ಬೆಳಗಾವಿ: ಪ್ರೀತಿಸಿ ಮದುವೆಯಾಗುತ್ತೇನೆ (Love Marriage) ಎಂದು ಹೇಳಿ ವಂಚನೆ ಮಾಡಿದ ಎಂದು ಆತ್ಮಹತ್ಯೆ ಶರಣಾದ ಬೆಳಗಾವಿ (Belagavi) ಜಿಲ್ಲೆಯ ಯುವತಿ ಲವ್ ಜಿಹಾದ್‌ಗೆ (Love Jihad) ಬಲಿಯಾದಳಾ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಯುವತಿಗೆ ವಂಚನೆ ಮಾಡಿದ್ದ ಆರೋಪಿಯನ್ನು ಪೊಲೀಸರು (Police) ಬಂಧನ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಇನ್ನು, ಪ್ರೀತಿ ಮಾಡಿ ಮೋಸ ಹೋಗಿದ್ದಕ್ಕೆ ನೊಂದಿದ್ದ ಯುವತಿ ತೇಜಸ್ವಿನಿ ಗಂಗಪ್ಪ ಗುಜ್ಜರ್ (21) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.
ಏನಿದು ಪ್ರಕರಣ?
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ತೇಜಸ್ವಿನಿ ಗಂಗಪ್ಪ ಗುಜ್ಜರ್ ತನ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರೀತಿಸಿ ಮದುವೆಯಾಗುತ್ತೇನೆಂದು ನಂಬಿಸಿ ಯುವಕ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಮನನೊಂದಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿತ್ತು.
ಇದನ್ನೂ ಓದಿ: Crime News: ಬೆಂಗಳೂರು ಹೆಣಗಳಿಗೆ ಚಾರ್ಮಾಡಿಯೇ ಸ್ಮಶಾಣ; ಕೊಂದವರು ತಪ್ಪಿಸಿಕೊಳ್ಳಲು ಆಸರೆ ಆಯ್ತು ಪ್ರಪಾತ!
ಇನ್ನು, ಕಳೆದ ಎರಡು ವರ್ಷಗಳಿಂದ ಆರೋಪಿ ಆಶೀಫ್ ದೇಸಾಯಿ ಹಾಗೂ ತೇಜಸ್ವಿನಿ ಪ್ರೀತಿಸುತ್ತಿದ್ದರು. ಆರೋಪಿ ಯುವತಿಗೆ ಮದುವೆಯಾಗುವುದಾಗಿಯೂ ಮಾತು ಕೊಟ್ಟಿದ್ದನಂತೆ. ಆದರೆ ಕೆಲ ದಿನಗಳ ಹಿಂದೆ ಏಕಾಏಕಿ ನಿನ್ನನ್ನು ಮದುವೆ ಆಗೋದಿಲ್ಲ ಎಂದು ನಿರಾಕರಿಸಿದ್ದನಂತೆ. ಇದರಿಂದ ಮನನೊಂದ ಯುವತಿ ಕೀಟನಾಶಕ ಸೇವಿಸಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಳು.
ಹಾಫ್ ಮರ್ಡರ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆರೋಪಿ
ಮಗಳ ಸಾವು ಕಂಡು ಕಣ್ಣೀರಿಟ್ಟಿರುವ ಕುಟುಂಬಸ್ಥರು, ಆಶೀಫ್ ಮದುವೆ ಆಗುವುದಿಲ್ಲ ಅಂದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಆಶೀಫ್ ಕಾರಣ ಅಂತ ಆರೋಪ ಮಾಡಿದ್ದಾರೆ. ಅಲ್ಲದೇ ಮಗಳ ಸಾವಿಗೆ ಕಾರಣವಾದ ಆಶೀಫ್‌ಗೆ ತಕ್ಕ ಶಿಕ್ಷೆಯಾಗಬೇಕು ಅಂತ ಆಗ್ರಹಿಸಿದ್ದಾರೆ. ಅಂದಹಾಗೇ, ಸದ್ಯ ಪೊಲೀಸರು ಬಂಧಿಸಿರುವ ಆಶೀಫ್ ಈ ಹಿಂದೆಯೂ ಹಾಪ್ ಮರ್ಡರ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದನಂತೆ. ಸದ್ಯ ಆರೋಪಿ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಏನಿದು ಪ್ರಕರಣ?
ಮಂಡ್ಯದ ಶ್ರೀಧರ್ನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಮೊಹಮ್ಮದ್ ಸಲ್ಮಾನ್ ಎಂದು ನಾಮಕರಣ ಮಾಡಲಾಗಿತ್ತು. ಬನಶಂಕರಿಯ ಮಸೀದಿಯಲ್ಲಿ ಗೃಹಬಂಧನದಲ್ಲಿಟ್ಟು, ದನದ ಮಾಂಸ ತಿನ್ನಿಸಲಾಗಿತ್ತು.
ಶ್ರೀಧರ್ ಹಣಕಾಸಿನ ತೊಂದರೆ ಬಗ್ಗೆ ಆರೋಪಿಗಳಿಗೆ ಹೇಳಿಕೊಂಡಿದ್ದ. ಆ ವೇಳೆ ಆತ ಪರಿಶಿಷ್ಠ ಜಾತಿ/ಪಂಗಡಕ್ಕೆ ಸೇರಿದ ವ್ಯಕ್ತಿ ಎಂದು ತಿಳಿದುಕೊಂಡಿದ್ದ ಆರೋಪಿಗಳು ಆತನನ್ನು ಬನಶಂಕರಿಯ ಮಸೀದಿಗೆ ಕರೆದುಕೊಂಡು ಮತ್ತೊಬ್ಬ ಆರೋಪಿಗೆ ಪರಿಚಯ ಮಾಡಿಸಿದ್ದರು. ಆ ವೇಳೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಆತನನ್ನು ಶ್ರೀಧರ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಧರ್ಮ ಭೋದನೆ ಮಾಡಿದ್ದರಂತೆ.
ಆ ಬಳಿಕ ಆತನನ್ನು ಒಂದು ವಾರ ಅಕ್ರಮವಾಗಿ ಬಂಧನದಲಿಟ್ಟು, ಬಲವಂತವಾಗಿ ಕತ್ನಾ ಮಾಡಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಮೊದಲು ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ದೂರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಬನಶಂಕರಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ