ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಾಯಿಗಳ ಕಾಟಕ್ಕೆ ಜನ ಬೇಸತ್ತಿದ್ದಾರೆ. ಹಾಗಂತ ನಾಯಿಗಳನ್ನು ಕ್ರೂರವಾಗಿ ಕೊಲ್ಲಲು ಯತ್ನಿಸುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಶುರುವಾಗಿದೆ. ಏಕೆಂದರೆ ಬೆಂಗಳೂರು ಕೆಲವು ದಿನಗಳಿಂದ ಈ ರೀತಿಯ ಅಮಾನವೀಯ ಕೃತ್ಯಗಳಿಗೆ ಸಾಕ್ಷಿಯಾಗಿದೆ. ರಾಮಮೂರ್ತಿನಗರ (Ramamurthy Nagar ) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತೀಚಿಗೆ ಜನರಲ್ಲಿ ಮಾನವೀಯತೆ, ಕರುಣೆ ಅನ್ನೋದು ಕಡಿಮೆ ಆಗಿದ್ಯಾ ಅನ್ನೋ ಅನುಮಾನ ಈ ದೃಶ್ಯ ನೋಡಿದವರಿಗೆ ಕಾಡುತ್ತದೆ. ಮೂಕ ಪ್ರಾಣಿಗಳ ಮೇಲೆ ಕಾರು, ಬೈಕ್ ಹತ್ತಿಸಿ ದರ್ಪ ತೋರುವ ಘಟನೆಗಳು ಸಾಮಾನ್ಯವಾಗಿ ಬಿಟ್ಟಿದೆ. ಮಲಗಿದ್ದ ನಾಯಿ ಮೇಲೆ ವ್ಯಕ್ತಿಯೊಬ್ಬ ಕಾರು (Car) ಹತ್ತಿಸಿದ್ದಾನೆ. ಬೆಂಗಳೂರಿನ ಹೊರಮಾವು (Horamavu) ಬಳಿಯ ಬಂಜಾರ ಲೇಔಟ್ನಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ನಿಲ್ಲದ ಅಮಾನವೀಯ ಕೃತ್ಯ
ಅಪಾರ್ಟ್ಮೆಂಟ್ ಮುಂಭಾಗದಲ್ಲಿ ನಾಯಿಯೊಂದು ಮಲಗಿತ್ತು. ಈ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ನಾಯಿಯ ಮೇಲೆಯೇ ಕಾರು ಹತ್ತಿಸಿದ್ದಾನೆ. ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ಪರಿಣಾಮ, ನಾಯಿಯ ಬೆನ್ನು ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದೆ.
ಇದನ್ನೂ ಓದಿ: Bengaluru: ಶೌಚಾಲಯಕ್ಕೆ ಹೋಗಿದ್ದಾಗ ಬ್ಯಾಗ್ನಲ್ಲಿತ್ತು ₹1 ಕೋಟಿ ಚಿನ್ನ; ಸಿನಿಮೀಯ ಶೈಲಿಯಲ್ಲಿ ಚಿನ್ನದ ಗಟ್ಟಿ ಕಳವು
ಅಲ್ಲದೆ ಆ ಶ್ವಾನ ನೋವಿನಿಂದ ನರಳಾಡುವ ದೃಶ್ಯ ನೋಡಿದ ಜನರು ಅಯ್ಯೋ ಪಾಪ ಎನ್ನುವಂತಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಸ್ಥಳೀಯರು ಸಿಸಿಟಿವಿ ವಿಡಿಯೋವನ್ನ ನಗರ ಪೊಲೀಸರಿಗೆ ಟ್ವಿಟರ್ನಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ರಾಮಮೂರ್ತಿನಗರ ಪೊಲೀಸರು ಕಾರು ಚಾಲಕನನ್ನ ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಈ ಘಟನೆ ಹೊಸದೇನು ಅಲ್ಲ, ಆದರೆ ಈ ರೀತಿಯ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಆಗ್ತಿಲ್ಲ ಅನ್ನೋದು ಪ್ರಾಣಿ ಪ್ರಿಯರ ಆರೋಪ. ಕೆಲವು ದಿನಗಳ ಹಿಂದೆ ನಟಿ ರಮ್ಯಾ ಕೂಡ ಈ ರೀತಿಯ ಘಟನೆಗಳ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿ, ಪ್ರಾಣಿಗಳ ಬಗ್ಗೆ ಕರುಣೆ ಇರಲಿ ಎಂದಿದ್ದರು.
ನಾಯಿಗಳು ಕೂಡ ಮಾಂಸದ ಅಂಗಡಿಗಳು ಬಿಸಾಡುವ ವೇಸ್ಟ್ನಿಂದ ಮಾನವರ ಮೇಲೆಯೇ ದಾಳಿ ನಡೆಯುತ್ತಿರುವ ಘಟನೆಗಳು ನಡೆಯುತ್ತಿವೆ. ಬಿಬಿಎಂಪಿ ಈ ಬಗ್ಗೆ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಜನ.
ಒಂದು ತಿಂಗಳ ಅವಧಿಯಲ್ಲಿ ಬೀದಿ ನಾಯಿಗಳ ದಾಳಿಗೆ ಎರಡು ಮಕ್ಕಳು ಬಲಿ
ಇತ್ತ, ತೆಲಂಗಾಣದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಮಕ್ಕಳು ಬೀದಿ ನಾಯಿಗಳ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಖಮ್ಮಂ ಹಾಗೂ ವಿಕಾರಾಬಾದ್ ಜಿಲ್ಲೆಗಳಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆರ. ಮನೆ ಎದುರು ಆಟವಾಡುತ್ತಿದ್ದ ಬಾಲಕ ಬಾನೋತ್ ಭರತ್ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ಕೂಡಲೇ ಪೋಷಕರು ಮಗುವನ್ನು ರಕ್ಷಣೆ ಮಾಡಿ ಸ್ಥಳೀಯರ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹೈದರಾಬಾದ್ಗೆ ಶಿಫ್ಟ್ ಮಾಡಲು ಹೇಳಿದ್ದರು. ಈ ವೇಳೆ ಬಸ್ನಲ್ಲಿ ಹೈದರಾಬಾದ್ಗೆ ಹೊರಟ್ಟಿದ್ದ ಬಾಲಕ ಮಾರ್ಗದ ನಡುವೆಯೇ ಸಾವನ್ನಪ್ಪಿದ್ದ.
ಇದಕ್ಕೂ ಕೆಲ ದಿನಗಳ ಮುನ್ನ ಹೈದರಾಬಾದ್ನಲ್ಲಿ 4 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ್ದ ಬೀದಿ ನಾಯಿಗಳ ಹಿಂಡು ದಾಳಿ ಮಾಡಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿದ್ದ. ಇದರ ಬೆನ್ನಲ್ಲೇ ಹೈದರಾಬಾದ್ನಲ್ಲೇ ಮತ್ತೋರ್ವ ಬಾಲಕ ಮೇಲೂ ನಾಯಿಗಳು ದಾಳಿ ಮಾಡಿದ್ದವು. ಈ ವೇಳೆ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಲಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ