ಬೆಂಗಳೂರು: ಲಂಚಕ್ಕೆ (Bribe) ಬೇಡಿಕೆ ಇಟ್ಟು ಹಣ (Money) ಪಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳಾ ಪಿಎಸ್ಐ (PSI), ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನ ಪೂರ್ವ ವಿಭಾಗ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆ (Shivaji Nagar womens Police Station ) ಪಿಎಸ್ಐ ಸವಿತಾ ಲೋಕಾಯುಕ್ತ ಬಲೆ ಬಿದ್ದ ಪಿಎಸ್ಐ ಆಗಿದ್ದಾರೆ. ಜಾಮೀನು ನೀಡುವ ವಿಚಾರಕ್ಕೆ ಪಿಎಸ್ಐ ಸವಿತಾ 50 ಸಾವಿರ ಲಂಚಕ್ಕೆ ಬೇಡಿಗೆ ಇಟ್ಟು, ಕೊನೆಗೆ 15 ಸಾವಿರ ರೂಪಾಯಿ ಡೀಲ್ ಮಾಡಿ ಹಣ ಪಡೆಯುವ ಸಂದರ್ಭದಲ್ಲಿ ಪಿಎಸ್ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಏನಿದು ಪ್ರಕರಣ?
ಪ್ರಕರಣವೊಂದರಲ್ಲಿ ಆನಂದ್ ಕುಮಾರ್ ಎಂಬ ಆರೋಪಿಯ ಜಾಮೀನು ಅಂಗೀಕಾರ ಮಾಡಲು 50 ಸಾವಿರ ರೂಪಾಯಿಗೆ ಪಿಎಸ್ಐ ಸವಿತಾ ಬೇಡಿಕೆ ಇಟ್ಟಿದ್ದರಂತೆ. ಆದರೆ ಆತ 50 ಸಾವಿರ ನೀಡಲು ಆಗೋದಿಲ್ಲ ಅಂತ ಹೇಳಿದ್ದಾಗ 20 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ.
ಇದನ್ನೂ ಓದಿ: Bengaluru: ವಿಧಾನಸೌಧದ ಎದುರೇ ಯುವತಿಯ ಅಪಹರಣಕ್ಕೆ ಯತ್ನ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಿಡ್ನ್ಯಾಪರ್ಸ್!
ಇದರಿಂದ ಆತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಪಿಎಸ್ಐ ಅವರನ್ನು ಬಲೆಗೆ ಕೆಡವಿದ್ದಾರೆ. ನಿನ್ನೆ 10 ಸಾವಿರ ರೂಪಾಯಿ ಹಣವನ್ನ ನೀಡಿದ್ದನಂತೆ. ಇಂದು ಮತ್ತೆ 5 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದ ವೇಳೆ ಹಣದ ಸಮೇತ ಪಿಎಸ್ಐ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಈ ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರು ಮೂವರನ್ನು ಬಂಧನ ಮಾಡಿದ್ದಾರೆ. A1 ಶೋಭಾ ತಳವಾರ್ ಪಿಸಿ, A2 ಸವಿತಾ ಕನಮಡಿಪಿಎಸ್ ಐ, A4 ಸೋಮಶೇಖರ್ ಹೆಡ್ ಕಾನ್ಸ್ ಸ್ಟೇಬಲ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸರ ಬಂಧನದ ಬಳಿಕ ಲೋಕಾಯುಕ್ತ ಪೊಲೀಸರು ಬಂಧಿತರ ವಿಚಾರಣೆ ನಡೆಸಿದ್ದಾರೆ. ನಾಳೆ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ