ಬೆಂಗಳೂರು: ಇವರಿಬ್ಬರೂ ಆತ್ಮೀಯ ಗೆಳೆಯರು (Friends) ಒಬ್ಬರಿಗೆ ಕಷ್ಟ ಆದರೆ ಮತ್ತೊಬ್ಬರು ಹೆಗಲು ಕೊಡುತಿದ್ದರು. ಹೀಗೆ ಜೊತೆಯಾಗಿದ್ದ ಸ್ನೇಹಿತರ ನಡುವೆ ಹಣದ ವ್ಯವಹಾರ (Business) ಜಗಳ ತಂದಿಟ್ಟಿತ್ತು. ಎಣ್ಣೆ ಮತ್ತಿನಲ್ಲಿ ಬಿಡುಗಾಸಿಗೆ ಕಿತ್ತಾಡಿದ ಗೆಳೆಯರ ನಡುವೆ ದುರಂತವೇ ನಡೆದಿದೆ. ಹೌದು, ಮೇ 13, ಮತ ಎಣಿಕೆ (Vote Counting) ದಿನ. ಬೆಂಗಳೂರಿನ (Bengaluru) ಮತ ಎಣಿಕೆ ಮಾಡುವ ದಿನ. ಬೆಂಗಳೂರಿನ ಪೊಲೀಸರು (Police) ಮತಗಟ್ಟೆ ಬಳಿ ಸರ್ಪಗಾವಲು ಹಾಕಿದ್ದರು. ಅದಕ್ಕೂ ಮೊದಲು ಮೇ 12ರ ಮಧ್ಯರಾತ್ರಿ ಬೆಂಗಳೂರಿನಲ್ಲಿ ಭೀಕರ ಕೊಲೆ (Murder) ನಡೆದಿತ್ತು. ಜೆಜೆ ನಗರದ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಆರೇಳು ಮಂದಿ ಬರ್ಬರವಾಗಿ ಕೊಲೆ ಮಾಡಿದ್ದರು.
ಕೊಲೆ ಹಿಂದಿನ ಅಸಲಿ ಕಾರಣ ಪತ್ತೆ
ಜೆಜೆ ನಗರ ನಿವಾಸಿ ಜಬೂ ಉಲ್ಲಾ ಎಂಬಾತನನ್ನು ಪೈಪ್ ಲೈನ್ ರಸ್ತೆಯ ರೈಲು ಹಳಿ ಬಳಿಯ ಆಯಿಲ್ ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಮಧ್ಯರಾತ್ರಿ 12 ಗಂಟೆಗೆ ದಾಳಿ ಮಾಡಿದ ಹಂತಕರು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಜೆಜೆ ನಗರ ಪೊಲೀಸರು, ಕೃತ್ಯ ಎಸಗಿದ ಏಳು ಮಂದಿ ಆರೋಪಿ ಬಂಧಿಸಿ, ಕೊಲೆ ಹಿಂದಿನ ಅಸಲಿ ಕಾರಣ ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: Crime News: ಉದ್ಘಾಟನೆಗೆ ಸಿದ್ಧವಾಗಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್ ಮರ್ಡರ್; ಬೆಚ್ಚಿಬಿದ್ದ ತೀರ್ಥಹಳ್ಳಿ ಮಂದಿ
ಮೇ 12ರ ರಾತ್ರಿಯಂದು ಗಲಾಟೆ
ಅನ್ಸರ್, ತೌಸಿಫ್, ನಯೀಮ್, ಇಮ್ರಾನ್, ಶೇಕ್, ಮುಬಾರಕ್, ಫಕ್ರಾ ಹಾಗೂ ಅಬೂಬಕರ್ ಸಿದ್ದಿಕಿ ಕೊಲೆ ಆರೋಪಿಗಳು. ಕೊಲೆಯಾದ ಜಬೀ ಹಾಗೂ ಆರೋಪಿ ಅನ್ಸರ್ ಮೊದಲಿನಿಂದ ಆತ್ಮೀಯ ಗೆಳೆಯರು. ಈ ಹಿಂದೆ ಸಣ್ಣ ಗಾಡಿ ಒಡಿಸಿಕೊಂಡಿದ್ದ ಜಬೀಗೆ ಆರ್ಥಿಕವಾಗಿ ಸಮಸ್ಯೆ ಇತ್ತು.
ಹೀಗಾಗಿಯೇ ಅನ್ಸರ್ ಕ್ಯಾಂಟರ್ ಗಾಡಿ ಕೊಡಿಸಿ ತಿಂಗಳಿಗೆ 10 ಸಾವಿರ ನೀಡುವಂತೆ ಹೇಳಿದ್ದ. ಆದರೆ ಜಬೀ, ಮೊದಲ ತಿಂಗಳು ಹಣ ಕಟ್ಟಿ ಎರಡನೇ ತಿಂಗಳ ಅರ್ಧ ಹಣ ಕಟ್ಟಿದ್ದ. ಇನ್ನು ಉಳಿದ ಹಣ ಕಟ್ಟುವ ವಿಚಾರಕ್ಕೆ ಕೊಂಚ ತಕರಾರು ಮಾಡಿದ್ದನಂತೆ. ಇದೇ ವಿಚಾರವಾಗಿ ಮೇ 12ರ ರಾತ್ರಿಯಂದು ಗಲಾಟೆ ನಡೆದಿದ್ದು, ಈ ವೇಳೆ ಕೊಲೆ ನಡೆದಿದೆ.
ಕೊಲೆ ಮಾಡಿದ ಬಳಿಕ ಜಬೀ ಸಹೋದರನಿಗೆ ಕರೆ ಮಾಡಿದ್ದ ಅನ್ಸರ್, ನಾನೇ ಹಲ್ಲೆ ಮಾಡಿದ್ದು. ನಿನ್ನ ತಮ್ಮನ ಆಸ್ಪತ್ರೆಗೆ ಸೇರಿಸು ಅಂತ ಹೇಳಿದ್ದನಂತೆ. ಈ ಮಾಹಿತಿ ಸಿಗುತ್ತಿದ್ದಂತೆ ಜೆಜೆ ನಗರ ಪೊಲೀಸರು ಕೊಲೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಗೆಳೆಯ ಕಷ್ಟದಲ್ಲಿದ್ದಾಗ ಸಹಾಯ ಮಾಡಿ, ಸಣ್ಣ ಮೊತ್ತಕ್ಕೆ ಆತನನ್ನೇ ಕೊಂದಿದ್ದು ದುರಂತ ಸಂಗತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ