ಬೆಂಗಳೂರು: ಸ್ಕೆಚ್ ಹಾಕಿ ದೋಚುತ್ತಿದ್ದ ಮೂವರ ಖತರ್ನಾಕ್ ಖದೀಮರ ಗ್ಯಾಂಗ್ಅನ್ನು ಪೊಲೀಸರು (Police) ಲಾಕ್ ಮಾಡಿದ್ದಾರೆ. ಅಷ್ಟೇ ಅಲ್ಲ ಕೋಟಿ ಕೋಟಿ ಒಡವೆಯನ್ನ ವಾರಸುದಾರರಿಗೆ ನೀಡಿ ಪೊಲೀಸರು ಸೂಪರ್ (Super) ಕೆಲಸ ಮಾಡಿದ್ದಾರೆ. ಹೌದು, ಚಡ್ಡಿ ಹಾಕೊಂಡು, ಮುಖಕ್ಕೆ ಮಾಸ್ಕ್ (Face Mask) ಹಾಕೊಂಡು ಕಳ್ಳತನಕ್ಕಾಗಿ (Theft ) ಮನೆ ಕಾಂಪೌಂಡ್ ಹಾರಿ ಬರುವ ಖತರ್ನಾಕ್ ಗ್ಯಾಂಗ್ಅನ್ನು ಖಾಕಿಗೆ ಲಾಕ್ ಮಾಡಿದೆ. ಬೆಳಗ್ಗೆ ಹೊತ್ತು ಒಬ್ಬ ಏರಿಯಾದಲ್ಲಿ ಸುತ್ತಾಡಿಕೊಂಡು ಬಂದು ಗ್ಯಾಂಗ್ನ ಸದಸ್ಯರು ಮನೆಯನ್ನು ಗುರುತು ಮಾಡಿಕೊಳ್ಳುತ್ತಾರೆ. ನಂತರ ಎಲ್ಲರೂ ಸೇರಿಕೊಂಡು ಪ್ಲಾನ್ (Plan) ಮಾಡಿ ಅಂದು ರಾತ್ರಿನೇ (Night) ಕಳ್ಳತನಕ್ಕೆ ಇಳಿಯುತ್ತಾರೆ, ಇದನ್ನೇ ಆರೋಪಿಗಳು ಕಾಯಕವನ್ನಾಗಿ ಮಾಡಿಕೊಂಡಿದ್ದರು.
ಚಡ್ಡಿ ಹಾಕಿಕೊಂಡು ಟ್ರೇಡ್ ಮಾರ್ಕ್ ಮಾಡಿಕೊಂಡಿದ್ದರು
ಗ್ಯಾಂಗ್ ನ ಪ್ರಮುಖ ಆರೋಪಿ ಮುಜಾಭಾಯ್. ಗುಜರಾತ್ ಮೂಲದ ಈತ ತನ್ನ ಸಹೋದರನ ಜೊತೆಗೂಡಿ ಚಡ್ಡಿ ಗ್ಯಾಂಗ್ ಕೊಟ್ಟಿಕೊಂಡಿದ್ದ. ಬೆಂಗಳೂರು ಸೇರಿದಂತೆ ಹಲವು ಕಡೆ ಕಳ್ಳತನ ಮಾಡಿದ ಈ ಗ್ಯಾಂಗ್ ಎಲ್ಲಾ ಕೃತ್ಯಗಳನ್ನು ಚಡ್ಡಿ ಹಾಕಿಕೊಂಡು ಮಾಡಿ ಅದನ್ನೇ ಟ್ರೇಡ್ ಮಾರ್ಕ್ ಮಾಡಿಕೊಂಡಿದ್ದರು.
ಇನ್ನು ಇದೇ ರೀತಿ ಇತ್ತೀಚೆಗೆ ಬೆಂಗಳೂರು ಹಾಗೂ ಗ್ರಾಮಾಂತರದ ಎರಡು ಮನೆಯಲ್ಲಿ ಕೈಚಳಕ ತೋರಿ ಒಂದು ಕೆಜಿಯಷ್ಟು ಚಿನ್ನ ಕದ್ದು ಪರಾರಿಯಾಗಿದ್ದರು. ಗುಜರಾತ್ ಗೆ ಎಂಟ್ರಿ ಕೊಡುತಿದ್ದಂತೆ ಲಾಕ್ ಆಗಿದ್ದಾರೆ. ಬಳಿಕ ಗುಜರಾತ್ ಪೊಲೀಸರ ಮಾಹಿತಿ ಮೇರೆಗೆ ಬೆಂಗಳೂರು ಸಿಸಿಬಿ ಪೊಲೀಸರು ಮಾಲ್ ಸಮೇತ ಆರೋಪಿಗಳನ್ನು ಕರೆತಂದಿದ್ದಾರೆ.
ಬೀಗ ಹಾಕಿದ್ರೆ ಅದೇ ಮನೇನೆ ಇವಳ ಟಾರ್ಗೆಟ್!
ಇನ್ನು, ಚಡ್ಡಿ ಗ್ಯಾಂಗ್ದು ಒಂದು ಸ್ಟೋರಿಯಾದರೆ ಮಗುನ ಹಿಡಿಕೊಂಡು ಏರಿಯಾಗೆ ಎಂಟ್ರಿ ಕೊಟ್ಟು ಮನೆಗಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧನ ಮಡಿದ್ದಾರೆ. ಬೀಗ ಹಾಕಿರುವ ಮನೆಗಳೇ ಈ ಕಿಲಾಡಿ ಟಾರ್ಗೆಟ್ ಮಾಡುತ್ತಿದ್ದಳು. ಬೆಂಗಳೂರಿನ ಮನೆಗಳಲ್ಲಿ ದೋಚಿ ಏನು ಗೊತ್ತಿಲ್ಲದಂತೆ ತಮಿಳುನಾಡಿಗೆ ಎಸ್ಕೇಪ್ ಆಗುತ್ತಿದ್ದಳಂತೆ. ಸದ್ಯ ಪ್ರಕರಣವೊಂದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ತಮಿಳುನಾಡಿನಲ್ಲೇ ಕಳ್ಳಿಯನ್ನ ಬಂಧಿಸಿ, 350 ಗ್ರಾಂ ಚಿನ್ನ ವಶಕ್ಕೆ ಪಡೆದು, 5 ಪ್ರಕರಣ ಪತ್ತೆ ಹಚ್ಚಿದ್ದಾರೆ.
ಸಾಲು ಸಾಲು ಕಳ್ಳತನ ಮಾಡಿ ಮತ್ತೆ ಅರೆಸ್ಟ್!
ಮತ್ತೊಂದು ಕಡೆ ಅಮ್ಝದ್ ಎಂಬಾತ 2012 ರಲ್ಲಿ ಬಾಗಲೂರಿನ ಜೊಡಿ ಕೊಲೆಯಲ್ಲಿ ಜೈಲು ಸೇರಿದ್ದ. ಈತ ಬಿಡುಗಡೆ ಬಳಿಕ ಕಳ್ಳತನ ಚಾಳಿ ಆರಂಭಿಸಿದ್ದ. ತನ್ನ ಮೋಜಿನ ಜೀವನಕ್ಕೆ ಸಿಕ್ಕ ಸಿಕ್ಕ ಮನೆಗಳ ಕಳ್ಳತನ ಮಾಡುತ್ತಿದ್ದ, ಈತ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಈತನ ಬಂಧಿಸಿದ ಸಿಸಿಬಿ ಒಟ್ಟು 8 ಪ್ರಕರಣಗಳ ಪತ್ತೆ ಮಾಡಿದ್ದು 650 ಗ್ರಾಂ ನಷ್ಟು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಒಟ್ಟಾರೆ ಪ್ರತ್ಯೇಕ ಮೂರು ಕಿಲಾಡಿ ಕಳ್ಳರ ಬಂಧಿಸಿದ ಸಿಸಿಬಿ ಒಟ್ಟಾರೆ 15 ಪ್ರಕರಣಗಳ ಬೇಧಿಸುವುದರ ಜೊತೆಗೆ ಬರೋಬ್ಬರಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಆಭರಣಗಳನ್ನು ಖುದ್ದು ನಗರ ಪೊಲೀಸ್ ಆಯುಕ್ತರು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ