ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ನಿಂತಿದ್ದ ಬಿಎಂಟಿಸಿ ಬಸ್ಗೆ (BMTC) ಬೆಂಕಿ ತಗುಲಿ ಕಂಡಕ್ಟರ್ (Conductor) ಮುತ್ತಪ್ಪ ಸಜೀವ ದಹನ ಆಗಿದ್ದರು. ಆದರೆ ನಿಂತಿದ್ದ ಬಸ್ನಲ್ಲಿ ಶಾರ್ಟ್ ಸಕ್ಯೂಟ್ (Short Circuit) ಹೇಗಾಯಿತು ಅನ್ನೋದೆ ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಈ ಕೇಸ್ ಬಗ್ಗೆ ಖಾಕಿ ತೀವ್ರ ತನಿಖೆ ನಡೆಸುತ್ತಿದೆ. ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ (Byadarahalli Police Station) ಲಿಂಗದೀರನಹಳ್ಳಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿತ್ತು. ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆಯೋ ಇಲ್ಲವೋ ಅನ್ನೋ ಅನುಮಾನ ಮೂಡಿಸಿದೆ. ಬಸ್ ರಾತ್ರಿ 10:30ಕ್ಕೆ ನಿಲ್ದಾಣಕ್ಕೆ ಬಂದಿತ್ತು, ಇಂಜಿನ್ ಆಫ್ ಆಗಿತ್ತು. ಆದರೆ ಮುಂಜಾನೆ 4:26ರ ಸಮಯಕ್ಕೆ ಕೋಲ್ಡ್ ಆಗಿದ್ದ ಇಂಜಿನ್ ಹೇಗೆ ಶಾರ್ಟ್ ಸರ್ಕ್ಯೂಟ್ ಆಯ್ತು ಅನ್ನೋದು ಅನುಮಾನಕ್ಕೆ ಕಾರಣವಾಗಿದೆ. ಬಸ್ ಡ್ರೈವರ್ (Bus Driver) ಪ್ರಕಾಶ್ ಕೈವಾಡದ ಬಗ್ಗೆ ಅನುಮಾನ ಮೂಡಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಎಫ್ಎಸ್ಎಲ್ ರಿಪೋರ್ಟ್ ಜೊತೆ ತಜ್ಞರ ವರದಿ ಕೇಳಿದ ಪೊಲೀಸರು
ಅವಘಡ ನಡೆದ ದಿನ ಕೊಠಡಿಯಲ್ಲಿ ಮಲಗಿದ್ದ ಡ್ರೈವರ್ ಪ್ರಕಾಶ್ ಮುಂಜಾನೆ 3 ಗಂಟೆ ಹಾಗೂ 4 ಗಂಟೆಗೊಮ್ಮೆ ಎದ್ದಿರೋದು ಬಸ್ ನಿಲ್ದಾಣದಲ್ಲಿರೋ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಗೊತ್ತಾಗಿದೆ.
ಇದನ್ನೂ ಓದಿ: Crime News: ಸ್ನೇಹಿತನನ್ನು ಮನೆಗೆ ಕರೆದರೆ ಹೆಂಡತಿಯನ್ನೇ ಕರೆದೊಯ್ದ, ಪತ್ನಿ ಕೋಪ ಮಾಡಿಕೊಂಡಳೆಂದು ಮಗನನ್ನೇ ಕೊಂದ!
ಬಸ್ಸಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎನ್ನಲಾಗಿದೆ. ಆದರೂ ಬೆಳಗ್ಗಿನ ಜಾವ ಬಸ್ ನಿಂತಿದ್ದಾಗ ಹೊತ್ತಿಕೊಂಡಿದ್ದು ಹೇಗೆ? ಅದೇ ಸಮಯಕ್ಕೆ ಡ್ರೈವರ್ ಎದ್ದು ಹೊರ ಹೋಗಿದ್ದರ ಹಿಂದೆ ಏನಾದರೂ ಮಸಲತ್ತು ಇದ್ಯಾ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ.
Flagging off the "Pilot Trials of MD15" on the buses of BMTC & prototype launch of M100 Truck (100% Methanol) of Ashok Leyland, Bengaluru https://t.co/X2JUKExRvI
— Nitin Gadkari (@nitin_gadkari) March 12, 2023
ಇಂಗಾಲ ಮುಕ್ತ ಸಾರಿಗೆಯನ್ನು ಬಲಪಡಿಸಲು ಬಿಎಂಟಿಸಿ ಹೊಸ ಯೋಜನೆ
ಕೇಂದ್ರ ಭೂ ಸಾರಿಗೆ ಸಚಿವಾಲಯ ಮತ್ತು ನೀತಿ ಆಯೋಗದ ಸಹಯೋಗದಲ್ಲಿ ಡೀಸೆಲ್ ಮತ್ತು ಮೆಥನಲ್ (Methanol) ಮಿಶ್ರಿತ ಇಂಧನ ಬಳಕೆಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯ 10 ಬಿಎಂಟಿಸಿ ಬಸ್ (BMTC Bus) ಗಳನ್ನು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಲೋಕಾರ್ಪಣೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ, ನೀತಿ ಆಯೋಗದ ಸದಸ್ಯ ಡಾ. ವಿ. ಕೆ ಸಾರಸ್ವತ್, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಅಧ್ಯಕ್ಷ ಎಸ್ ಎಂ ವೈದ್ಯರವರು ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಅಶೋಕ್ ಲೇಲ್ಯಾಂಡ್ ಕಂಪನಿಯು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸಹಯೋಗದಲ್ಲಿ ತಯಾರಿಸಿರುವ ಬಸ್ ಗಳ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ