• ಹೋಂ
 • »
 • ನ್ಯೂಸ್
 • »
 • Crime
 • »
 • Crime News: ಬೇಲ್​ ಮೇಲೆ ಹೊರ ಬಂದಿದ್ದ ರೌಡಿ ಶೀಟರ್‌ಗೆ ಮುಹೂರ್ತ, ಬರ್ಬರವಾಗಿ ಕೊಂದು ಮೂಟೆ ಕಟ್ಟಿ ಎಸೆದು ಹೋದ ದುಷ್ಕರ್ಮಿಗಳು!

Crime News: ಬೇಲ್​ ಮೇಲೆ ಹೊರ ಬಂದಿದ್ದ ರೌಡಿ ಶೀಟರ್‌ಗೆ ಮುಹೂರ್ತ, ಬರ್ಬರವಾಗಿ ಕೊಂದು ಮೂಟೆ ಕಟ್ಟಿ ಎಸೆದು ಹೋದ ದುಷ್ಕರ್ಮಿಗಳು!

ಕೊಲೆಯಾದ ರೌಡಿಶೀಟರ್ ಸಂತೋಷ್

ಕೊಲೆಯಾದ ರೌಡಿಶೀಟರ್ ಸಂತೋಷ್

ಕೊಲೆಗೆ ಪ್ರತಿಕಾರವಾಗಿ ಹತ್ಯೆಗೈದಿರೋ ಶಂಕೆ ವ್ಯಕ್ತವಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 • News18 Kannada
 • 2-MIN READ
 • Last Updated :
 • Ramanagara, India
 • Share this:

ರಾಮನಗರ: ಬೆಂಗಳೂರಿನ ರೌಡಿ ಶೀಟರ್​​​ನನ್ನು (Bengaluru Rowdy Sheeter) ಕೊಲೆಗೈದು ಮೃತದೇಹವನ್ನು ಬೀಸಾಡಿ ಹೋಗಿರುವ ಘಟನೆ ರಾಮನಗರ (Ramanagara) ‌ಜಿಲ್ಲೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಕೆರೆ ಬಳಿ ನಡೆದಿದೆ. ಬೆಂಗಳೂರನ ಯಲಹಂಕ ನಿವಾಸಿ ಸಂತೋಷ್ (35) ಮೃತ ರೌಡಿಶೀಟರ್ ಆಗಿದ್ದು, ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ (Mahalakshmi Layout Police Station) ಮೃತ ಸಂತೋಷ್ ಮೇಲೆ ರೌಡಿಶೀಟರ್ ದಾಖಲಾಗಿತ್ತು. ಬೇರೆ ಸ್ಥಳದಲ್ಲಿ ಕೊಲೆಗೈದು ಮೃತದೇಹ ತಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ (Jail) ಸೇರಿದ್ದ ಸಂತೋಷ್ ಇತ್ತೀಚೆಗಷ್ಟೇ ಜಾಮೀನು ಪಡೆದು ಬಿಡುಗಡೆಯಾಗಿದ್ದ, ಸದ್ಯ ಕೊಲೆಗೆ ಪ್ರತಿಕಾರವಾಗಿ ಹತ್ಯೆಗೈದಿರೋ ಶಂಕೆ ವ್ಯಕ್ತವಾಗಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ


ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಇಗ್ಗಲೂರು ರೈಲ್ವೆ ಹಳಿ ಬಳಿ ನಡೆದಿದೆ.


ಇದನ್ನೂ ಓದಿ: Bengaluru Crime News: ಅಪ್ಪ ಇನ್ನೂ 20 ವರ್ಷ ಬದುಕುತ್ತಿದ್ರು, ಹಾಗಾಗಿ ಕೊಂದೆ; ಪೊಲೀಸರ ಮುಂದೆ ಮಗನ ಶಾಕಿಂಗ್ ಹೇಳಿಕೆ


ನಿನ್ನೆ ಸಂಜೆ ಘಟನೆ ನಡೆದಿದ್ದು, ತಾಲೂಕಿನ ಬನಹಳ್ಳಿ ನಿವಾಸಿ ಚಿನ್ನಯ್ಯ (45) ಮೃತ ವ್ಯಕ್ತಿಯಾಗಿದ್ದಾರೆ. ರೈಲ್ವೆ ಹಳಿಯ ಪಕ್ಕದಲ್ಲಿಯೇ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಗಮನಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಬೈಯ್ಯಪ್ಪನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬಟ್ಟೆ ತೊಳೆಯಲು ಹೋಗಿದ್ದ ವ್ಯಕ್ತಿ ನೀರು ಪಾಲು


ಬಟ್ಟೆ ತೊಳೆಯಲು ಹೋಗಿ ಯುವಕ ನೀರುಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜ್ (33) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ. ಭದ್ರಾ ಚಾನಲ್​​ನಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಗರಾಜ್, ನೀರಿನ ಸೆಳೆತಕ್ಕೆ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ತೀವ್ರ ಶೋಧ ನಡೆಸಿದ್ದಾರೆ.

First published: