ಪಾಟ್ನಾ: ಪತ್ನಿ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದರಿಂದ ಕೋಪಗೊಂಡ ವ್ಯಕ್ತಿಯೋರ್ವ ತನ್ನ ಖಾಸಗಿ ಅಂಗವನ್ನು(Private Part) ಕತ್ತರಿಸಿಕೊಂಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಶುಕ್ರವಾರ ರಾತ್ರಿ ಬಿಹಾರದ ಮಾಧೇಪುರ ಪೊಲೀಸ್ ಠಾಣೆ (Madhepura police station) ವ್ಯಾಪ್ತಿಯ ರಜನಿ ನಯಾನಗರ (Rajni Nayanagar) ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಮಹೇಂದ್ರ ಬಾಸುಕಿ ಅವರ 25 ವರ್ಷದ ಪುತ್ರ ಕೃಷ್ಣ ಬಾಸುಕಿ ಎಂದು ಗುರುತಿಸಲಾಗಿದೆ. ಗೋಲ್ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲೋಧ್ ವಾರ್ಡ್ ಆರರ ನಿವಾಸಿ ಛೋಟೆ ಲಾಲ್ ಬಸುಕಿ ಅವರ ಪುತ್ರಿ ಅನಿತಾ ಎಂಬವರನ್ನು ಕೃಷ್ಣ ಬಾಸುಕಿ ವಿವಾಹವಾಗಿದ್ದನು.
ಮನೆಗೆ ಹಿಂದಿರುಗಿ ಪತ್ನಿ ಎಲ್ಲಿ ಎಂದು ಕೇಳಿದ್ದ ವ್ಯಕ್ತಿ
ಮಹೇಂದ್ರ ಬಾಸುಕಿ ಅವರಿಗೆ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ನಾಲ್ವರು ಮಕ್ಕಳಿದ್ದಾರೆ. ಅವರಲ್ಲಿ ಕೃಷ್ಣ ಬಾಸುಕಿ ಕೂಡ ಒಬ್ಬರು. ಕೃಷ್ಣ ಪಂಜಾಬ್ನ ಮಂಡಿಯಲ್ಲಿ ವಾಸಿಸುತ್ತಾ ಕೆಲಸ ಮಾಡಿಕೊಂಡಿದ್ದನು. ಆದರೆ ಎರಡು ತಿಂಗಳ ಹಿಂದೆ ರಜನಿ ನಯನಗರದಲ್ಲಿರುವ ನಿವಾಸಕ್ಕೆ ಹಿಂದಿರುಗಿದ ಕೃಷ್ಣ ಕುಟುಂಬಸ್ಥರನ್ನು ತನ್ನ ಪತ್ನಿ ಎಲ್ಲಿ ಎಂದು ಕೇಳಿದ್ದಾನೆ.
ಪತ್ನಿ ತವರು ಮನೆ ಹೋಗಿದ್ದರಿಂದ ಕೋಪಗೊಂಡ ಪತಿ
ಈ ವೇಳೆ ಪತ್ನಿ ಅನಿತಾ ತನ್ನ ತಂದೆ ತಾಯಿಯ ಮನೆಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ತವರು ಮನೆಗೆ ಹೋಗಿದ್ದ ಪತ್ನಿ ಹಿಂದಿರುಗಲು ತಡಮಾಡಿದ್ದರಿಂದ ಕೋಪಗೊಂಡ ಕೃಷ್ಣ ತನ್ನ ಖಾಸಗಿ ಅಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿಕೊಂಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನು ಆಸ್ಪತ್ರೆಗೆ ದಾಖಲಿಸಿದ ಸಂಬಂಧಿಕರು
ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಕಂಡ ಸಂಬಂಧಿಕರು ಕೂಡಲೇ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಕೃಷ್ಣ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವಿಚಾರ ತಿಳಿದುಬಂದಿದೆ. ಇದೀಗ ಕೃಷ್ಣನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಡಾ.ಸುಕೇಶ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ನನ್ನ ಸಾವಿಗೆ ಪತ್ನಿಯೇ ಕಾರಣ ಎಂದೇಳಿ ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿ
ಇತ್ತೀಚಿಗೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಪತ್ನಿ, ಚಿಕ್ಕಮ್ಮ, ಚಿಕ್ಕಪ್ಪ, ಸೋದರ ಮಾವ ಮತ್ತು ಶ್ರವಣ್ ಎಂಬಾತನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮನೆಯ ಗೋಡೆಗಳ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಿಂದ ಕಾಮರೆಡ್ಡಿ ಜಿಲ್ಲೆಯ ಜನರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಹಾಕಿಕೊಂಡಿದ್ದ ಪತಿ
ಆತ್ಮಹತ್ಯೆಗೊಳಗಾದ ವ್ಯಕ್ತಿಯನ್ನು ನಕ್ಕಮೂತಿ ಹನ್ಮಂಡ್ಲು (36) ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಕಾಮರೆಡ್ಡಿ ಜಿಲ್ಲೆಯ ಬಿಚ್ಕುಂದ ಮಂಡಲ ಕೇಂದ್ರದ ನಕ್ಕಮೂತಿ ಹನ್ಮಂಡ್ಲು (36) ಮತ್ತು ಜ್ಯೋತಿ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರು.
ಇದನ್ನೂ ಓದಿ: Suicide: ಹೆಂಡತಿ ದುಡ್ಡಿನಾಸೆಗೆ ಹೆಣವಾದ ಗಂಡ! ಬೆಂಗಳೂರಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ
ಪತ್ನಿ ಜ್ಯೋತಿ ಹಾಗೂ ನಕ್ಕಮೂತಿ ಹನ್ಮಂಡ್ಲು ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆ ಮೂರು ದಿನಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಮನನೊಂದ ಹನ್ಮಂಡ್ಲು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ