ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹವಾಲ ದಂಧೆ (Hawala Money) ನಡೆಯುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಲಿಂಕ್ ಇದ್ದವರು ಮಾತ್ರ ಕೋಟಿ ಕೋಟಿ ಕಮಾಯಿ ಮಾಡುತ್ತಾರೆ. ಇದೀಗ ಒಂದೂವರೆ ಕೋಟಿ ಡೀಲ್ ಬೆಳಕಿಗೆ ಬಂದಿದೆ. ಹೌದು, ಬೆಂಗಳೂರು ಎನ್ನುವ ಮಾಯಾನಗರಿಯಲ್ಲಿ ಹವಾಲ ದಂಧೆ ಅನ್ನೋದು ಕಾಮನ್. ಕೋಟಿ ಕೋಟಿ ವಸ್ತುಗಳನ್ನು ವಿತ್ ಔಟ್ ಬಿಲ್ನಲ್ಲಿ ತರುವ ಬಂಡವಾಳಗಾರರು ಹವಾಲ ಮೂಲಕ ಹಣ ಸಂದಾಯ ಮಾಡುತ್ತಾರೆ. ಹವಾಲ ದಂಧೆಯಲ್ಲಿ ಇಬ್ಬರಿಗೂ ಲಾಭ. ಆದರೆ ಇದೇ ಹವಾಲ ದಂಧೆಯಲ್ಲಿ ಪಳಗಿದ್ದ ಅಣ್ಣ ಮತ್ತು ತಮ್ಮ ವಿಲ್ಸನ್ ಗಾರ್ಡನ್ ಪೊಲೀಸರ (Wilson Garden Traffic Police Station) ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಪೊಲೀಸರ ವೇಷದಲ್ಲಿ ಬಂದು ಹವಾಲ ಹಣ ಲೂಟಿ!
ಹವಾಲ ದಂಧೆ ಮಾಡುವ ಜನ ಸಾಕಷ್ಟು ಬುದ್ಧಿವಂತಿಕೆಯಿಂದ ತಮ್ಮ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಆದರೆ ಆಂಧ್ರ ಪ್ರದೇಶದ ಕಡಪ ಮೂಲದ ಅಣ್ತಮ್ಮಂದಿರು ಹವಾಲ ದಂಧೆಕೋರರಿಗೆ ಚಳ್ಳೆಹಣ್ಣು ತಿನ್ನಿಸಿ, 92 ಲಕ್ಷ ರೂಪಾಯಿ ಹಣವನ್ನು ದೋಚಿದ್ದಾರೆ. ಪೊಲೀಸ್ ಹಾಗೂ ಡ್ರೈವರ್ ವೇಷದಲ್ಲಿ ಬಂದಿದ್ದ ಲಾಲ್ ಸಾಬ್ ಮತ್ತು ಹಬೀಬ್ ಎಂಬುವರು ಇದೀಗ ಬೆಂಗಳೂರು ಪೊಲೀಸರ ಬಲೆಯಲ್ಲಿದ್ದಾರೆ.
ಇದನ್ನೂ ಓದಿ: Bengaluru: ಶಿವರಾಮ ಕಾರಂತ ಬಡಾವಣೆ ಯೋಜನೆ; BDA ನಮ್ಮ ಸಮಾಧಿ ಮೇಲೆ ಮನೆ ಕಟ್ಟುತ್ತಿದೆ ಎಂದು ರೈತರ ಆಕ್ರೋಶ
ಈ ಕುರಿತಂತೆ ಮಾಹಿತಿ ನೀಡಿರುವ ಸೆಂಟ್ರಲ್ ಡಿಸಿಪಿ ಶ್ರೀನಿವಾಸಗೌಡ, ಆರೋಪಿಗಳು ಆಂಧ್ರ ಪೊಲೀಸರ ತರ ಯೂನಿಫಾರ್ಮ್ ಧರಿಸಿ ಬಂದಿದ್ದರು. ಕಾರು ಸಹ ಆಂಧ್ರ ಪೊಲೀಸರ ನೋಂದಣಿ ಹೊಂದಿದ್ದ ಕಾರನ್ನು ತಂದಿದ್ದರು. ಸಂಪೂರ್ಣವಾಗಿ ಆಂಧ್ರ ಪೊಲೀಸತರ ಕಾಣುವಂತೆ ಬಂದಿದ್ದರು. ಜಂಕ್ಷನ್ನಲ್ಲಿ ಏಕಾಏಕಿ ಇಳಿದು ನೀವು ಹವಾಲಾ ಹಣ ಸಾಗಿಸುತ್ತಿದ್ದೀರಿ ಅಂತ ಹೆದರಿಸಿ ಹಣ ಕಸಿದುಕೊಂಡಿದ್ದಾರೆ. ಬಳಿಕ ಹಣ ಹೊಂದಿದ್ದ ವ್ಯಕ್ತಿಗಳನ್ನು ಕಾರಿನಲ್ಲಿ ಹತ್ತಿಸುವ ಕೆಲಸ ಮಾಡಿದ್ದರು. ಆದರೆ ಬಳಿಕ ಅವರನ್ನು ಬಿಟ್ಟು ಹಣದೊಂದಿಗೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಯಾರದ್ದೋ ಹಣದಲ್ಲಿ ಜೂಜಾಡಿ ಕೋಟಿ ಗೆದ್ದ ಜೋಡಿ!
ಶಾಂತಿನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಹವಾಲ ದಂಧೆ ನಡೆಯುತಿತ್ತು. ಇದನ್ನು ಈ ಸಹೋದರರು ಚೆನ್ನಾಗಿ ಬಲ್ಲವರಾಗಿದ್ದರು. ಜೊತೆಗಾರ ಜೊತೆಗೂ ಮಾಹಿತಿ ಹಂಚಿಕೊಂಡಿದ್ದರು. ಹರಿದಿರುವ ನೋಟು ನೋಡಿ ಲಕ್ಷ ಲಕ್ಷ ಹಣ ಬದಲಾವಣೆ ಮಾಡುವ ಬಗ್ಗೆಯೂ ತಿಳಿದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಹಾಗೂ ಚಂದು ಎಂಬುವರು 92 ಲಕ್ಷ ರೂಪಾಯಿ ಹವಾಲ ಎಕ್ಚೆಂಜ್ ಮಾಡಿಕೊಂಡಿದ್ದ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸರ ವೇಷದಲ್ಲಿ ಬಂದು ಹಣ ಎಗರಿಸಿದ್ದಾರೆ.
ಆಂಧ್ರದ ಶಾಸಕನಿಗೂ ಹವಾಲ ದಂಧೆ ನಂಟು!
92 ಲಕ್ಷ ರೂಪಾಯಿ ನಗದು ದೋಚಿದ ಅಣ್ತಮ್ಮ, ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನಲ್ಲಿ ಜೂಜಾಡಿ 1 ಕೋಟಿ ರೂಪಾಯಿ ಲಾಭ ಮಾಡಿದ್ದರಂತೆ. 1 ಕೋಟಿ 92 ಲಕ್ಷ ರೂಪಾಯಿ ಹಣದ ಜೊತೆಗೆ ಆಂಧ್ರದ ಎಂಎಲ್ಎ ಸಾಯಿರೆಡ್ಡಿ ಮನೆಗೆ ಬಂದಿದ್ದರಂತೆ.
ಅಲ್ಲಿಯೂ ಜೂಜಾಡಿ 18 ಲಕ್ಷ ಕಳೆದುಕೊಂಡಿದ್ದ ಆರೋಪಿಗಳು, ಈ ಬಗ್ಗೆ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು 18 ಲಕ್ಷ ರೂಪಾಯಿ ಹಣವನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದ ಒಂದೂವರೆ ಕೋಟಿ ಏನಾಯ್ತು ಅನ್ನೋದೇ ಪ್ರಶ್ನೆಯಾಗಿದೆ.
ಇದನ್ನೂ ಓದಿ: Udupi: ಗೋಣಿಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ನಾಯಿಯನ್ನ ಕೊಲೆಗೈದ ರಾಕ್ಷಸರು; ಉಡುಪಿಯಲ್ಲಿ ಮನಕಲಕುವ ಘಟನೆ
ವಿಲ್ಸನ್ ಗಾರ್ಡನ್ ಪೊಲೀಸರು ಇಬ್ಬರು ಸಹೋದರರು ಸೇರಿ ಮತ್ತೋರ್ವನನ್ನು ಅರೆಸ್ಟ್ ಮಾಡಿದ್ದಾರೆ. ಶಾಸಕನಿಗೂ ಇವರಿಗೂ ಇರುವ ಲಿಂಕ್ ಬಗ್ಗೆ ತನಿಖೆ ಮಾಡಲು ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ