ಬೆಂಗಳೂರು: ಆಗ ತಾನೇ ಪ್ರಪಂಚಕ್ಕೆ (world) ಬಂದ ಪುಟ್ಟ ಕಂದಮ್ಮ (Child). ಅಮ್ಮನ (Mother) ಮಡಿಲಲ್ಲಿ ಬೆಚ್ಚಗೆ ಇರಬೇಕಿದ್ದ ಮಗು ಮೇಲೆ ಬಿತ್ತು ಕಳ್ಳಿಯ ಕಣ್ಣು. ಬರೋಬ್ಬರಿ 600 ಸಿಸಿಟಿವಿಯಿಂದ (CCTV) ಮತ್ತೆ ಅಮ್ಮನ ಮಡಿಲು ಸೇರಿದೆ ಆ ಹಸುಗೂಸು. ಕಂದಮ್ಮ ಸಿಕ್ಕಿದ್ದೆ ರೋಚಕ. ಪೊಲೀಸರು (Police) ಮಗುನ ಕಾಪಾಡಿ ಅಮ್ಮನ ಮಡಿಲು ಸೇರಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲನೆ ನಡೆಸಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ (Vanivilas Hospital) 7 ದಿನಗಳ ಹಸುಗೂಸನ್ನ ಕದ್ದು ಎಸ್ಕೇಪ್ ರಾಮನಗರ (Ramanagara) ಮೂಲದ ದಿವ್ಯ ರಶ್ಮಿ ಎಂಬ ಆರೋಪಿಯನ್ನು (Accused) ಬಂಧನ ಮಾಡಿದ್ದಾರೆ.
ಏನಿದು ಪ್ರಕರಣ?
ಇದೇ ಏಪ್ರಿಲ್ 15ರಂದು ವಾಣಿ ವಿಲಾಸ ಆಸ್ಪತ್ರೆಯಲ್ಲಿ ತುಮಕೂರಿನಿಂದ ಪ್ರಸನ್ನ ಸುಮಾ ದಂಪತಿಗೆ ಗಂಡು ಮಗು ಜನಿಸಿತ್ತು. ಹೆರಿಗೆ ನಂತರ ಸುಮಾ, ಮಗುವನ್ನು ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಸುಮಾ ಶೌಚಾಲಯಕ್ಕೆ ಹೋಗಿದ್ದ ವೇಳೆ ಈ ದಿವ್ಯ ರಶ್ಮಿ ವಾರದ ಕಂದಮ್ಮನನ್ನ ಎತ್ತಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.
ಇದನ್ನೂ ಓದಿ: DK Shivakumar: ಸಿಎಂ ಆಗಲು ಪವರ್ ಫುಲ್ ದೇವಿಗೆ ಕೆಪಿಸಿಸಿ ಅಧ್ಯಕ್ಷರ ಹರಕೆ; ಹುಂಡಿಗೆ ಕಂತೆ ಕಂತೆ ಕಾಣಿಕೆ ಸುರಿದ ಡಿಕೆಶಿ
ಶೌಚಾಲಯದಿಂದ ಬಂದ ಸುಮಾ ಅಕ್ಕಪಕ್ಕ ಇದ್ದವರನ್ನೆಲ್ಲಾ ವಿಚಾರಿಸಿದ್ದಾಳೆ. ನಂತರ ಸಿಸಿಟಿವಿ ಕ್ಯಾಮೆರಾ ನೋಡಿದಾಗ ಮಗು ಕಳವು ಆಗಿರುವುದು ಗೊತ್ತಾಗಿದೆ. ಕೂಡಲೇ ವಿ.ವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ತನಿಖೆ ಶುರು ಮಾಡಿದ ವಿವಿ ಪುರಂ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಸೇರಿದಂತೆ ಸುಮಾರು 600 ಸಿಸಿಟಿವಿ ಫುಟೇಜ್ ಚೆಕ್ ಮಾಡಿದ್ದಾರೆ. ಆಗ ಮಗು ಕಳ್ಳಿಯ ಸುಳಿವು ಸಿಕ್ಕಿದೆ. ಕೂಡಲೇ ಆಕೆ ಇದ್ದ ಜಾಗಕ್ಕೆ ಹೋದ ಪೊಲೀಸರಿಗೆ ಮಗು ಜೊತೆ ಇದ್ದ ದಿವ್ಯರಶ್ಮಿ ಸಿಕ್ಕಿಬಿದ್ದಿದ್ದಾಳೆ.
ರಾಮನಗರದ ರಶ್ಮಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು ಅನಾರೋಗ್ಯದ ಕಾರಣದಿಂದ ಪತಿ ಸಾವನ್ನಪ್ಪಿದ್ದರಂತೆ. ಆದರೆ ಮಕ್ಕಳು ಅಂದರೆ ತುಂಬಾ ಇಷ್ಟು ಇದ್ದು ಮಕ್ಕಳಿಲ್ಲ ಅನ್ನುವ ಕೊರಗು ದಿನ ಕಾಡುತ್ತಿತ್ತಂತೆ. ಇದರಿಂದ ಅನೇಕ ಕಡೆಗಳಲ್ಲಿ ಮಗು ದತ್ತು ಕೊಡುತ್ತಾರೆ ಅಂತ ಸುತ್ತಾಡಿದ್ದಾಳೆ.
ಸದ್ಯ ರಶ್ಮಿಯನ್ನು ವಿವಿಪುರಂ ಬಂಧನ ಮಾಡಿದ್ದು, ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಇತ್ತ ಪುಟಾಣಿ ಕಂದಮ್ಮ ಅಮ್ಮನ ಮಡಿಲು ಸೇರಿದ್ದು, ಮಗು ಸಿಕ್ಕಿದ್ದಕ್ಕೆ ಪೋಷಕರು ಸಂತೋಷದಲ್ಲಿ ತೇಲಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ