• ಹೋಂ
 • »
 • ನ್ಯೂಸ್
 • »
 • Crime
 • »
 • Crime News: ಕಗ್ಗತ್ತಲ ರಾತ್ರಿಯಲ್ಲಿ ಫೀಲ್ಡ್​ಗೆ ಇಳಿದಿತ್ತು ಗ್ಯಾಂಗ್​! ಬೆಳಗ್ಗೆ ಅಂಗಡಿಗೆ ಬಂದವರಿಗೆ ಕಾದಿತ್ತು ಕಳ್ಳರ ಶಾಕ್​!

Crime News: ಕಗ್ಗತ್ತಲ ರಾತ್ರಿಯಲ್ಲಿ ಫೀಲ್ಡ್​ಗೆ ಇಳಿದಿತ್ತು ಗ್ಯಾಂಗ್​! ಬೆಳಗ್ಗೆ ಅಂಗಡಿಗೆ ಬಂದವರಿಗೆ ಕಾದಿತ್ತು ಕಳ್ಳರ ಶಾಕ್​!

ಮೂರು ಅಂಗಡಿಗಳಲ್ಲಿ ಕಳ್ಳತನ

ಮೂರು ಅಂಗಡಿಗಳಲ್ಲಿ ಕಳ್ಳತನ

ಕಳ್ಳತನಕ್ಕೆ ಇಳಿಯುವ ಮುನ್ನ ಈ ಖದೀಮರು ಸ್ಟೋರ್​ನಲ್ಲಿ ಯಾರಾದರೂ ಸೆಕ್ಯೂರಿಟಿ ಇದ್ದಾರಾ? ಇಲ್ವಾ? ಅಂತಾ ನೋಡುತ್ತಾರೆ. ಯಾರೂ ಇಲ್ಲ ಅಂತಾ ಗೊತ್ತಾಗಿದ್ದೇ ತಡ ಏಕಾಏಕಿ ಕಳ್ಳತನ ಮಾಡುತ್ತಾರೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಇವರು ನಾಲ್ಕು ಜನ (People), ಕಳ್ಳತನ (Theft) ಮಾಡುವುದೇ ಇವರ ಕಸುಬು. ರಾತ್ರಿ 2 ಗಂಟೆ ಬಳಿಕ ಫೀಲ್ಡಿಗೆ ಇಳಿಯುವ ಈ ಖದೀಮರು ಸ್ಟೋರ್ (Store), ಅಂಗಡಿ, ಶೋ ರೂಮ್​​ಗಳನ್ನು (Showroom) ಟಾರ್ಗೆಟ್​ ಮಾಡಿದ್ದರು. ಇದೇ ರೀತಿ ನಿನ್ನೆ ಕೂಡ ಅಖಾಡಕ್ಕೆ ಇಳಿದಿದ್ದ, ಈ ನಾಲ್ವರು ಮೂರು ಸ್ಟೋರ್ ಟಾರ್ಗೆಟ್ ಮಾಡಿದ್ದಾರೆ. ಮಧ್ಯರಾತ್ರಿ 2 ರಿಂದ 3 ಗಂಟೆ ಸಮಯ, ಎಲ್ಲಾ ಅಂಗಡಿಗಳು (Shop) ಬಂದ್ ಆಗಿ ರೋಡ್​ಗಳೆಲ್ಲಾ ಖಾಲಿ ಖಾಲಿ ಇರುವ ಹೊತ್ತು. ಈ ಸಮಯವನ್ನೇ ಗೋಲ್ಡನ್ ಟೈಮ್ (Golden Time) ಮಾಡಿಕೊಂಡಿದ್ದ ನಾಲ್ವರು ಕಳ್ಳರು ಬೆಂಗಳೂರಿನ (Bengaluru) ಯಲಹಂಕ ಭಾಗದಲ್ಲಿ ಕಳ್ಳತನಕ್ಕೆ ಸ್ಕೆಚ್​ ಹಾಕಿದ್ದರು.


ಮೂರು ಸ್ಟೋರ್​ಗಳಿಗೆ ಕನ್ನ


ಕಳ್ಳತನಕ್ಕೆ ಇಳಿಯುವ ಮುನ್ನ ಈ ಖದೀಮರು ಸ್ಟೋರ್​ನಲ್ಲಿ ಯಾರಾದರೂ ಸೆಕ್ಯೂರಿಟಿ ಇದ್ದಾರಾ? ಇಲ್ವಾ? ಅಂತಾ ನೋಡುತ್ತಾರೆ. ಯಾರೂ ಇಲ್ಲ ಅಂತಾ ಗೊತ್ತಾಗಿದ್ದೇ ತಡ ಏಕಾಏಕಿ ಕಳ್ಳತನ ಮಾಡುತ್ತಾರೆ. ಯಲಹಂಕ ನ್ಯೂ ಟೌನ್​ನ ಗಿರಿಯಾಸ್ ಶೋ ರೂಂ, ಚಪ್ಪಲಿ ಅಂಗಡಿ, ಐಷಾರಾಮಿ ಸೈಕಲ್ ಅಂಗಡಿ ಸೇರಿ ಮೂರು ಸ್ಟೋರ್​ಗಳಿಗೆ ನಿನ್ನೆ ಕನ್ನ ಹಾಕಿದ್ದಾರೆ.


ಮೂರು ಅಂಗಡಿಗಳಲ್ಲಿ ಕಳ್ಳತನ


ಇದನ್ನೂ ಓದಿ: Karnataka Election: ಯತ್ನಾಳ್​​, ಪ್ರಿಯಾಂಕ್​​ ಖರ್ಗೆಗೆ ಚುನಾವಣಾ ಆಯೋಗದಿಂದ ಶೋಕಾಸ್​ ನೋಟಿಸ್​


ಎರಡು ಅಂಗಡಿಗಳಲ್ಲಿ ಯಾವುದೇ ವಸ್ತುಗಳು ಸಿಕ್ಕಿಲ್ಲ


ಯಲಹಂಕ ನ್ಯೂಟೌನ್​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಮೂರು ಅಂಗಡಿಗಳ ಡೋರ್​​ ಹೊಡೆದಿರುವುದು ಕಂಡು ಬಂದಿದೆ. ಎರಡು ಅಂಗಡಿಗಳಲ್ಲಿ ಆರೋಪಿಗಳಿಗೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ಆದರೆ ಗಿರಿಯಾಸ್ ಸ್ಟೋರ್​ನಲ್ಲಿ ಮಾತ್ರ 10 ಸಾವಿರ ಕ್ಯಾಶ್​ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಗೊಂಡಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.


top videos  ಇನ್ನು ಬೆಳಗ್ಗೆ ಅಂಗಡಿ ಓಪನ್ ಮಾಡುವ ಅಂತಾ ಬಂದಿದ್ದ ಸಿಬ್ಬಂದಿಗೆ ಸ್ಟೋರ್​ಗಳಲ್ಲಿ ಕಳ್ಳತನ ಆಗಿರುವುದು ಗೊತ್ತಾಗಿದೆ. ಕೂಡಲೇ ನ್ಯೂಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಆಧರಿಸಿ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.

  First published: