ಬೆಂಗಳೂರು: ವೃತ್ತಿಯಲ್ಲಿ ಆಟೋ ಚಾಲಕ (Auto Driver), ಕಷ್ಟದ ಜೀವನದಲ್ಲೂ ಹಣ ಮಾಡುವ ಆಸೆಯಲ್ಲಿ ಸಣ್ಣಪುಟ್ಟ ಫೈನಾನ್ಸ್ (Finance) ಮಾಡುತ್ತಿದ್ದ. ಆದರೆ ಅದೇ ಆತನ ಜೀವನಕ್ಕೆ ಮುಳುವಾಗಿದೆ. ಕೊಟ್ಟ ಹಣ ವಾಪಸ್ (Money) ಕೇಳಿದ್ದಕ್ಕೆ ನಡುರಸ್ತೆಯಲ್ಲಿ ಹೆಣವಾಗಿ ಹೋಗಿದ್ದಾನೆ. ಕೊಲೆಯಾದ ಆಟೋ ಚಾಲಕನನ್ನು ಶೇಖರ್ ಎಂದು ಗುರುತಿಸಲಾಗಿದೆ. ಬಾಣಸವಾಡಿಯ (Banasavadi) ರಾಮಗೋಪಾಲ ನಗರ ನಿವಾಸಿಯಾಗಿದ್ದ, ಶೇಖರ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ ಜೊತೆಗೆ ಇತ್ತೀಚಿಗೆ ಒಂದಿಷ್ಟು ಫೈನಾನ್ಸ್ಗೆ ಹಣ ಕೊಡುತ್ತಿದ್ದನಂತೆ. ಆದರೆ ಮೊನ್ನೆ ರಾತ್ರಿ ಗೆಳೆಯರ ಜೊತೆ ಮಸ್ತ್ ಪಾರ್ಟಿ (Party) ಮಾಡಿಕೊಂಡು ಬರುವಾಗ ಮಧ್ಯರಾತ್ರಿ 12.30ರ ಸಮಯದಲ್ಲಿ ಮನೆ ಸಮೀಪವೇ ಕೊಲೆ ಆಗಿದ್ದಾನೆ.
ಪಾರ್ಟಿ ಮುಗಿಸಿ ಮನೆ ಕಡೆಗೆ ಹೊರಟ್ಟಿದ್ದ ಆಟೋ ಡ್ರೈವರ್
ಫೆಬ್ರವರಿ 7ರ ಸಂಜೆ ಹಲಸೂರಿಗೆ ತೆರಳಿದ್ದ ಶೇಖರ್ ಗೆಳೆಯರ ಜೊತೆ ಗುಂಡು ತುಂಡು ಪಾರ್ಟಿ ಮಾಡಿದ್ದನಂತೆ. ಈ ವೇಳೆ ಮನೋಜ್ ಎಂಬಾತನಿಗೆ ಕಾಲ್ ಮಾಡಿ, ಕರೆಸಿಕೊಂಡು ಹಣ ಕೇಳಿದ್ದನಂತೆ. ಪಾರ್ಟಿ ಮುಗಿಸಿ ಮನೆ ಕಡೆಗೆ ಪಲ್ಸರ್ ಬೈಕ್ನಲ್ಲಿ ಹೊರಟಿದ್ದಾಗ ಶೇಖರ್ನನ್ನು ಹಿಂಬಾಲಿಸಿ ಬೈಕ್ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ಚಾಕು ಇರಿದಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಕಾಪಾಡಿ ಕಾಪಾಡಿ ಅಂದ್ರು ಯಾರು ಸಹಾಯಕ್ಕೆ ಬಾರದೆ ಒದ್ದಾಡಿ ಸತ್ತ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಸ್ನೇಹಿತನಿಗೆ ಸಾಲ ಕೊಡಿಸಿದ್ದ ಯುವಕ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ; ಓರ್ವ ಪೊಲೀಸ್ ವಶಕ್ಕೆ
ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಶಂಕೆ
ಅಪ್ಪ ಕೊಟ್ಟಿದ್ದ ಹಣ ಹಾಗೂ ತಾನು ಆಟೋ ಓಡಿಸಿ ಸಂಪಾದನೆ ಮಾಡಿದ್ದ ಹಣದಲ್ಲಿ ಫೈನಾನ್ಸ್ ಆರಂಭಿಸಿದ್ದ ಅನ್ನೋ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ನಂಬಿಕಸ್ಥರಿಗೆ ಮಾತ್ರ ಹಣ ಕೊಡುತ್ತಿದ್ದ ಶೇಖರ್, ತನ್ನ ಸ್ನೇಹಿತನ ಮೂಲಕ ಪರಿಚಯ ಆದ ಮನೋಜ್ ಎಂಬಾತನಿಗೆ 50 ಸಾವಿರ ಹಣ ಕೊಟ್ಟಿದ್ದನಂತೆ. ಹಲವು ಬಾರಿ ಹಣ ಕೇಳಿದರೂ ಮನೋಜ್ ವಾಪಸ್ ಕೊಟ್ಟಿರಲಿಲ್ಲ ಎನ್ನಲಾಗಿದೆ.
ಇದೇ ವಿಚಾರವಾಗಿ ಸ್ನೇಹಿತರ ಜೊತೆಗೆ ಕುಡಿಯುತ್ತ ಕುಳಿತಿದ್ದಾಗ ಮಾತಾನಾಡಬೇಕು ಅಂತ ಕರೆಸಿ ಜಗಳ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಆ ಬಳಿಕ ಕೋಪದಲ್ಲಿ ಹಿಂಬಾಲಿಸಿ ಕೊಲೆ ಮಾಡಿದ್ರಾ ಎಂಬ ಶಂಕೆ ಪೊಲೀಸರಿಗೆ ಮೂಡಿದೆ.
ರಕ್ತದ ಮಡುವಿನಲ್ಲಿ ವ್ಯಕ್ತಿ ಬಿದ್ದು ಒದ್ದಾಡಿ ಸತ್ತ!
ಈ ಕುರಿತಂತೆ ಮಾಹಿತಿ ನೀಡಿರುವ ಪೂರ್ವ ವಿಭಾಗ ಡಿಸಿಪಿ ಭೀಮಾ ಶಂಕರ್ ಗುಳೇದ್, ರಾತ್ರಿ 12:30 ಸುಮಾರಿಗೆ ಕಂಟ್ರೋಲ್ ರೂಮಿಗೆ ಕರೆ ಬರುತ್ತೆ, ರಕ್ತದ ಮಡುವಿನಲ್ಲಿ ವ್ಯಕ್ತಿ ಬಿದ್ದು ಒದ್ದಾಡ್ತಾ ಇದ್ದಾನೆ ಅಂತ ತಿಳಿಸಿದ್ದರು. ತಕ್ಷಣವೇ ಹೊಯ್ಸಳ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗದ ನಡುವೆಯೇ ಆತ ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿ ಶೇಖರ್ ಅಂತ ಗೊತ್ತಾಗಿದೆ. ಕೊಲೆ ಆದ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಮನೆ ಇದೆ. ಪಲ್ಸರ್ ಬೈಕ್ ನಲ್ಲಿ ಬರುತ್ತಿದ್ದಾಗ ಬೈಕ್ ನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ನಂತರ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಶೇಖರ್ ಕೂಡ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಆದರೆ ಅಡ್ಡಾಡಿಸಿಕೊಂಡು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಮೇಲ್ನೋಟಕ್ಕೆ ಇಬ್ಬರಿಂದ ಕೃತ್ಯ ಆಗಿದೆ ಅನ್ನೋದು ಗೊತ್ತಾಗಿದೆ. ಸದ್ಯ ಬಾಣಸವಾಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಪತ್ನಿಗೆ ಸೀಮಂತ, ಸಂಭ್ರಮ ನಡೆಯುತ್ತಿದ್ದ ಮನೆ ರಣರಂಗ! ಅಸಲಿಗೆ ಆಗಿದ್ದೇನು?
ಸದ್ಯ ಕೊಲೆ ಕೇಸ್ ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ ಶೇಖರ್, ಹಣದ ಮೋಹಕ್ಕೆ ಬಿದ್ದು ಫೈನಾನ್ಸ್ ವ್ಯವಹಾರಕ್ಕೆ ಇಳಿದಿದ್ದು, ಬೀದಿ ಹೆಣ ಆಗುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ