• ಹೋಂ
 • »
 • ನ್ಯೂಸ್
 • »
 • Crime
 • »
 • Crime News: 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸತ್ತ ಕೇಸ್‌ಗೆ ಟ್ವಿಸ್ಟ್! ಬೆಂಗಳೂರಿಗೆ ಬರುವಾಗಲೇ ಸಾಯೋ ನಿರ್ಧಾರ ಮಾಡಿದ್ದಳಾ ಹುಡುಗಿ?

Crime News: 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸತ್ತ ಕೇಸ್‌ಗೆ ಟ್ವಿಸ್ಟ್! ಬೆಂಗಳೂರಿಗೆ ಬರುವಾಗಲೇ ಸಾಯೋ ನಿರ್ಧಾರ ಮಾಡಿದ್ದಳಾ ಹುಡುಗಿ?

ಮೃತ ಯುವತಿ ಆಯೇಶಾ

ಮೃತ ಯುವತಿ ಆಯೇಶಾ

ಡೆತ್‌ನೋಟ್‌ ಬರೆದಿರುವ ಆಯೇಶಾ ಏಪ್ರಿಲ್ 24ನೇ ದಿನಾಂಕ ನಮೂದಿಸಿದ್ದಾಳೆ. ಹೀಗಾಗಿ ಬೆಂಗಳೂರಿಗೆ ಬರುವಾಗಲೇ ಸಾಯುವ ನಿರ್ಧಾರ ಮಾಡಿದ್ದಳ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಸಿರ್ಸಿ ಸರ್ಕಲ್ ಪೊಲೀಸ್ ಕ್ವಾಟ್ರರ್ಸ್ (Police Quarters) ಕಟ್ಟಡದ ಮೇಲಿಂದ ಯುವತಿ ಬಿದ್ದು ಸಾವು ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದ್ದು, ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ (Cottonpet Police Station) ಠಾಣೆಯಲ್ಲಿ ಯುವತಿ ತಂದೆ ರೆಹಮತ್ ಖಾನ್ ದೂರು ನೀಡಿದ್ದಾರೆ. ದೂರಿನಲ್ಲಿ ತಮ್ಮ ಮಗಳ ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದಹಾಗೇ, ಬಳ್ಳಾರಿಯಲ್ಲಿ (Bellary) ಭೀಮೇಶ್ ನಾಯಕ್ ಮತ್ತು ಆಯೇಶಾ ಪರಿಚಯವಾಗಿತ್ತು. ಪರೀಕ್ಷೆಗೆ ಹೋದಾಗ ಇಬ್ಬರ ಮಧ್ಯೆ ಸ್ನೇಹ (Friendship) ಶುರುವಾಗಿತ್ತು.


ಅದೇ ಸ್ನೇಹ ನಂತರ ಪ್ರೀತಿಗೆ ತಿರುಗಿ ದೈಹಿಕ‌ ಸಂಬಂಧದ ವರೆಗೂ ಬಂದಿತ್ತು. ಅಷ್ಟೇ ಅಲ್ಲದೇ 2021 ರಲ್ಲಿ ಮೃತ ಯುವತಿ ಆಯೇಶಾ, ಬಸವನಗುಡಿಯಲ್ಲಿ (Basavanagudi) ಭೀಮೇಶ್ ಮೇಲೆ ಪೋಕ್ಸೊ ಕೇಸ್ (POCSO Case ) ನೀಡಿದ್ದರು. ನಂತರ ಭೀಮೇಶ್ ಬಂಧಿಸಿ ಮೂರು ತಿಂಗಳು ಜೈಲಿಗೆ ಕಳುಹಿಸಲಾಗಿತ್ತು. ಆದರೆ ಕೇಸ್ ಹೈಕೋರ್ಟ್​​ನಲ್ಲಿ (High Court) ಕೇಸ್ ಸ್ಕ್ವಾಶ್ ಆಗಿತ್ತು. ಇದಾದ ಬಳಿಕವೂ ಇಬ್ಬರ ಮಧ್ಯೆ ಸಂಬಂಧ ಮುಂದುವರೆದಿದೆ ಎನ್ನಲಾಗಿದೆ.


ಕಟ್ಟಡದಿಂದ ಹಾರಿದ ವಿದ್ಯಾರ್ಥಿನಿ ಸಾವು (ಸಾಂದರ್ಭಿಕ ಚಿತ್ರ)


ಇದನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ಮಳೆ ಆರಂಭ; ರಾಜ್ಯದಲ್ಲಿ ಇನ್ನು ನಾಲ್ಕು ದಿನ ಮಳೆ, ಯಲ್ಲೋ ಅಲರ್ಟ್​​​!


ಅಸಲಿಗೆ ಆಗಿದ್ದೇನು?


ಮಂಗಳೂರಿನಿಂದ ಬಂದು ಭೀಮೇಶ್ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಆಯೇಶಾ, ನಿನ್ನೆ ಬೆಳಗ್ಗೆ ಭೀಮೇಶ್ ಬಳ್ಳಾರಿಗೆ ಹೊರಟಿದ್ದರು. ಆಯೇಶಾ ಕೂಡ ಮಂಗಳೂರಿಗೆ ಹೋಗಲು ಮುಂದಾಗಿದ್ದಳು. ಮೆಜೆಸ್ಟಿಕ್ ವರೆಗೂ ಹೋಗಿ ಮತ್ತೆ ಮನೆಗೆ ವಾಪಸ್ಸಾಗಿದ್ದಾಳೆ. ವಾಪಸ್ ಬಂದು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಶರಣಾಗಿದ್ದಳು. ಸದ್ಯ ಡೆತ್ ನೋಟ್ ಆಯೇಶಾ ಬಳಿ ಸಿಕ್ಕಿದ್ದು, ಡೆತ್ ನೋಟ್ ಅನ್ನು ಪೊಲೀಸರು ಎಫ್ಎಸ್ಎಲ್ ಗೆ ಕಳುಹಿಸಿದ್ದಾರೆ. ಡೆತ್ ನೋಟ್ ಹ್ಯಾಂಡ್ ರೈಟಿಂಗ್ ಆಯೇಶಾಳದ್ದೇನಾ ಅನ್ನೋದು ಪರಿಶೀಲನೆ ನಡೆಸಿದ್ದಾರೆ.


ಹೌದು, ಮೃತ ಯುವತಿ ಆಯೇಶಾ ಮೂಲತಃ ಬಳ್ಳಾರಿ ಮೂಲದವರು, ಮಂಗಳೂರಲ್ಲಿ ಓದುತ್ತಿದ್ದರು. ಆದರೆ ಬೆಂಗಳೂರಿನಲ್ಲಿ ಆಕೆಯ ಸಾವಾಗಿದೆ. ಇ‌ದೇ ಸಾವು ಈಗ ಹತ್ತಾರು ಅನುಮಾನ ಹುಟ್ಟು ಹಾಕಿದೆ‌. ನಿನ್ನೆ ಬೆಳಗ್ಗೆ 8:30 ಸುಮಾರಿಗೆ ಸಿರ್ಸಿ ಸರ್ಕಲ್‌ ಬಳಿಯ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಆತಂಕ ಸೃಷ್ಟಿಯಾಗಿತ್ತು. ಏಕೆಂದರೆ ಕಟ್ಟಡದ ಏಳನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿಯೊಬ್ಬಳು ಸೂಸೈಡ್ ಮಾಡಿಕೊಂಡಿದ್ದಳು. ಪೊಲೀಸರಿಗೆ ಸ್ಥಳದಲ್ಲಿ ಸಿಕ್ಕಿರುವ ಡೆತ್‌ನೋಟ್‌ ವಿದ್ಯಾರ್ಥಿನಿ ಸಾವಿನ ಬಗ್ಗೆ ಅನುಮಾನ ಮೂಡಿಸಿದೆ.
ಆಯೇಶಾ ಡೆತ್‌ನೋಟ್‌ನಲ್ಲಿ ಏನಿದೆ?


ನನ್ನ ಸಾವಿಗೆ ಕಾರಣ ಯಾರು ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದಿದೆ. ನಾನೇ ಸ್ವಇಚ್ಛೆಯಿಂದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್ ಮೇಲೆ‌ ದೂರು ನೀಡಿದ್ದೆ. ನಾನು ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟಿದ್ದೇನೆ. ಭೀಮೇಶ್ ನಾಯಕ್ ತುಂಬ ಸೂಕ್ಷ್ಮ ಮತ್ತು ಮುಗ್ಧ ವ್ಯಕ್ತಿ. ಅವರ ಮತ್ತು ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇರುವುದಿಲ್ಲ. ನಾನು ಮಾಡಿದ ಈ ಸುಳ್ಳು ಕೇಸ್‌ನಿಂದಾಗಿ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ.


ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ. ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಭೀಮೇಶ್ ನಾಯಕ್ ನನ್ನ ಆತ್ಮೀಯ ಸ್ನೇಹಿತ. ಆ್ಯಮ್ ವೆರಿ Sorry. .ಐ ಲವ್ ಯೂ ಸೋ ಮಚ್ ಭೀಮೇಶ್. ನೀನು ತುಂಬ ದೊಡ್ಡ ವ್ಯಕ್ತಿ ಆ ದೇವರು ನಿನಗೆ ಒಳ್ಳೆಯದು ಮಾಡಲಿ ಮುದ್ದು. ನಮ್ಮ ಅಪ್ಪನಿಗೆ SORRY ಹೇಳು ಭೀಮೇಶ್. I am very sorry ಭೀಮೇಶ್ ನಿನ್ನನ್ನ ಜೈಲಿಗೆ ಕಳಿಸಿದಕ್ಕೆ. ಅಪ್ಪ Sorry, ಅಪ್ಪ Love you, my family ಇಂತಿ‌ ನಿನ್ನ ಪ್ರೀತಿಯ ಆಯೇಶಾ ಬಿ.ಆರ್ ಎಂದು ಬರೆದುಕೊಂಡಿದ್ದಾಳೆ.


top videos  ಹೀಗೆ ಡೆತ್‌ನೋಟ್‌ ಬರೆದಿರುವ ಆಯೇಶಾ ಏಪ್ರಿಲ್ 24ನೇ ದಿನಾಂಕ ನಮೂದಿಸಿದ್ದಾಳೆ. ಹೀಗಾಗಿ ಬೆಂಗಳೂರಿಗೆ ಬರುವಾಗಲೇ ಸಾಯುವ ನಿರ್ಧಾರ ಮಾಡಿದ್ದಳ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ. ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿಜಕ್ಕೂ ಇದು ಆತ್ಮಹತ್ಯೆನಾ? ಅಥವಾ ಬೇರೆ ಏನಾದರು ಕಾರಣ ಇದೆಯಾ ತನಿಖೆಯಿಂದ ಗೊತ್ತಾಗಬೇಕಿದೆ.

  First published: