ಬೆಂಗಳೂರು: ಕುದುರೆ (Horse) ಮೇಲೆ ಹತ್ತಿ ಸವಾರಿ (Riding) ಮಾಡಲು ಬಿಡಲಿಲ್ಲ ಎಂದು 15 ವರ್ಷದ ಬಾಲಕನನ್ನು (Boy) ದೊಣ್ಣೆಗಳಿಂದ ಹೊಡೆದು ಕೊಲೆಗೈದಿದ್ದ ಮೂವರು ಆರೋಪಿಗಳನ್ನು ಬೆಂಗಳೂರು (Bengaluru) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರನ್ನು ಸೈಯದ್ ಶೋಯೆಬ್, ಸುಹೇಲುಲ್ಲಾ ಷರೀಫ್, ಮಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಅಪ್ರಾಪ್ತ ಬಾಲಕನನ್ನು ಮನಸೋಇಚ್ಛೆ ಥಳಿಸಿ ಕೊಲೆಗೈದಿದ್ದರು. ಏಪ್ರಿಲ್ ಮೂರರಂದು ಬೆಂಗಳೂರಿನ ಕೆಜಿ ಹಳ್ಳಿ (KG Halli) ರೈಲು ಹಳಿ ಬಳಿ ಘಟನೆ ನಡೆದಿದೆ.
ಏನಿದು ಪ್ರಕರಣ?
ಏಪ್ರಿಲ್ ಮೂರರಂದು ಬೆಂಗಳೂರಿನ ಕೆಜಿ ಹಳ್ಳಿ ಬಳಿ ರೈಲು ಬಳಿ 15 ವರ್ಷದ ಬಾಲಕ ಸತೀಶ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದರು. ಆರೋಪಿಗಳ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಬಾಲಕನ ಕೊಲೆ ಹಿಂದಿನ ಕಾರಣವನ್ನು ಬಾಲಕರು ಬಿಚ್ಚಿಟ್ಟಿದ್ದರು.
ಏಪ್ರಿಲ್ ಮೂರರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೊಣ್ಣೆಗಳಿಂದ ಹಲ್ಲೆ ಮಾಡಿದ್ದರು. ಹೊಡೆತಗಳನ್ನು ತಡೆದುಕೊಳ್ಳಲಾಗದೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆ ಬಳಿಕ ಆತನ ಮೃತದೇಹವನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.
ಕೊಲೆಗೆ ಕಾರಣವೇನು?
ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಆರೋಪಿ ಸುಹೇಲುಲ್ಲಾ ಷರೀಫ್ ಕೃತ್ಯ ನಡೆಯುವ ಕೆಲ ದಿನಗಳ ಎದುರು ಬಾಲನೊಂದಿಗೆ ಜಗಳ ಮಾಡಿಕೊಂಡಿದ್ದ. ಮಾಸ್ಕ್ ರಸ್ತೆಯಲ್ಲಿ ಕುದುರೆ ಇಟ್ಕೊಂಡಿದ್ದ ಮೃತ ಬಾಲಕನ ಬಳಿ ಬಂದಿದ್ದ ಆರೋಪಿ ಕುದುರೆ ಮೇಲೆ ಕುರಿಸಿ ಸವಾರಿ ಮಾಡಲು ಕೇಳಿದ್ದನಂತೆ. ಈ ವೇಳೆ ಬಾಲಕ ಕುದುರೆ ಮೇಲೆ ದೊಡ್ಡವರನ್ನು ಕುರಿಸುವುದಿಲ್ಲ ಅಂತ ಸವಾರಿ ಮಾಡಲು ನಿರಾಕರಿಸಿದ್ದನಂತೆ. ಇದರಿಂದ ಕೋಪಗೊಂಡ ಆರೋಪಿ ಬಾಲಕನ ಕನ್ನೆಗೆ ಹೊಡೆದು ಹಲ್ಲೆ ಮಾಡಿದ್ದನಂತೆ.
ಈ ಘಟನೆ ನಡೆದ ಬಳಿಕ ಆರೋಪಿ ಸುಹೇಲುಲ್ಲಾ ಷರೀಫ್ ಹೊಟೇಲ್ ಬಳಿ ಇರುವುದನ್ನು ಬಾಲಕ ಸತೀಶ್ ನೋಡಿದ್ದನಂತೆ. ಅವತ್ತು ತನ್ನ ಮೇಲೆ ಹಲ್ಲೆ ಮಾಡಿದ್ದ ಷರೀಫ್ ನೋಡುತ್ತಿದ್ದಂತೆ ಬಾಲಕ ಸತೀಶ್ ತನ್ನ ಸ್ನೇಹಿತನೊಂದಿಗೆ ಸೇರಿ ಹಲಲ್ಲೆ ಮಾಡಿದ್ದನಂತೆ.
ಇದನ್ನೂ ಓದಿ: Crime News: ಬೆಂಗಳೂರಿಗರೇ ಹುಷಾರ್! ಲಕ್ಷ ಲಕ್ಷ ಬೆಲೆಬಾಳುವ ಕಾರುಗಳೇ ಖದೀಮರ ಟಾರ್ಗೆಟ್
ಇದರಿಂದ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದ ಆರೋಪಿ ಷರೀಫ್, ಏಪ್ರಿಲ್ ಮೂರರಂದು ಸ್ನೇಹಿತರ ಜೊತೆಗೂಡಿ ಬಾಲಕನನ್ನು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು. ಇನ್ನು, ಪ್ರಕರಣ ಬೇದಿಸಲು ಸುಮಾರು 60 ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಕೆಜಿ ಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ