ಬೆಂಗಳೂರು: ಚರಂಡಿ ಕ್ಲೀನ್ (Drainage Cleaning) ಮಾಡುವ ವಿಚಾರಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಸರ್ಜಾಪುರ ಸಮೀಪದ ಮುಗಳೂರಿನಲ್ಲಿ ಘಟನೆ ನಡೆದಿದೆ. ಲೇಔಟ್ನ ಚರಂಡಿಯಲ್ಲಿ ನೀರು (Water) ನಿಂತ ಕಾರಣ ಸೊಳ್ಳೆಗಳು ಹೆಚ್ಚಾಗಿದ್ದವು, ಲೇಔಟಿನ ಅಧ್ಯಕ್ಷರ ಸೂಚನೆ ಪಡೆದು ಜೆಸಿಬಿಯನ್ನು (JCB) ಕರೆಸಿ ಚರಂಡಿ ಕ್ಲೀನ್ ಮಾಡಲು ಒಂದು ಗುಂಪು ಮುಂದಾಗಿತ್ತು. ಅದೇ ವೇಳೆ ಸೈಟ್ ನಂಬರ್ 11ರ ವಾಸಿ ಗಿರೀಶ್ ಕೆಲಸಕ್ಕೆ ಹೋಗಲು ಬಂದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ದೊಣ್ಣೆಗಳಿಂದ ಎರಡು ಗುಂಪಿನವರು ಬಡಿದಾಟ ಮಾಡಿಕೊಂಡಿದ್ದಾರೆ.
ಅಸಲಿಗೆ ಆಗಿದ್ದೇನು?
ಚರಂಡಿಯಲ್ಲಿ ನೀರು ಕೊಟ್ಟಿಕೊಂಡ ಕಾರಣದಿಂದ ಸಂಪತ್ ಕುಮಾರ್ ಎಂಬಾತ ಜೆಸಿಪಿ ಕರೆಯಿಸಿ ಕ್ಲೀಸ್ ಮಾಡಿಸುತ್ತಿದ್ದನಂತೆ. ಇದೇ ವೇಳೆ ಸೈಟ್ ನಂಬರ್ 11ರ ವಾಸಿ ಗಿರೀಶ್ ಕೆಲಸಕ್ಕೆ ಹೋಗಲು ಬಂದಿದ್ದು, ದುರಸ್ತಿ ಕಾರ್ಯ ನೋಡಿ ಸ್ವಲ್ಪ ಸಮಯ ಕಾದಿದ್ದಾನೆ. ಈ ವೇಳೆ ಕೆಲಸ ಮಾಡಿಸುತ್ತಿದ್ದ ಸಂಪತ್ ಕುಮಾರ್ 10 ನಿಮಿಷ ಆಗುತ್ತದೆ ಕಾಯುವಂತೆ ಹೇಳಿದ್ದು, ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿತ್ತು ಎನ್ನಲಾಗಿದೆ.
ಇತ್ತ ಜಗಳ ಆರಂಭವಾಗುತ್ತಿದ್ದಂತೆ ಗಿರೀಶ್ ತನ್ನ ಮನೆಯವರನ್ನ ಸ್ಥಳಕ್ಕೆ ಕರೆಸಿಕೊಂಡಿದ್ದು, ಸ್ಥಳಕ್ಕೆ ಬಂದ ಮಮತಾ, ಸಂಜಯ್, ಸರೋಜಮ್ಮ ಎನ್ನುವವರು ಜಗಳ ಆರಂಭ ಮಾಡಿದ್ದರಂತೆ. ಇತ್ತ ಮಾತಿಗೆ ಮಾತು ಬೆಳೆದು ಸಂಜಯ್ ಹಲ್ಲೆ ಆಗಿದ್ದು, ಈ ಸಂದರ್ಭದಲ್ಲಿ ಗಿರೀಶ್ಗೆ ಸಂಜಯ್ ಎಂಬಾತ ಕಪಾಳ ಮೋಕ್ಷ ಮಾಡಿದ್ದನಂತೆ. ಇದೇ ವೇಳೆ ಜಗಳ ಬಿಡಿಸಲು ಬಂದ ಸುಧಿ ಮತ್ತು ವೆಂಕಟೇಶ್ ಎಂಬವರ ಮೇಲೂ ಹಲ್ಲೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ