• Home
  • »
  • News
  • »
  • crime
  • »
  • Lover: ನಾನೇ ಪ್ರಿಯತಮೆಯನ್ನು ಕೊಂದೆ, ಈಗ ದೆವ್ವವಾಗಿ ಕಾಡ್ತಿದ್ದಾಳೆ! ಪೊಲೀಸರ ಮುಂದೆ ಪ್ರಿಯಕರನ ಕಣ್ಣೀರು

Lover: ನಾನೇ ಪ್ರಿಯತಮೆಯನ್ನು ಕೊಂದೆ, ಈಗ ದೆವ್ವವಾಗಿ ಕಾಡ್ತಿದ್ದಾಳೆ! ಪೊಲೀಸರ ಮುಂದೆ ಪ್ರಿಯಕರನ ಕಣ್ಣೀರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

8 ತಿಂಗಳಿಂದ ಯುವತಿ ಕಾಣೆಯಾಗಿದ್ದಳು. ಹೀಗಾಗಿ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಘಟನೆ ಜೆಲ್ವಾಡಿಯ ತೇಗದ ನರ್ಸರಿಯಲ್ಲಿ ವರದಿಯಾಗಿದೆ. 24 ವರ್ಷದ ಅಂಜು ಯಾದವ್ 8 ತಿಂಗಳಿಂದ ನಾಪತ್ತೆಯಾಗಿದ್ದಳು. ಜುಲೈ 2022 ರಲ್ಲಿ ಮೃತ ಬಾಲಕಿಯ ತಾಯಿ ರಾಮಶೀಲಾ ಯಾದವ್ ಕೂಡ ರಾಂಪುರ ಚೌಕಿಯಲ್ಲಿ ತನ್ನ ಮಗಳು ಕಾಣೆಯಾಗಿರುವುದಾಗಿ ದೂರನ್ನು ದಾಖಲಿಸಿದ್ದರು. 

ಮುಂದೆ ಓದಿ ...
  • Share this:

ರಾಯ್ಪುರ: 6  ತಿಂಗಳ ಬಳಿಕ ಕಾಡಿನಲ್ಲಿ ಯುವತಿಯೊಬ್ಬಳ ಶವವನ್ನು ಛತ್ತೀಸ್‌ಗಢದ (Chattisgarh) ಕೊರ್ಬಾದಲ್ಲಿ  ಪೊಲೀಸರು (Police) ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಈ ಪ್ರಕರಣ ಸಂಬಂಧ ಭಯಾನಕ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ರಿಸ್ದಿ ಪ್ರದೇಶದ ನಿವಾಸಿಯಾಗಿದ್ದ ಮೃತ ಯುವತಿ ಅಂಜು ಯಾದವ್​ಳನ್ನು ಆಕೆಯ ಪ್ರಿಯಕರನೇ (Lover) ಕೊಂದು ಕಾಡಿನಲ್ಲಿ 20 ಅಡಿ ಗುಂಡಿ ತೋಡಿ ಹೂತಿ ಹಾಕಿದ್ದನು. ಆದರೀಗ ಆರೋಪಿ ಪ್ರಿಯಕರ ಗೋಪಾಲ್ ಖಾಡಿಯಾ ತನ್ನ ಗೆಳತಿ ದೆವ್ವದ (Sprite) ರೂಪದಲ್ಲಿ ಕಾಡುತ್ತಿದ್ದಾಳೆ. ಈ ಭಯದಲ್ಲಿ ನರಳಾಡಲು ಆಗುತ್ತಿಲ್ಲ ಎಂದು ಪೊಲೀಸರ ಮುಂದೆ ಹಾಜರಾಗಿ ತಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದಾದ ಬಳಿಕ ಬುಧವಾರ ಪೊಲೀಸರು ಶವವನ್ನು ಗುಂಡಿಯಿಂದ ಹೊರತೆಗೆದಿದ್ದಾರೆ.


8 ತಿಂಗಳಿಂದ ಕಾಣೆಯಾಗಿದ್ದ ಯುವತಿ


8 ತಿಂಗಳಿಂದ ಯುವತಿ ಕಾಣೆಯಾಗಿದ್ದಳು. ಹೀಗಾಗಿ ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಘಟನೆ ಜೆಲ್ವಾಡಿಯ ತೇಗದ ನರ್ಸರಿಯಲ್ಲಿ ವರದಿಯಾಗಿದೆ. 24 ವರ್ಷದ ಅಂಜು ಯಾದವ್ 8 ತಿಂಗಳಿಂದ ನಾಪತ್ತೆಯಾಗಿದ್ದಳು. ಜುಲೈ 2022 ರಲ್ಲಿ ಮೃತ ಬಾಲಕಿಯ ತಾಯಿ ರಾಮಶೀಲಾ ಯಾದವ್ ಕೂಡ ರಾಂಪುರ ಚೌಕಿಯಲ್ಲಿ ತನ್ನ ಮಗಳು ಕಾಣೆಯಾಗಿರುವುದಾಗಿ ದೂರನ್ನು ದಾಖಲಿಸಿದ್ದರು.


young girl dead body found in near bridge mrq
ಸಾಂದರ್ಭಿಕ ಚಿತ್ರ


ಗೋಪಾಲ್ ಮೇಲೆ ಅನುಮಾನ ಹೊಂದಿದ್ದ ಮೃತ ಯುವತಿ ತಾಯಿ


ಅಲ್ಲದೇ ಗೋಪಾಲ್ ಖಾಡಿಯಾ (ವಯಸ್ಸು 25) ಎಂಬ ಯುವಕನ ಮೇಲೂ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದಾದ ಬಳಿಕ ಸಂತ್ರಸ್ತೆಯ ಕುಟುಂಬ ಎಸ್​ಪಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು.


ಆರೋಪಿ ಯುವತಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿ


ಮೃತ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಮಂಗಳವಾರ ಪೊಲೀಸರು ಆರೋಪಿ ಗೋಪಾಲ್ ಖಾಡಿಯಾನನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ತಾನು ಇಟ್ಟಿಗೆ ಭಟ್ಟಿಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿದ್ದು, ಅಂಜು ಯಾದವ್ ಕೂಡ ಅಲ್ಲಿಯೇ ಇಟ್ಟಿಗೆ ತುಂಬುತ್ತಿದ್ದಳು. ಈ ವೇಳೆ ಇರಿಬ್ಬರೂ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಭೇಟಿ ಪ್ರೀತಿಗೆ ತಿರುಗಿದೆ. ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು.


ಸಾಂದರ್ಭಿಕ ಚಿತ್ರ


ಮದುವೆಯಾಗುವಂತೆ ಒತ್ತಡ ಹೇರಿದ್ದ ಯುವತಿ


ಆದರೆ ನಂತರದ ದಿನಗಳಲ್ಲಿ ಮದುವೆಯಾಗುವಂತೆ ಯುವತಿ ಪ್ರಿಯಕರನಿಗೆ ಒತ್ತಡ ಹೇರಲು ಆರಂಭಿಸಿದ್ದಾಳೆ. ಮದುವೆ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ವಿಚಲಿತನಾದ ಗೋಪಾಲ್ ಅಂಜುವನ್ನು ಕೊಲ್ಲಲು ತೀರ್ಮಾನಿಸಿದ್ದಾನೆ. ನಂತರ ಗೆಳತಿಯನ್ನು ಝೆಲ್ವಾಡಿಯ ತೇಗದ ನರ್ಸರಿಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ 20 ಅಡಿ ಹಳ್ಳ ಅಗೆದು ಶವವನ್ನು ಹೂಳಿದ್ದಾನೆ. ಅಷ್ಟೇ ಅಲ್ಲದೇ ಕೊಲೆಯ ನಂತರ ತನ್ನ ಗೆಳತಿಯ ದೆವ್ವ ತನ್ನನ್ನು ಕಾಡುತ್ತಿದೆ. ಇದೇ ಭಯದಲ್ಲಿ ನರಳುತ್ತಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.


ಇದನ್ನೂ ಓದಿ: Psychology Tips: ನಿಮಗೆ ಬೇಕಾದವರನ್ನು ಪ್ರೀತಿಯ ತೆಕ್ಕೆಯಲ್ಲಿ ಬೀಳಿಸಿಕೊಳ್ಳಲು ಇಲ್ಲಿದೆ ಸೈಕಾಲಜಿ ಸಲಹೆ


ಮಗಳ ಅಸ್ಥಿಪಂಜರ ನೋಡಿ ತಾಯಿ ಕಣ್ಣೀರು


ಆರೋಪಿ ಹೇಳಿಕೆ ಬಳಿಕ ಕಾರ್ಯನಿರ್ವಾಹಕ ನ್ಯಾಯಾಧೀಶರ ಸಮ್ಮುಖದಲ್ಲಿ ಪೊಲೀಸರು ಜೆಸಿಬಿ ಸಹಾಯದಿಂದ ಮೃತ ಯುವತಿ ಅಸ್ಥಿಪಂಜರವನ್ನು ಹೊರತೆಗೆದಿದ್ದಾರೆ. ಈ ವೇಳೆ ರಾಂಪುರ ಮತ್ತು ಮಾಣಿಕಪುರ ಚೌಕಿಯ ಪೊಲೀಸರು ಉಪಸ್ಥಿತರಿದ್ದರು. ಇನ್ನೂ ಮಗಳ ಅಸ್ಥಿಪಂಜರ ನೋಡಿ ಮೃತ ಯುವತಿಯ ತಾಯಿ ಕಣ್ಣೀರು ಹಾಕಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಿ ಆತನನ್ನು ಜೈಲಿಗೆ ಅಟ್ಟಿದ್ದಾರೆ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು