• ಹೋಂ
 • »
 • ನ್ಯೂಸ್
 • »
 • Crime
 • »
 • Crime News: ಮಹಿಳೆ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಕೆ, ಸಂಧಾನಕ್ಕೆ ಕರೆಸಿ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು!

Crime News: ಮಹಿಳೆ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಕೆ, ಸಂಧಾನಕ್ಕೆ ಕರೆಸಿ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಮಾಪತಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಮಾಪತಿ ಸಾವನ್ನಪ್ಪಿದ್ದಾನೆ.

 • Share this:

ಬೆಂಗಳೂರು: ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಆರ್ ಎಂಸಿ ಯಾರ್ಡ್ (RMC Yard)  ಮಾರುಕಟ್ಟೆ ಬಳಿ ಇಂದು ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಉಮಾಪತಿ (47) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಮಹಿಳೆಯೊಬ್ಬರ (Woman) ಖಾಸಗಿ ಪೋಟೋ, ವಿಡಿಯೋ ಇದೆ (Private Photo Video) ಎಂದು ಬೆದರಿಸುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರಿಗೂ ಮೃತ ಉಮಾಪತಿ ಬೆದರಿಕೆ ಹಾಕುತ್ತಿದ್ದನಂತೆ. ಈ ಬಗ್ಗೆ ಮಾತನಾಡಲು ಮಾರ್ಕೆಟ್ (Market)​ ಬಳಿ ಬರುವಂತೆ ಮಹಿಳೆಯ ಕಡೆಯವರು ಹೇಳಿದ್ದರಂತೆ. ಮಾತುಕತೆ ವೇಳೆ ಮೃತ ಉಮಾಪತಿ ಹಾಗೂ ಮಹಿಳೆಯ ಕಡೆಯವರೊಂದಿಗೆ ಮಾತಿಗೆ ಮಾತು ಬೆಳೆದು ಆರಂಭವಾಗಿದ್ದು, ಈ ನಡುವೆ ಇಬ್ಬರು ವ್ಯಕ್ತಿಗಳು ಉಮಾಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಮಾಪತಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಮಾಪತಿ ಸಾವನ್ನಪ್ಪಿದ್ದಾನೆ.


ಇದನ್ನೂ ಓದಿ: DK Shivakumar: ಸಿಎಂ ಪಟ್ಟಕ್ಕಾಗಿ ಕೊಲ್ಲೂರಲ್ಲಿ ಡಿಕೆಶಿ ನವಚಂಡಿಕಾಯಾಗ; ‘ಮುಖ್ಯಮಂತ್ರಿ ಸ್ಥಾನ ಪ್ರಾಪ್ತಿ ಪೂರ್ವಕ’ ಅಂತ ಆಶೀರ್ವದಿಸಿದ ಅರ್ಚಕರು


ಇನ್ನು, ಮೃತ ಉಮಾಪತಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯಾಗಿದ್ದು, ಕಳೆದ ಕೆಲ ವರ್ಷಗಳಿಂದ ಆರ್​ಎಂಸಿ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದನಂತೆ. ಪ್ರಕರಣದ ಸಂಬಂಧ ಪೊಲೀಸರು ನರಸಿಂಹಯ್ಯ ಮತ್ತು ಸುನೀಲ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಹಳ್ಳಕ್ಕೆ ಉರುಳಿದ ಬಸ್​​

top videos


  ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​​ ಹಳ್ಳಕ್ಕೆ ಉರುಳಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಬಳಿ ನಡೆದಿದೆ. ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆಂದು ಬಂದಿದ್ದ ಪ್ರವಾಸಿಗರ ಬಸ್ ಪಲ್ಟಿಯಾಗಿದ್ದು, ಹಳಕ್ಕೆ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

  First published: