ಬೆಂಗಳೂರು: ಕೋರಮಂಗಲ (koramangala) ಕಿಡ್ನಾಪ್ ಪ್ರಕರಣ (Kidnap) ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಹಣಕ್ಕಾಗಿ ತೌಹಿದ್ನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳು (Kidnappers), ಹೆಣ್ಣಿಗಾಗಿ ಆತನನ್ನು ಒತ್ತೆ ಇರಿಸಿಕೊಂಡದ್ದರು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳು ಕೇಳಿದಷ್ಟು ಹಣ ಕೊಟ್ಟರು, ಯುವಕನನ್ನು ಬಿಡದೆ ನಗರದಲ್ಲಿ ಸುತ್ತಾಡಿಸಿದ್ದರು. ಆದರೆ ಈ ವೇಳೆ ತೌಹಿದ್ನನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾರಿನಲ್ಲಿ ಶಿಫ್ಟ್ ಮಾಡುವಾಗಿ ಪೊಲೀಸರು ಕೈಗೆ ಕಿಡ್ನಾಪ್ ಗ್ಯಾಂಗ್ (Kidnap Gang) ಸಿಕ್ಕಿ ಬಿದ್ದತ್ತು.
ಏನಿದು ಪ್ರಕರಣ?
ಬಂಡೆಪಾಳ್ಯ ಬಳಿ ತೌಹಿದ್ ಎಂಬ ಯುವಕನನ್ನು ಅಪಹರಣ ಮಾಡಿದ್ದ ಆರೋಪಿಗಳು 60 ಸಾವಿರ ಹಣ ನೀಡುವಂತೆ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದರು. ಪೊಲೀಸರಿಗೆ ವಿಷಯ ತಿಳಿಸಿದರೆ ನಿಮ್ಮ ಮಗನನ್ನು ಕೊಲ್ಲೋದಾಗಿ ಬೆದರಿಕೆ ಹಾಕಲಾಗಿತ್ತು. ಮೂರು ದಿನಗಳ ಗೌಪ್ಯ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದರು. ಅಲ್ಲದೇ ಆರೋಪಿ ಹಿಂದಿರುಗಿಸಬೇಕಿದ್ದ ಬೈಕ್ ಹಣ ನೀಡುವಂತೆ ಕಿಡ್ನಾಪರ್ಸ್ ತೌಹಿದ್ ಗೆ ಬೆದರಿಕೆ ಹಾಕಿದ್ದರು.
ಇದರಿಂದ ಆತಂಕಗೊಂಡಿದ್ದ ಪೋಷಕರು, 35 ಸಾವಿರ ರೂಪಾಯಿ ಹಣವನ್ನ ಆರೋಪಿಗಳಿಗೆ ನೀಡಿದ್ದರು. ಹಣ ಕೊಡುವ ವೇಳೆ ಮಹಿಳೆಯ ಪೋನ್ ಕಸಿದುಕೊಂಡು ಕಿಡ್ನಾಪರ್ಸ್ ಮತ್ತೆ ಎಸ್ಕೇಪ್ ಆಗಿದ್ದರು. ಇದರಿಂದ ಮತ್ತಷ್ಟು ಆತಂಕಗೊಂಡ ಪೋಷಕರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದರು.
ಸಿನಿಮೀಯ ರೀತಿಯಲ್ಲಿ ಆರೋಪಿಗಳ ಬಂಧನ
ಆದರೆ, ಕೋರಮಂಗಲ 100 ಅಡಿ ರಸ್ತೆಯಲ್ಲಿ ಇನ್ಸ್ಪೆಕ್ಟರ್ ಮಂಜುನಾಥ್ ಚೆಕ್ ಪೋಸ್ಟ್ ಹಾಕಿದ್ದ ವೇಳೆ ವೇಗವಾಗಿ ಬಂದ ಹೋಂಡಾ ಸಿಟಿ ಕಾರ್ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಅಲ್ಲಿಂದ ಎಸ್ಕೇಪ್ ಆಗಿತ್ತು. ಆ ವೇಳೆ ಕಾರ್ನಲ್ಲಿದ್ದ ಯುವಕ ತೌಹಿದ್ ಕಾಪಾಡಿ.. ಕಾಪಾಡಿ ಎಂದು ಕೂಗಿಕೊಂಡಿದ್ದ. ಸಿನಿಮೀಯ ರೀತಿಯಲ್ಲಿ ಆರೋಪಿಗಳ ಕಾರನ್ನು ಆಡಗೋಡಿ ಪೊಲೀಸರು 2 ಕಿ.ಮೀ ಚೇಸ್ ಮಾಡಿ ಕಿಡ್ನಾಪರ್ಗಳನ್ನು ಬಂಧಿಸಿ ಯುವಕನ ರಕ್ಷಣೆ ಮಾಡಿದ್ದರು.
ವಿಚಾರಣೆ ವೇಳೆ ಬೆಳಕಿಗೆ ಬಂತು ಸ್ಫೋಟಕ ಸಂಗತಿ
ಇನ್ನು, ಕಿಡ್ನಾಪ್ ಆಗಿದ್ದ ತೌಹಿದ್ನನ್ನು ಹಣ ನೀಡಿ ಬಿಡಿಸಿಕೊಳ್ಳಲು ಹೋದಾಗ ಮಹಿಳೆ ತಮ್ಮ ಮೊಬೈಲ್ಅನ್ನು ತೆಗೆದುಕೊಂಡು ಹೋಗಿದ್ದರು. ಆ ವೇಳೆ ಮಹಿಳೆ ಬಳಿ ಇದ್ದ ಮೊಬೈಲ್ಅನ್ನು ಆರೋಪಿಗಳು ಕಿತ್ತುಕೊಂಡು ಎಸ್ಕೇಪ್ ಆಗಿದ್ದರು. ಆದರೆ ಮಹಿಳೆ ಬಳಿ ಕಿತ್ತುಕೊಂಡಿದ್ದ ಮೊಬೈಲ್ ನೋಡಿದಾಗ ಅದರಲ್ಲಿ ನಗ್ನ ಫೋಟೋಗಳು ಇರೋದನ್ನು ಆರೋಪಿಗಳು ನೋಡಿದ್ದರು.
ಅಲ್ಲದೇ, ಮೊಬೈಲ್ ನಲ್ಲಿರುವ ಹುಡುಗಿಯನ್ನು ಕರೆಸುವಂತೆ ಆರೋಪಿಗಳು ತೌಹಿದ್ ಗೆ ಒತ್ತಾಯಿಸಿದ್ದರು ಎಂದು ತಿಳಿದು ಬಂದಿದೆ. ಆ ಯುವತಿಯನ್ನು ನಾವು ಹೇಳಿದ ಜಾಗಕ್ಕೆ ಕರೆಸಬೇಕು ಅಂತಾ ದಮ್ಕಿ ಹಾಕಿದ್ದ ಗ್ಯಾಂಗ್, ಆಕೆ ಬರುವವರೆಗೂ ನಿನ್ನ ಬಿಡಲ್ಲ ಅಂತಾ ಸಿಟಿಯಲ್ಲಿ ತಿರುಗಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Bengaluru: ಪೋಷಕರು ದೂರು ನೀಡುವ ಮೊದಲೇ ಪೊಲೀಸರಿಂದ ಅಪಹರಣಕ್ಕೊಳಗಾಗಿದ್ದ ಯುವಕನ ರಕ್ಷಣೆ
ರಾತ್ರಿ ತಿರುಗಾಡೋ ವೇಳೆ ಕೋರಮಂಗಲ 100 ಅಡಿ ರಸ್ತೆಯಲ್ಲಿ ನೈಟ್ ರೌಂಡ್ಸ್ ಪೊಲೀಸರ ಕಣ್ಣಿಗೆ ಕಿಡ್ನಾಪರ್ಸ್ ಗ್ಯಾಂಗ್ ಬಿದ್ದಿದೆ. ಈ ವೇಳೆ ಅನುಮಾನಗೊಂಡ ಪೊಲೀಸರು ಕಾರು ಚೇಸ್ ಮಾಡಿ ಓರ್ವನನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಕಿಡ್ನಾಪ್ ಪ್ರಕರಣದ ತನಿಖೆಯನ್ನ ಬಂಡೆಪಾಳ್ಯ ಪೊಲೀಸರು ಚುರುಕುಗೊಳಿಸಿದ್ದು, ಉಳಿದ ಆರೋಪಿಗಳಿಗೆ ಶೋಧ ನಡೆಸಿದ್ದಾರೆ. ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ