರ ಬಂದಿದ್ದ ರೌಡಿ ಶೀಟರ್‌ಗೆ ಮುಹೂರ್ತ, ಬರ್ಬರವಾಗಿ ಕೊಂದು ಮೂಟೆ ಕಟ್ಟಿ ಎಸೆದು ಹೋದ ದುಷ್ಕರ್ಮಿಗಳು!


ವಿದ್ಯುತ್ ಶಾಕ್​​ಗೆ ಯುವಕ ಬಲಿ


ಇತ್ತ ಮೈಸೂರಿನಲ್ಲಿ (Mysuru) ಮಳೆ ಅನಾಹುತಯಿಂದ ಅನಾಹುತ ಸಂಭವಿಸಿದ್ದು, ವಿದ್ಯುತ್ ತಂತಿ (Electric Wire) ತುಳಿದು ಯುವಕ ನೋರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಿರಿಯಾಪಟ್ಟಣ (Piriyapatna) ತಾಲೂಕು ಬಾರಸೆ ಗ್ರಾಮದಲ್ಲಿ ಘಟನೆ ನಡೆದಿದ್ದು, 18 ವರ್ಷದ ಯುವಕ ಸ್ವಾಮಿ ಮೃತ ದುರ್ದೈವಿಯಾಗಿದ್ದಾರೆ.

top videos


    ಇನ್ನು, ಹರೀಶ್ ಹಾಗೂ ಸಂಜಯ್‌ಗೆ ಗಾಯಗೊಂಡಿದ್ದು, ಅವರನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿರುಗಾಳಿ ಮಳೆಯಿಂದ ಜಮೀನಿನಲ್ಲಿ ವಿದ್ಯುತ್ ತಂತಿ ಮುರಿದು ಬಿದ್ದು, ವಿದ್ಯುತ್ ತಂತಿ ಪಕ್ಕಕ್ಕೆ ಸರಿಸುವ ವೇಳೆ ಅನಾಹುತ ಸಂಭವಿಸಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    First published: