ಬೆಂಗಳೂರು: ಮನೆಗೆ ಬಾಡಿಗೆ (Rent House) ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಮಾಲೀಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ರಾಬರಿ (Robbery) ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನ (Bengaluru) ನಂದಿನಿ ಲೇಔಟ್ ಠಾಣಾ (Nandini Layout Police Station) ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನದ ವೇಳೆಗೆ ಇಬ್ಬರು ಮಹಿಳೆಯರು ಮನೆ ಬಾಡಿಗೆ ಇದೆಯಾ ಅಂತ ಕೇಳಿ ಕೊಂಡು ಬಂದಿದ್ದು, ಈ ವೇಳೆ ಮನೆ ತೋರಿಸಲು ಒಳ ಹೋದ ಮಹಿಳೆ (Woman) ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆ ಸ್ಥಳದಲ್ಲೇ ಕುಸಿದು ಬಿದ್ದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಲೂಟಿ ಮಾಡಿ ಮಾಡಿದ್ದಾರೆ.
ರಕ್ತ ಸುರಿಸಿಕೊಂಡು ಮನೆಯಿಂದ ಹೊರ ಬಂದ ಮಹಿಳೆ
ನಂದಿನಿಲೇಔಟ್ ಠಾಣಾ ವ್ಯಾಪ್ತಿಯ ಲಗ್ಗೆರೆಯ ಪಾರ್ವತಿ ನಗರದಲ್ಲಿ ಇಬ್ಬರು ಮಹಿಳೆಯರು ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದಿದ್ದರು. ಈ ವೇಳೆ ಮನೆಯನ್ನು ತೋರಿಸುವಂತೆ ಹೇಳಿದ್ದಾಳೆ, ಮನೆ ಮಾಲೀಕರಾದ ಶಾಂತಮ್ಮ, ಬಾಡಿಗೆ ಮನೆ ತೋರಿಸಲು ತೆರಳಿದ್ದರು. ಮನೆಯೊಳಗೆ ಹೋಗುತ್ತಿದ್ದಂತೆ ಕಟ್ಟಿಗೆ ಪೀಸ್ವೊಂದನ್ನು ತೆಗೆದುಕೊಂಡು ಮಾಲೀಕರ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ಮಾಡಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ರಕ್ತ ಚಿಮ್ಮಿದ್ದು, ಕೂಡಲೇ ದುಷ್ಕರ್ಮಿಗಳು ಮಹಿಳೆಯ ಕತ್ತಿನಲ್ಲಿದ್ದ ಚೈನ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: Mob Attack: ಬೇರೆ ಧರ್ಮದ ಯುವತಿಯ ಜೊತೆ ಸ್ನೇಹದ ಆರೋಪ, ಹಿಂದುತ್ವ ಪರ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!
ಶಾಂತಮ್ಮರ ಪತಿ ಕೋವಿಡ್ ನಿಂದ ಮೃತ ಪಟ್ಟಿದ್ದರು ನಂತರ ಒಬ್ಬರೇ ವಾಸವಿದ್ದರು. ನಾಲ್ಕು ಬಾಡಿಗೆ ಮನೆ ಹೊಂದಿದ್ದ ಶಾಂತಮ್ಮ ಅವರ ಎರಡು ಮನೆ ಖಾಲಿ ಇತ್ತು. ಖಾಲಿ ಇರುವ ಮನೆಗಳನ್ನು ಬಾಡಿಗೆಗೆ ಬೇಕು ಎಂದು ಇಬ್ಬರು ಮಹಿಳೆಯರು ಬಂದಿದ್ದರು.
ಸದ್ಯ ಗಾಯಗೊಂಡಿರುವ ಮಹಿಳೆಯನ್ನು ಸ್ಥಳೀಯರು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ದೌಡಾಯಿಸಿದ್ದಾರೆ. ಸದ್ಯ ಅಕ್ಕಪಕ್ಕದ ಮನೆಯವರಿಂದಲೂ ಮಾಹಿತಿ ಸಂಗ್ರಹ ಮಾಡುತ್ತಿರುವ ಪೊಲೀಸರಿಗೆ ಆರೋಪಿ ಮಹಿಳೆ ಹಲವು ದಿನಗಳಿಂದ ಬಾಡಿಗೆ ಮನೆ ಕೇಳಿಕೊಂಡು ಬರುತ್ತಿದ್ದರು. ಒಬ್ಬರೇ ಬಂದು ಮನೆ ಬಾಡಿಗೆ ಬಗ್ಗೆ ಕೇಳುತ್ತಿದ್ದರು. ಆದರೆ ಇಂದು ಇಬ್ಬರು ಒಟ್ಟಿಗೆ ಬಂದು ಕೃತ್ಯ ನಡೆಸಿದ್ದಾರೆ. ಬಳಿಕ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ