• ಹೋಂ
 • »
 • ನ್ಯೂಸ್
 • »
 • Crime
 • »
 • Brother-Sister: ತಂಗಿಯನ್ನು ಕೊಂದು ನದಿಗೆಸೆದ ಅಣ್ಣಂದಿರು! ಕಾರಣ ಶಾಕಿಂಗ್

Brother-Sister: ತಂಗಿಯನ್ನು ಕೊಂದು ನದಿಗೆಸೆದ ಅಣ್ಣಂದಿರು! ಕಾರಣ ಶಾಕಿಂಗ್

ತಂಗಿಯನ್ನೇ ಕೊಂದ ಅಣ್ಣಂದಿರು

ತಂಗಿಯನ್ನೇ ಕೊಂದ ಅಣ್ಣಂದಿರು

ಪ್ರೀತಿಯ ತಂಗಿಯನ್ನೇ ಉಸಿರುಗಟ್ಟಿಸಿ ಕೊಂದ ಅಣ್ಣಂದಿರು, ಕಾರಣ ಏನು ಗೊತ್ತಾ? ಆಂಧ್ರದಲ್ಲಿ ಅಣ್ಣಂದಿರು ತಂಗಿಯನ್ನು ಕೊಂದು ನದಿಗೆಸೆದ ಘಟನೆ ನಡೆದಿದೆ. ಕಾರಣ ಬೆಚ್ಚಿ ಬೀಳಿಸುತ್ತೆ.

 • Share this:

ಹಲವು ಸಲ ಸಹೋದರರು (Brothers) ಸೇರಿ ಸಹೋದರಿಯನ್ನು  (Sister) ಸಾಯಿಸುವಂತಹ ಅಪರಾಧ ಸುದ್ದಿಗಳಲ್ಲಿ ಕೊಲೆಯ ಕಾರಣ ಅಂತಾರ್ಜಾತಿ ವಿವಾಹ (Inter Caste Marriage) ಆಗಿರುತ್ತದೆ. ಇಂತಹ ಪ್ರಕರಣಗಳು ಬೇಧಿಸಲ್ಪಟ್ಟಾಗ ಅಲ್ಲಿ ಮರ್ಯಾದಾ ಹತ್ಯೆಯೇ  (Honor Killing) ಕಾರಣವಾಗಿರುತ್ತವೆ. ಆದರೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿರೋ ಒಂದು ಕೊಲೆ ಪ್ರಕರಣ ಬೆಚ್ಚಿಬೀಳಿಸುತ್ತೆ. ಇಬ್ಬರು ಅಣ್ಣ ತಮ್ಮಂದಿರುವ ಸೇರಿಕೊಂಡು ಸ್ವಂತ ತಂಗಿಯನ್ನೇ  (Sisters) ಕೊಂದುಬಿಟ್ಟಿದ್ದಾರೆ. ಕಾರಣ ಶಾಕಿಂಗ್ (Shocking) ಆಗಿದೆ. ಇಲ್ಲಿದೆ ಪ್ರಕರಣದ ಫುಲ್ ಡೀಟೆಲ್ಸ್.


ನದಿಯಲ್ಲಿ ಸಿಕ್ಕಿತು ನಜ್ಮಾ


ಇಬ್ಬರು ಸಹೋದರರು ಸೇರಿ ತಂಗಿಯನ್ನು ಕೊಂದು ಮೃತದೇಹ ನದಿಗೆಸೆದು ಈಗ ಪೊಲೀಸರ ಅತಿಥಿಯಾಗಿದ್ದಾರೆ. 20 ವರ್ಷದ ನಜ್ಮಾ ಕೊಲೆಯಾದ ಯುವತಿ. ಶಾರುಖ್ ಖಾನ್ (32) ಹಾಗೂ ಸರ್ತಾಜ್ (28) ಬಂಧಿತರು. ಕಾಕ್ರಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಅವರು ಕಾರು ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 13ರಂದು ನದಿಯಲ್ಲಿ ನಜ್ಮಾ ಮೃತದೇಹ ತೇಲಿಕೊಂಡಿತ್ತು. ಇದನ್ನು ಅಲ್ಲಿನ ನಿವಾಸಿಗಳು ಕಂಡು ಹಿಡಿದು ರಿಪೋರ್ಟ್ ಮಾಡಿದ್ದಾರೆ.


ಪೋಸ್ಟ್​ ಮಾರ್ಟಂನಲ್ಲಿ ರಿವೀಲ್ ಆಯ್ತು ಸಾವಿನ ಅಸಲಿ ಕಾರಣ


ಸ್ಥಳೀಯರಿಗೆ ಮಹಿಳೆಯ ಮೃತದೇಹ ಸಿಕ್ಕಿತ್ತು. ನದಿಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ನಂತರ ಪೋಸ್ಟ್​ ಮಾರ್ಟಂಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ 5 ದಿನಗಳ ಹಿಂದೆ ಮೃತಪಟ್ಟಿರುವುದು ರಿವೀಲ್ ಆಗಿದೆ. ಕತ್ತು ಹಿಸುಕಿ ಕೊಲೆ ಮಾಡಿರುವುದು ಕೂಡಾ ಗೊತ್ತಾಗಿದೆ ಎಂದು ಡಿಎಸ್​ಪಿ ರಂಬದನ್ ಸಿಂಗ್ ಅವರು ತಿಳಿಸಿದ್ದಾರೆ.


ಮೃತದೇಹ ಸಿಕ್ಕಿದ್ಮೇಲೆ ನಾಪತ್ತೆ ಕೇಸ್


ಮಾರ್ಚ್ 14ರಂದು ಸರ್ತಾಜ್ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಸೂರಜ್​ಪುರ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದರು. ತನ್ನ ತಂಗಿ ನಜ್ಮಾ ಕಳೆದ 5 ದಿನಗಳಿಂದ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ನಂತರ ಸರ್ತಾಜ್ ಹಿಂಡನ್ ನದಿಯಲ್ಲಿ ಸಿಕ್ಕಿರುವ ಮೃತದೇಹ ತಮ್ಮ ಅಕ್ಕನದ್ದು ಎಂದು ಹೇಳಿದ್ದರು.


ಇದನ್ನೂ ಓದಿ: Explained: ಅಫ್ಘಾನಿಸ್ತಾನದಲ್ಲಿ 6.6 ತೀವ್ರತೆಯ ಭೂಕಂಪ; ಉತ್ತರ ಭಾರತದಲ್ಲೂ ಅಲ್ಲಲ್ಲಿ ನಡುಗಿದ ಭೂಮಿ, ಇದಕ್ಕೆಲ್ಲಾ ಕಾರಣವೇನು?


ಬಯಲಾಯ್ತು ಕೊಲೆ ರಹಸ್ಯ


ನಂತರ ಪ್ರಕರಣದ ತನಿಖೆ ನಡೆಸಿದಾಗ ಶಾಕಿಂಗ್ ವಿಚಾರಗಳು ರಿವೀಲ್ ಆಗಿವೆ. ಪೊಲೀಸರು ಸರ್ತಾಜ್ ಹಾಗೂ ಅವರ ಸಹೋದರ ಶಾರುಖ್ ಅವರನ್ನು ವಿಚಾರಣೆ ಮಾಡಿ ಕುಟುಂಬ ಸದಸ್ಯರನ್ನೂ ಪ್ರಶ್ನೆ ಮಾಡಿದೆ. ಆರಂಭ ತನಿಖೆಯಲ್ಲಿ ಸಹೋದರರೇ ಕೊಲೆ ಮಾಡಿದ್ದಾರೆ ಎನ್ನುವ ಸಂದೇಹ ಬಂದಿತ್ತು. ನಂತರ ಇಬ್ಬರೂ ಅಕ್ಕನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದರು. ಮಾರ್ಚ್ 8ರಂದು ರಾತ್ರಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಚಾರ್ ಮೂರ್ತಿ ಚೌಕ್ ಸಮೀಪ ನದಿಯಲ್ಲಿ ಮೃತದೇಹ ಎಸೆದಿದ್ದಾಗಿ ಹೇಳಿದ್ದಾರೆ.


ಕೊಲೆಯ ಹಿಂದಿದೆ ದೊಡ್ಡ ಕಹಾನಿ


ನಜ್ಮಾ ಅವರನ್ನು ಮಸೂರಿ ನಿವಾಸಿ ಸಾಜಿದ್​ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ನಜ್ಮಾ ಹಾಗೂ ಸಾಜಿದ್ ಸೂರಜ್​ಪುರದಲ್ಲಿ ವಾಸಿಸುತ್ತಿದ್ದರು. ಅವರು ಬೇರೆ ಬೇರೆಯಾಗಿ ವಾಸವಿದ್ದರು. ಅವರಿಗೆ ನಾಲ್ವರು ಮಕ್ಕಳಿದ್ದರು. ಅವರಲ್ಲಿ ಇಬ್ಬರು ಸಾಜಿದ್ ಜೊತೆ ಹಾಗೂ ಇನ್ನಿಬ್ಬರು ನಜ್ಮಾ ಪೋಷಕರ ಜೊತೆ ವಾಸವಿದ್ದರು. ನಜ್ಮಾ ವೈವಾಹಿಕ ಜೀವನದ ಸಮಸ್ಯೆಗಳಿಗೆ ಅವರ ಪೋಷಕರೂ ನೊಂದಿದ್ದರು. ನಜ್ಮಾ ಅವರು ಕುಡಿತದ ದಾಸಿಯಾಗಿದ್ದನ್ನೂ ಅವರ ಕುಟುಂಬ ಇಷ್ಟಪಡುತ್ತಿರಲಿಲ್ಲ.


ಕುಡಿದು ಮಾರ್ಕೆಟ್​ನಲ್ಲಿ ಬಿದ್ದಿದ್ದ 20 ವರ್ಷ ತಂಗಿ


ಮಾರ್ಚ್ 8ರಂದು ನಜ್ಮಾ ಅವರು ಗ್ರೇಟರ್​ ನೋಯ್ಡಾದ ಜಗತ್ ಫಾರ್ಮ್ ಮಾರ್ಕೆಟ್​ನಲ್ಲಿ ಮದ್ಯಪಾನ ಮಾಡುತ್ತಿದ್ದರು. ನಜ್ಮಾ ಅವರು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ಪೊಲೀಸರು ಅವರ ಅಣ್ಣ ಸರ್ತಾಜ್ ಕಾಲ್ ಮಾಡಿದ್ದರು. ಬಂದು ತಂಗಿಯನ್ನು ಕರೆದೊಯ್ಯುವಂತೆ ಹೇಳಿದ್ದರು. ಸರ್ತಾಜ್ ಹಾಗೂ ಶಾರುಖ್ ಬಂದು ತಂಗಿಯನ್ನು ಕರೆದೊಯ್ದರು. ನಂತರ ಅವರ ಮಧ್ಯೆ ಜಗಳ ನಡೆದಿತ್ತು. ನಂತರ ತಮ್ಮಂದಿರಿಬ್ಬರು ಅಕ್ಕನನ್ನು ಉಸಿರುಕಟ್ಟಿ ಸಾಯಿಸಿದ್ದಾರೆ. ನಂತರ ದೇಹವನ್ನು ನದಿಯಲ್ಲಿ ಡಿಸ್ಪೋಸ್ ಮಾಡಿದ್ದಾರೆ.

top videos


  ಆದರೆ ನಜ್ಮಾ ದೇಹ ನದಿಯಲ್ಲಿ ಪತ್ತೆಯಾದಾಗ ಎಚ್ಚೆತ್ತುಕೊಂಡ ಸಹೋದರರು ಸುಮ್ಮನ್ನೇ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸುವ ನಾಟಕ ಮಾಡಿದ್ದಾರೆ. ಇದೀಗ ಸಹೋದರರನ್ನು ಸೆಕ್ಷನ್ 302 (ಕೊಲೆ) ಆರೋಪದಡಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

  First published: