ಬೆಂಗಳೂರು: ಅದು ಪಕ್ಕ ಪ್ಲ್ಯಾನ್ ನಂತೆ ಎಲ್ಲಾ ಕೆಲಸ ನಡೆಯುತಿತ್ತು. ಎರಡು ತಿಂಗಳಿಂದ ವಾಚ್ ಮಾಡಿದ್ದ ಕಳ್ಳರು ಐಷಾರಾಮಿ ಮನೆಯ (Luxury House) ತಿಜೋರಿ ಹೊಡೆಯಲು ಎಂಟ್ರಿ ಕೊಟ್ಟಿದ್ದರು. ಸೂರ್ಯೋದಕ್ಕೆ ಕೊಂಚ ಸಮಯವಿದ್ದ ಆ ಟೈಂ ಅವರಿಗೆ ಕೈ ಕೊಟ್ಟಿತ್ತು. ಪರಿಣಾಮ ಆದ ಎಡವಟ್ಟು ಅವರನ್ನು ಈಗ ಜೈಲಿಗೆ ಸೇರಿಸಿದೆ. ಹಣದ ಆಸೆಗಾಗಿ ದೊಡ್ಡ ಮನೆಯೊಂದಕ್ಕೆ ಬರೋಬ್ಬರಿ ಒಂದು ತಿಂಗಳು ಸ್ಕೆಚ್ ಹಾಕಿಪ್ಲಾನ್ ಎಕ್ಸಿಕ್ಯೂಟ್ಗೆ ಬಂದ ಕಳ್ಳರು ಗ್ಯಾಂಗ್, ಮನೆ ಮಾಲೀಕನ ಮಗನ ಸಮಯ ಪ್ರಜ್ಞೆಗೆ ಲಾಕ್ ಆದ ಘಟನೆ ರಾಜಧಾನಿ ಬೆಂಗಳೂರಿನ (Bengaluru) ತಲಘಟ್ಟಪುರದ (Talaghattapura) ವಿಶ್ರಾಂತಿ ಲೇಔಟ್ನಲ್ಲಿ ನಡೆದಿದೆ.
ಬರೋಬ್ಬರಿ ಒಂದು ತಿಂಗಳು ಮನೆ ವಾಚ್ ಮಾಡಿದ್ದ ಆರೋಪಿಗಳು
ವಿಶ್ರಾಂತಿ ಲೇಔಟ್ನ ಉದ್ಯಮಿ ಅಜಯ್ ರಾಮ ಗೋಪಾಲ್ ಮನೆಯಲ್ಲಿ ಈ ಕಳ್ಳತನಕ್ಕೆ ಯತ್ನ ನಡೆದಿದೆ. ಆರೋಪಿಗಳಾದ ಶೇಕ್ ಕಲೀಂ, ಮೊಹಮದ್ ನಿನಾಜ್, ಮೊಹಮದ್ ಇಮ್ರಾನ್, ಸೈಯದ್ ಫೈಜಲ್, ರಾಮ್ ಬಿಲಾಸ್, ಸುನೀಲ್ ಹಾಗೂ ರಜತ್ ಮಲಿಕ್ ಎಂಬುವವರು 1 ತಿಂಗಳ ಕಾಲ ಈ ಮನೆಯನ್ನ ದೋಚಲು ಪ್ಲ್ಯಾನ್ ಮಾಡಿದ್ದರು. ಅದೇ ರೀತಿ ಮೊನ್ನೆ ಕಳ್ಳತನ ಮಾಡಲು ಹೋಗಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಮಚ್ಚು, ಲಾಂಗು, ಖಾರದ ಪುಡಿಯೊಂದಿಗೆ ಬಂದಿದ್ದ ಖದೀಮರು
ಆರೋಪಿಗಳು ಲಾಂಗು ಮಚ್ಚು, ಖಾರದ ಪುಡಿ ಹಾಗೂ ಟೂಲ್ಸ್ ಗಳ ಸಮೇತ ಮನೆಗೆ ಮುಂಜಾನೆ 5 ಗಂಟೆ ಸುಮಾರಿಗೆ ಎಂಟ್ರಿ ಕೊಟ್ಟಿದ್ದರು. ಉದ್ಯಮಿಯ ಮಗ ರಾಹುಲ್ ಆಗ ತಾನೇ ಎದ್ದು ಜಾಗಿಂಗ್ ಎಂದು ರೆಡಿಯಾಗುತಿದ್ದರಂತೆ. ಈ ವೇಳೆ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನ ಗಮನಿಸಿದ್ದಾರೆ.
ಬಳಿಕ ಅನುಮಾನಗೊಂಡು ಮನೆಯ ಸಿಸಿಟಿವಿಯನ್ನೂ ಅದೇ ವೇಳೆ ಪರೀಕ್ಷಿಸಿದ್ದಾರೆ. ಆಗ ಕಳ್ಳರು ಮನೆಯೊಳಕ್ಕೆ ಎಂಟ್ರಿ ಕೊಟ್ಟಿರೋದು ಕಾಣಿಸಿದೆ. ಅಲ್ಲದೇ ಇದೇ ವೇಳೆ ಕಳ್ಳರು ಒಂದು ರೂಮ್ನಲ್ಲಿ ಇರೋದು ಗೊತ್ತಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಅವರು ರೂಮ್ ಡೋರ್ ಕ್ಲೋಸ್ ಮಾಡಿ ಲಾಕ್ ಮಾಡಿದ್ದಾರೆ. ಬಳಿಕ 122ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇವಲ 10 ನಿಮಿಷಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಅಸಲಿಗೆ ಕಳ್ಳರು ಮನೆಯೊಳಕ್ಕೆ ಬರುವಾಗಲೇ ಮನೆಯಲ್ಲಿದ್ದ ಶ್ವಾನ ಬೊಗಳಿದೆ. ಆದರೆ ನಿದ್ದೆಯಲ್ಲಿದ್ದ ಮನೆಯವರು ಈ ಬಗ್ಗೆ ಅಷ್ಟು ಗಮನಹರಿಸಿರಲಿಲ್ಲ. ಆದರೆ ಉದ್ಯಮಿ ಮಗನ ಸಮಯ ಪ್ರಜ್ಞೆಯಿಂದ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಸಂಪತ್ತು ದೋಚಲು ಬಂದರು ಪ್ಲಾನ್ ಈಡೇರೋ ಮೊದಲೇ ಜೈಲೂಟ ಅನುಭವಿಸುವಂತಾಗಿದೆ.
ಬಾಂಬೇ ಫ್ರೆಂಡ್ಸ್ ಗ್ಯಾಂಗ್ ಕಟ್ಟಿದ್ದ ಆರೋಪಿಗಳು
ಶೇಕ್ ಕಲೀಂ, ಮೊಹಮದ್ ನಿನಾಜ್, ಮೊಹಮದ್ ಇಮ್ರಾನ್, ಸೈಯದ್ ಫೈಜಲ್, ರಾಮ್ ಬಿಲಾಸ್, ಸುನೀಲ್ ಹಾಗೂ ರಜತ್ ಮಲಿಕ್ ಎಲ್ಲರೂ ಬಾಂಬೆಗೆ ಲಿಂಕ್ಗೆ ಹೊಂದಿದ್ದಾರೆ. ಆರೋಪಿ ಶೇಕ್ ಕಲೀಂ ಬಾಂಬೆ ಇಂದ ವಾಪಸ್ ಆಗಿ ಬಾಂಬೆ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ.
ಇತ್ತೀಚೆಗೆ ನಗರಕ್ಕೆ ವಾಪಸ್ ಆಗಿದ್ದ ಆರೋಪಿ ಹಣ ಆಸೆಗೆ ನಗರದ ಹೊರವಲಯದಲ್ಲಿದ್ದ ಮನೆಯನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಲು ನಿರ್ಧರಿಸಿ ತನ್ನದೇ ಗ್ಯಾಂಗ್ ಕಟ್ಟಿದ್ದ. ಆರೋಪಿ ಶೇಕ್ ಕಲೀಂ ಈ ಗ್ಯಾಂಗ್ನ ಲೀಡರ್ ಆಗಿದ್ದು, ಉಳಿದರ ಎಲ್ಲರೂ ಹೊರ ರಾಜ್ಯದವರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ