• Home
  • »
  • News
  • »
  • crime
  • »
  • Bengaluru: ಚಡ್ಡಿ ಹಾಕೊಂಡು ರಸ್ತೆಗಿಳಿದರೆ ಮುಗೀತು; ಸರಗಳ್ಳತನ ಮಾಡ್ತಿದ್ದ 'ಚಡ್ಡಿ ಗ್ಯಾಂಗ್'ಗೆ ಪೊಲೀಸರ ಬ್ರೇಕ್​​

Bengaluru: ಚಡ್ಡಿ ಹಾಕೊಂಡು ರಸ್ತೆಗಿಳಿದರೆ ಮುಗೀತು; ಸರಗಳ್ಳತನ ಮಾಡ್ತಿದ್ದ 'ಚಡ್ಡಿ ಗ್ಯಾಂಗ್'ಗೆ ಪೊಲೀಸರ ಬ್ರೇಕ್​​

ಸರಗಳ್ಳತನ

ಸರಗಳ್ಳತನ

ಸುನೀಲ್ ಅಲಿಯಾಸ್​ ಸ್ಯಾಚ್​ ಸುನೀಲ, ಶ್ರೀನಿವಾಸ ಅಲಿಯಾಸ್​ ಚಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ. 150ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಇದೊಂದು ಚಡ್ಡಿ ಗ್ಯಾಂಗ್ (Chaddi Gang)​, ಚಡ್ಡಿ ಹಾಕೊಂಡು ರಸ್ತೆಗಿಳಿದರೆ ಮುಗೀತು. ಚಿನ್ನದ ಚೈನು ಜೇಬಿಗೆ (Gold Jewellery) ಇಳಿಸದೆ ಮನೆಗೆ ವಾಪಸ್​ ಆಗ್ತಾನೇ ಇರಲಿಲ್ಲ. ಅಷ್ಟು ಮಾತ್ರವಲ್ಲದೆ ಯಾವುದೇ ಸಾಕ್ಷಿಯನ್ನೂ ಬಿಡದೆ ಮನೆಗೆ ಬಂದು ಸೇರಿಕೊಳ್ತಿತ್ತು. ಆದರೆ ಕೊನೆಗೆ ಆಗಿದ್ದೇನು? ಆಕ್ಟಿವಾದಲ್ಲಿ (Activa Bike) ಅಫೆನ್ಸ್​ ಮಾಡಿದ್ದ ಜೋಡಿ ಸಿಕ್ಕಿ ಬಿದ್ದಿದ್ದೇ ರೋಚಕವಾಗಿದೆ. ಸಾಕಷ್ಟು ದಿನಗಳಿಂದ ಏರಿಯಾದಲ್ಲಿ ತಲೆನೋವಾಗಿ ಪರಿಣಮಿಸಿದ್ದ ಚಡ್ಡಿ ಗ್ಯಾಂಗ್​ಗೆ ಹನುಮಂತನಗರ ಪೊಲೀಸರು (Hanumantha Nagar Police) ಬ್ರೇಕ್​ ಹಾಕಿದ್ದ, ಇಬ್ಬರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.


ಜೈಲು ಶಿಕ್ಷೆ ಅನುಭವಿಸಿದ ಖತರ್ನಾಕ್​ ಜೋಡಿ ಮತ್ತೆ ಅರೆಸ್ಟ್!


ಸುನೀಲ್ ಅಲಿಯಾಸ್​ ಸ್ಯಾಚ್​ ಸುನೀಲ, ಶ್ರೀನಿವಾಸ ಅಲಿಯಾಸ್​ ಚಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ. 2006ರಲ್ಲಿ ರಾಬರಿ ಕೇಸ್​ನಲ್ಲಿ ಜೈಲು ಸೇರಿದ್ದ ಸುನೀಲ 2016ರಲ್ಲಿ ಹೊರಕ್ಕೆ ಬಂದಿದ್ದ.


ಇನ್ನು ಚಡ್ಡಿ ಶ್ರೀನಿವಾಸ ಕೂಡ ಜೈಲಿನಲ್ಲಿ ಮುದ್ದೆ ಮುರಿದು ಹೊರಕ್ಕೆ ಬಂದಿದ್ದ. ಜೈಲಿಂದ ಹೊರಕ್ಕೆ ಬಂದವರು ಮತ್ತೆ ಹಳೇ ಚಾಳಿಯನ್ನೇ ಮುಂದುವರಿಸಿದ್ದರು. ಚಡ್ಡಿ ಹಾಕೊಂಡು ಆಕ್ಟಿವಾದಲ್ಲಿ ಹೊರಟವರು ಮಹಿಳೆಯರ ಸರ ಎಗರಿಸದೆ ವಾಪಸ್ ​ಬರ್ತಾನೇ ಇರ್ತಿರಲಿಲ್ಲವಂತೆ.


ಆರೋಪಿಗಳಾದ ಸುನೀಲ ಮತ್ತು ಶ್ರೀನಿವಾಸ


ಇದನ್ನೂ ಓದಿ: Aero India 2023: ಫೆ.13ರಿಂದ ಬೆಂಗಳೂರಿನಲ್ಲಿ ಏರ್ ​ಶೋ; ಟಿಕೆಟ್​ ಬೆಲೆ ಎಷ್ಟು? ಬುಕ್​ ಮಾಡೋದು ಹೇಗೆ?


ಹನುಮಂತನಗರ ಪೊಲೀಸರ ಬಲೆಗೆ ಬಿದ್ದ ‘ಚಡ್ಡಿ ಗ್ಯಾಂಗ್’


ಮಾಸ್ಕ್ ಮತ್ತು ಹೆಲ್ಮೆಟ್​ ಹಾಕಿಕೊಂಡು ಫೀಲ್ಡಿಗೆ ಇಳಿದಿದ್ದ ಸುನೀಲ್ ಮತ್ತು ಶ್ರೀನಿವಾಸ್, ಜನವರಿ ನಾಲ್ಕರ ಮಧ್ಯಾಹ್ನ ಹನುಮಂತನಗರ ವ್ಯಾಪ್ತಿಯ ಅಶೋಕನಗರದಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಿದ್ದರು. 5ನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 56 ವರ್ಷದ ಶಿಕ್ಷಕಿ ಕತ್ತಿನಿಂದ 30 ಗ್ರಾಂ ಚಿನ್ನದ ಸರವನ್ನ ಕಿತ್ತು ಪರಾರಿಯಾಗಿದ್ದರು.


ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಅಖಾಡಕ್ಕಿಳಿದ ಪೊಲೀಸರು, 150ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿದ್ದರು. ಆಗ ಚಡ್ಡಿ ಗ್ಯಾಂಗ್​ ಬಗ್ಗೆ ಸುಳಿವು ಸಿಕ್ಕಿತ್ತು. ಬಂಧಿತ ಆರೋಪಿಗಳಿಂದ ಚಿನ್ನದ ಸರದ ಜೊತೆಗೆ 12 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: Bengaluru: ಆಟೋ ಹತ್ತಿದಾಕೆಯ ಮಗಳನ್ನೇ ಪಟಾಯಿಸಿದ, ಸೂಸೈಡ್​ ನಾಟಕ ಮಾಡಿದ ಯುವತಿ ಸಾವು!




ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್, ಇಬ್ಬರು ಆರೋಪಿಗಳಾದ ಸುನೀಲ್​ ಹಾಗೂ ಶ್ರೀನಿವಾಸ್ ಇಬ್ಬರು ದ್ವಿಚಕ್ರ ವಾಹನದ ಮೇಲೆ ಮಹಿಳೆಯೊಬ್ಬರಿಂದ 70 ಗ್ರಾಂ ತೂಕದ ಚೈನ್​ ಒಂದನ್ನು ಸರಗಳ್ಳತನ ಪರಾರಿಯಾಗಿದ್ದರು. ಅವರ ಮೇಲೆ ಐಪಿಸಿ ಸೆಕ್ಷನ್ 396 ಅಡಿ (ದರೋಡೆ) ದೂರು ದಾಖಲಿಸಿಕೊಂಡು ಕ್ರಮಕೈಗೊಂಡಿದ್ದೇವೆ. ಘಟನೆ ನಡೆದ 10 ದಿನಗಳ ಒಳಗೆ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದು, ಅವರು ಕಳ್ಳತನ ಮಾಡಿದ್ದ ಚಿನ್ನದ ಅರ್ಧ ಭಾಗ ರಿಕವರಿಯಾಗಿದೆ. ಉಳಿದ ಅರ್ಧ ಭಾಗ ಪತ್ತೆ ಮಾಡುತ್ತಿದ್ದೇವೆ. ಅವರು ಬಳಕೆ ಮಾಡಿದ್ದ ಬೈಕ್​ಅನ್ನು ಸೀಜ್​ ಮಾಡಿದ್ದೇವೆ ಎಂದು ಹೇಳಿದ್ದಾರೆ.


ಆರೋಪಿಗಳಾದ ಸುನೀಲ ಮತ್ತು ಶ್ರೀನಿವಾಸ


ಬೆಂಗಳೂರಿನ ನಾಯಂಡಹಳ್ಳಿ ಮೂಲದ ಸುನೀಲ ಮತ್ತು ಶ್ರೀನಿವಾಸ ಜೈಲಿನಿಂದ ಬಂದ ಬಳಿಕ ಕಳ್ಳತನಕ್ಕೆ ಇಳಿದಿದ್ದರು. ಇಬ್ಬರೂ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಕ್ಲೂ ಸಿಗದೆ ಇದ್ದಾಗಲೂ ಶ್ರಮಪಟ್ಟು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದಾರೆ.

Published by:Sumanth SN
First published: