ಬೆಂಗಳೂರು: ಕರ್ತವ್ಯನಿರತ ಸರ್ಕಲ್ ಇನ್ಸ್ಪೆಕ್ಟರ್ (Circle Inspector) ಕತ್ತಿನ ಪಟ್ಟಿ ಹಿಡಿದು ಹಲ್ಲೆ ಮಾಡಿದ ಆರೋಪ ಮೇಲೆ ಬಿಜೆಪಿ (BJP) ಮಾಜಿ ಕಾರ್ಪೊರೇಟರ್ (Ex Corporator) ವಿ ಬಾಲಕೃಷ್ಣ ಎಂಬವರನ್ನು ಪೊಲೀಸರು (Bengaluru Police) ಬಂಧನ ಮಾಡಿದ್ದಾರೆ. ವಾರ್ಡ್ ನಂಬರ್ 185 ಯಲಚೇನಹಳ್ಳಿ ವಾರ್ಡ್ ಮಾಜಿ ಕಾರ್ಪೊರೇಟರ್ ಬಾಲಕೃಷ್ಣ ಅವರನ್ನು ರಾಮನಗರ ಜಿಲ್ಲೆ ಕಗ್ಗಲೀಪುರ ಪೊಲೀಸರು (Kaggalipura Police Station) ಬಂಧನ ಮಾಡಿದ್ದಾರೆ. ನಿನ್ನೆ ಸಂಜೆ ಘಟನೆ ನಡೆದಿದ್ದು, ಜಮೀನು ವ್ಯಾಜ್ಯ (Land litigation) ವಿಚಾರವಾಗಿ ಮಾತನಾಡಲು ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಜಿ ಕಾರ್ಪೊರೇಟರ್ ಬಾಲಕೃಷ್ಣ ವಿರುದ್ಧ ಐಪಿಸಿ ಸೆಕ್ಷನ್ 353 (ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ), ಐಪಿಸಿ ಸೆಕ್ಷನ್ 332 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಇಂದು ಆರೋಪಿ ಬಾಲಕೃಷ್ಣನನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಲಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡಲು ಕೋರ್ಟ್ಗೆ ಮನವಿ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: Crime News: ಲಯಸ್ಮಿತಾ ಹಂತಕ ಪವನ್ ಕಲ್ಯಾಣ್ ಸೇಫ್, ಆಸ್ಪತ್ರೆಯಿಂದ ಡಿಸ್ಚಾರ್ಜ್; ಕೊಲೆ ಹಿಂದಿನ ಕಾರಣ ಬಾಯ್ಬಿಟ್ಟ ಹಂತಕ
ಅಸಲಿಗೆ ಆಗಿದ್ದೇನು?
ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು ನಿನ್ನೆ ಸಂಜೆ ಕಗ್ಗಲೀಪುರ ಠಾಣೆಗೆ ಬಾಲಕೃಷ್ಣ ತೆರಳಿದ್ದರಂತೆ. ಇದೇ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಕುಮಾರ್ ಜೊತೆಗೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಕತ್ತಿನ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದರಂತೆ. ತಕ್ಷಣವೇ ಬಾಲಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ನೀಡಿದ ದೂರು ಆಧರಿಸಿ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಬಾಬ್ ಪೀಸ್ ಕಡಿಮೆ ಕೊಟ್ಟ ಅಂತ ಹೋಟೆಲ್ ಮಾಲೀಕನ ಮೇಲೆ ಹಲ್ಲೆ
ಬೆಂಗಳೂರಿನಲ್ಲಿ ಪುಂಡರ ಪುಂಡಾಟಿಕೆ ಮುಂದುವರಿದಿದೆ. ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದು ಹೋಟೆಲ್ ಮಾಲೀಕನಿಗೆ ಮನಬಂದಂತೆ ಗೂಸಾ ಕೊಟ್ಟ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಬಾಬ್ ಪಾರ್ಸೆಲ್ ಮಾಡಿಸಿ, ಪೀಸ್ ಕಡಿಮೆ ಇದೆ ಎಂದು ವಾಪಾಸ್ ಬಂದು ಕ್ಯಾತೆ ತೆಗೆದಿದ್ದಾರೆ. ಕೋಣನಕುಂಟೆ ಬಳಿಯ ಬಿರೇಶ್ವರ ನಗರದ ಮಾಲ್ಗುಡಿ ನಾನ್ ವೆಜ್ ಹೋಟೇಲ್ನಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಹೋಟೆಲ್ ಮಾಲೀಕ ಬಾಬು ಮೇಲೆ ಪುಂಡರ ಗ್ಯಾಂಗ್ ಹಲ್ಲೆ ಮಾಡಿದೆ.
ಇದನ್ನೂ ಓದಿ: Bengaluru: ಆರು ವರ್ಷಗಳ ಪ್ರೀತಿಗೆ ಬ್ರೇಕ್ಅಪ್; ಮನನೊಂದು ಸಾವಿಗೆ ಶರಣಾದ ಯುವಕ
ಅಭಿ ಮತ್ತು ಮನು ಸೇರಿ ನಾಲ್ವರು ಗ್ಯಾಂಗ್ ಹಿಗ್ಗಾಮುಗ್ಗಾ ಥಳಿಸಿದೆ. ಅಭಿ ಮತ್ತು ಮನು ಹೋಟೆಲ್ ಮಾಲೀಕನನ್ನು ಥಳಿಸುತ್ತಿರುವ ದೃಶ್ಯಾವಳಿ ಹೋಟೆಲ್ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಆರೋಪಿಗಳು ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಹೋಟೆಲ್ಗೆ ಒಂದು ಪ್ಲೇಟ್ ಕಬಾಬ್ ಅರ್ಡರ್ ಮಾಡಿದ್ದರಂತೆ. ಆದರೆ ಈ ವೇಳೆ 120 ರೂಪಾಯಿ ಕೊಡುವ ಬದಲು 90 ರೂಪಾಯಿ ಕೊಟ್ಟು ಜಗಳ ಆರಂಭ ಮಾಡಿದ್ದರಂತೆ. ಅಲ್ಲದೇ ನಾವು ಲೋಕಲ್ ಹುಡುಗರು ಅಂತ ಹೇಳಿ ಕೊಡ್ತೀವಿ ಎಂದಿದ್ದರಂತೆ. ಆದರೆ ಈಗಾಗಲೇ ಸಾವಿರ ರೂಪಾಯಿ ಬಾಕಿ ಇದೆ, ದಯವಿಟ್ಟು ಹಣ ಕೊಡಿ ಎಂದು ಕೇಳಿದಾಗ, ನೀನು ಕೊಟ್ಟ ಕಬಾಬ್ನಲ್ಲಿ 10 ಪೀಸ್ ಇರ್ಬೇಕಿತ್ತು 9 ಮಾತ್ರ ಇದೆ ಅಂತ ಹಲ್ಲೆ ಮಾಡಿದ್ದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ