• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ! ಚಲಿಸುವ ಕಾರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರು ಅಂದರ್

Crime News: ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ! ಚಲಿಸುವ ಕಾರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರು ಅಂದರ್

ಬೆಂಗಳೂರಲ್ಲಿ ನಿರ್ಭಯಾ ಮಾದರಿ ಪ್ರಕರಣ

ಬೆಂಗಳೂರಲ್ಲಿ ನಿರ್ಭಯಾ ಮಾದರಿ ಪ್ರಕರಣ

ಮಾರ್ಚ್ 25ರ ರಾತ್ರಿ 9:30 ಗಂಟೆಗೆ ಯುವತಿಯನ್ನು ಕಿಡ್ನಾಪ್ ಮಾಡಿಕೊಂಡು ಹೋದ ಆರೋಪಿಗಳು ಮಾರ್ಚ್​​ 26ರ ಬೆಳಗಿನ ಜಾವ 3:30ಕ್ಕೆ ಆಕೆಯ ಮನೆಯ ರಸ್ತೆಯಲ್ಲಿ ದೂಡಿ ಪರಾರಿಯಾಗಿದ್ದರು.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಕಗ್ಗಲೀಪುರದ (Kaggalipura) ಬಾಲಕಿ ಮೇಲಿನ ದೌರ್ಜನ್ಯ ಮಾಸುವ ಮುನ್ನವೇ ಮತ್ತೊಂದು ಪೈಶಾಶಿಕ ಕೃತ್ಯವೊಂದು ನಡೆದಿದೆ. ಪಾರ್ಕ್ ನಲ್ಲಿ (Park) ಕುಳಿತಿದ್ದ ಯುವತಿಯನ್ನು ಕಿಡ್ನಾಪ್ (Kidnapped) ಮಾಡಿದ ಪರಿಚಿತರು, ಕಾರಿ​ನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ‌. ಮಾರ್ಚ್​​ 25ರಂದು ಘಟನೆ ನಡೆದಿದ್ದು, ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಹೌದು, ಮಾರ್ಚ್ 25ರ ಶನಿವಾರ ರಾತ್ರಿ 9:30 ರ ಸಮಯದಲ್ಲಿ ಬೆಂಗಳೂರಿನ ಹೃದಯ ಭಾಗದ ಕೋರಮಂಗಲದ (Koramangala) ನ್ಯಾಷನಲ್ ಗೇಮ್ಸ್ ವಿಲೇಜ್ (National Games Village) ಬಳಿಯ ಪಾರ್ಕ್​​ನಲ್ಲಿ ಕುಳಿತಿದ್ದ‌‌ ಯುವತಿ ಇದೀಗ ನರಕಯಾತನೆ ಅನುಭವಿಸಿದ್ದಾಳೆ. ಪರಿಚಿತ ನಾಲ್ವರು ಕಾಮುಕರು ಆಕೆಯ ಮೇಲೆ ಮೃಗದಂತೆ ಎರಗಿ ರಾತ್ರಿ‌ಯಿಡಿ ಅತ್ಯಾಚಾರ ಎಸಗಿ ನಡುರಸ್ತೆಯಲ್ಲೇ ದೂಡಿ ಹೋಗಿದ್ದಾರೆ.


ಪಾರ್ಕ್​​ನಿಂದ ಬಾಲಕಿ ಕಿಡ್ನಾಪ್​


ಪೊಲೀಸರು ನೀಡಿರುವ ಮಾಹಿತಿಯಂತೆ ಕೆಎ 01 ಎಂಬಿ 6169 ನಂಬರಿನ ಮಾರುತಿ ಸುಜುಕಿ 800 ಕಾರು ಘಟನೆಯ ಭೀಕರತೆ ಹೇಳುತ್ತಿದೆ. ಹರಿದಿರುವ ಕಾರಿನ ಸೀಟ್ ಗಳು ಅತ್ಯಾಚಾರದ ಭಯಾನಕತೆಯನ್ನು ಬಿಚ್ಚಿಡುತ್ತಿದೆ. ಮಾರ್ಚ್ 25ರ ರಾತ್ರಿ ಯುವತಿಯೊಬ್ಬಳು ನ್ಯಾಷನಲ್ ಗೇಮ್ಸ್ ವಿಲೇಜ್​​ನ ಪಾರ್ಕ್​​​ನಲ್ಲಿ ಸ್ನೇಹಿತನ ಜೊತೆಗೆ ಕುಳಿತಿದ್ದಳು.


ಸಿ.ಕೆ.ಬಾಬ, ಡಿಸಿಪಿ, ಆಗ್ನೇಯ ವಿಭಾಗ


ಇದನ್ನೂ ಓದಿ: Minister Munirathna: ಅಟ್ಟಾಡಿಸಿ ಹೊಡೆಯಿರಿ ಎಂದ ಮುನಿರತ್ನ ಮೇಲೆ ಕುಸುಮಾ ದೂರು; ನೇಣಿಗೆ ಏರಲು ಸಿದ್ಧ ಅಂತ ಸಚಿವರ ಸವಾಲು!


ಸ್ವಲ್ಪ ಸಮಯದಲ್ಲೇ ಆ ಯುವಕ ಹೊರಟು ಹೋಗಿದ್ದ. ಆಗ ಆಕೆ ಒಬ್ಬಳೇ ಪಾರ್ಕ್​ನಲ್ಲೇ ಕುಳಿತಿದ್ದಳು. ಆಗ ಅಲ್ಲಿಗೆ ಆಗಮಿಸಿದ್ದ ಸತೀಶ್ ಎಂಬಾತ ಯುವತಿ ಜೊತೆ ಮಾತನಾಡುತ್ತಾ ಸ್ನೇಹಿತರಾದ, ವಿಜಯ್, ಶ್ರೀಧರ್, ಕಿರಣ್ ಕರೆಸಿಕೊಂಡು ಏಕಾಏಕಿ ಯುವತಿಯ ಬಾಯಿಮುಚ್ಚಿ ಕಾರಲ್ಲಿ ಹಾಕಿಕೊಂಡಿದ್ದರು.


ಚಲಿಸುತ್ತಿದ್ದ ಕಾರಿನಲ್ಲಿ ರಾತ್ರಿ ಇಡೀ ಅತ್ಯಾಚಾರ


ಹೀಗೆ ಆ ಕಾರಲ್ಲಿ ನಾಲ್ವರು ಯುವತಿಯನ್ನು ಬಿಗಿಯಾಗಿ ಹಿಡಿದು ಕಿರುಚಾಡದಂತೆ ಬೆದರಿಕೆ ಹಾಕಿದ್ದಾರೆ. ಬಳಿಕ ಕಾರಿನಲ್ಲಿ ದೊಮ್ಮಲೂರು, ಇಂದಿರಾನಗರ, ಹೊಸೂರು ರಸ್ತೆ, ಅತ್ತಿಬೆಲೆ, ಆನೇಕಲ್ ಸೇರಿ ನೈಸ್ ರಸ್ತೆಯಲ್ಲೆಲ್ಲ ಸುತ್ತಾಡಿಸಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.




ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು


ರಾತ್ರಿ 9:30 ಗಂಟೆಗೆ ಕಿಡ್ನಾಪ್ ಮಾಡಿಕೊಂಡು ಹೋದ ಆರೋಪಿಗಳು ಮಾರ್ಚ್​​ 26ರ ಬೆಳಗಿನ ಜಾವ 3:30ಕ್ಕೆ ಯುವತಿ ಮನೆಯ ರಸ್ತೆಯಲ್ಲಿ ದೂಡಿ ಪರಾರಿಯಾಗಿದ್ದಾರೆ. ನಂತರ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಫೀಲ್ಡಿಗಿಳಿದ ಕೋರಮಂಗಲ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.


ಬೆಂಗಳೂರಲ್ಲಿ ನಿರ್ಭಯಾ ಮಾದರಿ ಪ್ರಕರಣ


ಇದನ್ನೂ ಓದಿ: BY Vijayendra: 'ನೀವು ಬನ್ನಿ, ಇಲ್ಲವಾದರೆ ಊಟಕ್ಕೆ ವಿಷ ಹಾಕಿ ಕೊಡಿ'! ವಿಜಯೇಂದ್ರಗೆ ವರುಣಾ ಬಿಜೆಪಿ ಕಾರ್ಯಕರ್ತರ ಒತ್ತಡ


ನ್ಯಾಷನಲ್ ಗೇಮ್ಸ್ ವಿಲೇಜ್ ಪಾರ್ಕ್​ನಲ್ಲಿ ಸರ್ಕಾರಿ ನೌಕರರೇ ಹೆಚ್ಚಾಗಿದ್ದಾರೆ. ಜನ ಓಡಾಡುವ ಪ್ರದೇಶದಲ್ಲೆ ರಾಜಾರೋಷವಾಗಿ ಕಿಡ್ನಾಪ್ ಮಾಡಿ ರಾತ್ರಿಯಿಡಿ ಸುತ್ತಾಡಿಸುತ್ತಾ ಅತ್ಯಾಚಾರವೆಸಗಿರುವುದು ಪೊಲೀಸರ ಬೀಟ್ ಕ್ರಮವನ್ನ ಪ್ರಶ್ನಿಸುವಂತಿದೆ.

First published: