ಬೆಂಗಳೂರು: ನಗರದ (Bengaluru) ರಾಜಾನುಕುಂಟೆ ಪೊಲೀಸ್ ಠಾಣಾ (Rajanakunte Police Station) ವ್ಯಾಪ್ತಿಯಲ್ಲಿ ಪ್ರೀತಿ ವಿಚಾರಕ್ಕೆ ಇಬ್ಬರು ಯುವತಿಯರ ಹತ್ಯೆಯಾಗಿತ್ತು. ಪ್ರೆಸಿಡೆನ್ಸಿ ಕಾಲೇಜು ಆವರಣದಲ್ಲಿ (Presidency College) ಹತ್ಯೆ ಮಾಡಿದ್ದ ಆರೋಪಿ ಸದ್ಯ ಸಾವಿನಿಂದ ಬಚಾವ್ ಆಗಿದ್ದಾನೆ. ಪ್ರೇಯಸಿಯನ್ನು ಕೊಂದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಪವನ್ ಕಲ್ಯಾಣ್ (Pawan Kalyan), ಇದೀಗ ಚಿಕಿತ್ಸೆ ಪಡೆದು ಗುಣವಾಗಿದ್ದಾನೆ. ಅಲ್ಲದೇ ಲಯಸ್ಮಿತಾ ಕೊಲೆಗೆ ಕಾರಣ ಏನು ಅನ್ನೋದನ್ನು ಕೊಟ್ಟಿದ್ದಾನೆ. ಸಾವಿನ ದವಡೆಯಿಂದ ಪಾರಾದ ಪವನ್ ಕಲ್ಯಾಣ್, ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್ ಆಗುತ್ತಿದ್ದಂತೆ ರಾಜಾನುಕುಂಟೆ ಪೊಲೀಸ್ ಠಾಣಾ ಪೊಲೀಸರು ಆರೋಪಿಯನ್ನು ಬಂಧನ (Arrest) ಮಾಡಿದ್ದಾರೆ.
ಆಸ್ಪತ್ರೆಯಿಂದ ರಿಲೀಸ್, ಖಾಕಿ ಬಲೆಯಲ್ಲಿ ಅಂದರ್!
ಅಂದು ಬೆಂಗಳೂರಿನ ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ಲಯಸ್ಮಿತಾ ಎಂಬಾಕೆಯನ್ನು ಪವನ್ ಕಲ್ಯಾಣ್ ಬರ್ಬರವಾಗಿ ಕೊಲೆಗೈದಿದ್ದ. ಬಳಿಕ ಜೊತೆಗೆ ತಾನೂ ಕೂಡ ಚಾಕುವಿನಿಂದ ಇರಿದುಕೊಂಡು ಸಾಯುವುದಕ್ಕೆ ಮುಂದಾಗಿದ್ದ. ಆದರೆ ಪವನ್ ಕಲ್ಯಾಣ್ನನ್ನು ರಕ್ಷಣೆ ಮಾಡಿ ಕಾಲೇಜು ಸೆಕ್ಯೂರಿಟಿ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡುವ ಕೆಲಸ ಮಾಡಿದ್ದರು. ಇದೀಗ ಎರಡು ವಾರಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾನೆ. ಆರೋಪಿ ಪವನ್ ಕಲ್ಯಾಣ್ನನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Bengaluru: ಆರು ವರ್ಷಗಳ ಪ್ರೀತಿಗೆ ಬ್ರೇಕ್ಅಪ್; ಮನನೊಂದು ಸಾವಿಗೆ ಶರಣಾದ ಯುವಕ
ನನ್ನನ್ನು ಬಿಟ್ಟು ಬೇರೆಯವರ ಜೊತೆ ಸುತ್ತಾಡ್ತಿದ್ಲು!
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಆರೋಪಿಯನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದರು. ಆ ಬಳಿಕ ವಿಚಾರಣೆಗೆ ಒಳಪಡಿಸಿ ಕೊಲೆ ಮಾಡಿದ್ದಕ್ಕೆ ಕಾರಣ ಕೇಳಿದ್ದಾರೆ. ಮೂರು ವರ್ಷ ಪ್ರೀತಿ ಮಾಡಿದ ಲಯಸ್ಮಿತಾ, ಕಾಲೇಜು ಸೇರಿದ ಮೇಲೆ ಬೇರೊಬ್ಬರ ಜೊತೆ ಓಡಾಡಿದರೆ ಬಿಡ್ಬೇಕಾ ಸರ್ ಎಂದು ಮರುಪ್ರಶ್ನೆ ಮಾಡಿದ್ದಾನೆ ಎನ್ನಲಾಗಿದೆ.
ಮೆಜೆಸ್ಟಿಕ್ ಡಿ ಮಾರ್ಟ್ನಲ್ಲಿ ಚಾಕು ಖರೀದಿಸಿದ್ದ ಆರೋಪಿ
ನಾನು ಹಾಗೂ ಆಕೆ 3 ವರ್ಷಗಳಿಂದ ಪ್ರೀತಿಸಿದ್ದೆವು. ಆಕೆಯೂ ನನ್ನನ್ನು ಒಪ್ಪಿದ್ದಳು. ಆದರೆ ಇತ್ತೀಚೆಗೆ ಆಕೆಯ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತು. ನನ್ನನ್ನು ದೂರ ಮಾಡಿ ದಿಢೀರ್ ಅಂತ ‘ನೀನು ಇಷ್ಟ ಇಲ್ಲ’ ಅಂತ ಹೇಳಿದ್ದಳು. ಹೀಗಾಗಿ ನನಗೆ ಸಿಗದ ಪ್ರೀತಿ, ಯಾರಿಗೂ ಸಿಗ್ಬಾರ್ದು ಅಂತಾ ಕೊಲೆ ಮಾಡುವ ನಿರ್ಧಾರ ಮಾಡಿದೆ ಎಂದಿದ್ದಾನೆ ಎನ್ನಲಾಗಿದೆ.
ಇನ್ನು, ಯುವತಿಯ ಕೊಲೆ ಮಾಡಲು ಅಂತ ಮೆಜೆಸ್ಟಿಕ್ ಬಳಿಯ ಡಿ ಮಾರ್ಟ್ನಲ್ಲಿ ಹರಿತವಾದ ಚಾಕು ಖರೀಸಿದ್ದನಂತೆ. ಅವಳನ್ನು ಕೊಲ್ಲಬೇಕು ತಾನೂ ಸಾಯಬೇಕು ಅಂತ ಡಿಸೈಡ್ ಮಾಡಿ ಕಾಲೇಜಿನ ಕ್ಯಾಂಪಸ್ ಬಳಿ ಬಂದಿದ್ದೆ ಎಂದು ತಿಳಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Bengaluru: ತಂಗಿಗಾಗಿ ಹೆಂಡತಿಯ ಅಣ್ಣನನ್ನ ಚಾಕುವಿನಿಂದ ಚುಚ್ಚಿ ಕೊಲೆಗೈದ; ಭಾವನಿಂದಲೇ ಭಾಮೈದನ ಬರ್ಬರ ಹತ್ಯೆ
ಲಯಸ್ಮಿತಾಳನ್ನು ಕರೆದು ಮಾತನಾಡಿಸಿದರೂ ಅವಳು ನನ್ನನ್ನು ಕೆಟ್ಟದಾಗಿ ಬೈದ್ಲು. ಅದಕ್ಕೆ ಚಾಕುವಿನಿಂದ ಮನಬಂದಂತೆ ಚುಚ್ಚಿದೆ. ಅವಳಿಗಾಗಿ ಎದೆ ಮೇಲೆ ಹಾರ್ಟ್ ಸಿಂಬಲ್ ಹಾಕಿಸಿಕೊಂಡು ಅವಳ ಹೆಸರು ಹಚ್ಚೆ ಹಾಕಿಸಿದ್ದೆ. ಅದೇ ಜಾಗದಲ್ಲಿ ಚುಚ್ಚಿಕೊಂಡು ಸಾಯಲು ಮುಂದಾಗಿದ್ದೆ. ಆದರೆ ನಾನು ಸಾಯಲಿಲ್ಲ ಅಂದಿದ್ದಾನಂತೆ.
ಪ್ರೀತಿ ಆಗೋದು. ಪ್ರೀತಿ ನಟ್ಟ ನಡುವೆ ಬಿಟ್ಟು ಹೋಗೋದು ಇತ್ತೀಚಿಗೆ ಕಾಮನ್. ಆದರೆ ಪ್ರೀತಿಯಲ್ಲಿ ತ್ಯಾಗ ಇರ್ಬೇಕೇ ಹೊರತು ದ್ವೇಷ ಅಲ್ಲ. ಇದನ್ನು ಅರ್ಥ ಮಾಡಿಕೊಳ್ಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ